ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನ ಉದ್ಘಾಟನೆ

Upayuktha
0

ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯ ಆಯೋಜಿಸಿದ ‘ವಿಶ್ವ ಸಂಸ್ಕೃತ ಸಮ್ಮೇಳನ’ವನ್ನು ಫೆಬ್ರವರಿ 24 ರಂದು ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ಉಡುಪಿ ಕಾಣಿಯೂರು ಮಠಾಧೀಶರಾದ ಜಗದ್ಗುರು ಶ್ರೀ ಮಧ್ವಚಾರ್ಯ ಮೂಲ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಶ್ರೀ ಡಾ.  ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.


ಮಾನವೀಯತೆಗೆ ಭಾರತೀಯ ಜ್ಞಾನ ಮತ್ತು ಸಂಸ್ಕೃತದ ಕೊಡುಗೆ ಎಂಬ ವಿಷಯದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯವು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ, ಭಾರತ ಸರ್ಕಾರದ ಹಸ್ತ ಪ್ರತಿಯ ರಾಷ್ಟ್ರೀಯ ಮಿಷನ್, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಆಫ್ ದಿ  ಆರ್ಟ್ಸ್, ನವದೆಹಲಿ, ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್‌ ಯೋಗ, ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಸಮ್ಮೇಳನವನ್ನು ಆಯೋಜಿಸಿದೆ. 


ಆಶೀರ್ವಚನ ನೀಡುತ್ತಾ ಕಾಣಿಯೂರು ಮಠಾಧೀಶರು ಮಾತನಾಡಿ, ಸಂಸ್ಕೃತ ಭಾಷಾ ಮಹತ್ವ ಹಾಗೂ ಪ್ರಪಂಚಕ್ಕೆ ಸಂಸ್ಕೃತದ ಕೊಡುಗೆ ಈ ಸಮ್ಮೇಳನದ ಮೂಲಕ ಇನ್ನಷ್ಟು ಜನರಿಗೆ ತಲುಪಲಿ. ವಿಶ್ವ ಸಂಸ್ಕೃತ ಸಮ್ಮೇಳನ ಆಯೋಜಿಸುವ ಮೂಲಕ ಸಂಸ್ಕೃತ ಭಾಷೆಗೆ ಹಾಗೂ ಸಂಸ್ಕೃತಿಗೆ ಡಾ. ಸಿಎ ಎ. ರಾಘವೇಂದ್ರರಾವ್ ಅವರ ಕೊಡುಗೆ ಅಭಿನಂದನಾರ್ಹ ಎಂದರು.


ಶಾಸಕ ಡಾ .ಭರತ್ ಶೆಟ್ಟಿ ಮಾತನಾಡಿ, ಎಲ್ಲರೂ ಹುಟ್ಟು ವಿಜ್ಞಾನಿಗಳು ನಮ್ಮ ಹಿರಿಯರು ಹಿಂದೆ ಮಾಡಿರುವ ಸಾಧನೆಗಳ ಸಂಶೋಧನೆಯಾಗಬೇಕು. ವಿದ್ಯಾರ್ಥಿಗಳಿಗೆ ಹಿರಿಯರು ಸಮಾಜಕ್ಕೆ ನೀಡಿರುವ ಸಾಧನೆ ಈ ಸಮ್ಮೇಳನದ ಮೂಲಕ ತಿಳಿಯುತ್ತಿರುವುದು ಸಂತೋಷ ಎಂದರು.


ಎನೆಎಂಪಿಎ ಅಧ್ಯಕ್ಷರಾದ ಡಾ. ವೆಂಕಟರಮಣ ಅಕ್ಕರಾಜು ಮಾತನಾಡಿ, ಸಂಸ್ಕೃತ ಭಾಷೆ ಕೇವಲ ಭಾಷೆಯಲ್ಲ ಇದು ವಿಜ್ಞಾನ – ತಂತ್ರಜ್ಞಾನದ ಭಾಷೆ ಹಾಗೂ ಅಖಂಡ ಭಾರತದ ಬೆನ್ನೆಲುಬು. ವಿದೇಶಿಯರು ಕೂಡಾ ಸಂಸ್ಕೃತ ಕೃತಿಗಳನ್ನು ಅಧ್ಯಯನ ನಡೆಸುತ್ತಾ ಸಂಶೋಧನೆ ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆ ಅಭಿನಂದನಾರ್ಹ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿಎಎ. ರಾಘವೇಂದ್ರ ರಾವ್ ಮಾತನಾಡಿ, ಶ್ರೀನಿವಾಸ ವಿಶ್ವವಿದ್ಯಾಲಯ ಸಂಸ್ಕೃತ ಭಾಷೆ ಬೆಳವಣಿಗೆಗೆ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ, ಮುಂದೆಯೂ ನೀಡಲಿದೆ.  ಸಂಸ್ಕೃತ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಸರಕಾರದಿಂದ ಭಾಷಾ ಬೆಳಣಿಗೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಸಂಸ್ಕೃತದಲ್ಲಿ ಯೋಚನೆಯನ್ನು ಅಭಿವೃದ್ಧಿಗೊಳಿಸಿ ಕಾರ್ಯಗತಕ್ಕೆ ತಂದಾಗ ಸಂಸ್ಕೃತ ಭಾಷೆಯು ನಿರರ್ಗಳವಾಗಿ ಎಲ್ಲರೂ ಕಲಿತು ಮಾತನಾಡಬಹುದು ಎಂದು ಸಲಹೆ ನೀಡಿದರು.


ವೇದಿಕೆಯಲ್ಲಿ ಪ್ರೊ.ಕಾಶೀನಾಥ್ ನ್ಯೂಪನೆ, ಸಂಸ್ಕೃತ ಪ್ರಾಧ್ಯಾಪಕ, ರಂಗಜಂಗ್  ಎಷೆ ಸಂಸ್ಥೆ, ನೇಪಾಳ ವಿಶ್ವವಿದ್ಯಾಲಯ, ಡಾ. ಫಿಲಿಪ್ ರುಚಿಂಸ್ಕಿ ಶಿವಾನಂದ ಶಾಸ್ತ್ರಿ , ಸಂಸ್ಕೃತ ವಿದ್ವಾಂಸ ವಾರ್ಸಾ ವಿಶ್ವವಿದ್ಯಾಲಯ ಪೋಲೆಂಡ್,  ಡಾ.ಈಶ್ವರ್ ವಿ. ಬಸವರಡ್ಡಿ ನಿರ್ದೇಶಕ, ಎಂಡಿಎನ್ಐವೈ ನವದೆಹಲಿ , ಡಾ. ಗಿರಿಶ್ಚಂದ್ರ ಉಪಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು , ಡಾ.ವಿಜಯಕುಮಾರ್ ಉಪ ಕುಲಪತಿ, ಮಹರ್ಷಿಪಾಣಿನಿ ಸಂಸ್ಕೃತ ವೇದಿಕ್ ವಿಶ್ವವಿದ್ಯಾಲಯ ಉಜ್ಜಯಿನಿ, ಶ್ರೀ ದಿನೇಶ್ ಕಾಮತ್ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಸಂಸ್ಕೃತ ಭಾರತಿ, ದೆಹಲಿ, ಶ್ರೀ ವೀರಾರ್‍‌ ಶಂಕರ ಶೆಟ್ಟಿ ಕೈಗಾರಿಕೋದ್ಯಮಿ ಮುಂಬಯಿ , ಶ್ರೀಮತಿ ಎ.ವಿಜಯಲಕ್ಷ್ಮಿ ಆರ್ .ರಾವ್–ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಟ್ರಸ್ಟಿ ಸದಸ್ಯೆ, ಶ್ರೀಮತಿ ಪದ್ಮಿನಿ ಕುಮಾರ್ ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯೆ, ಪ್ರೊ. ಇಆರ್ ಶ್ರೀಮತಿ. ಎ ,ಮಿತ್ರಾ ಎಸ್ ರಾವ್‌ ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯೆ, ಡಾ. ಉದಯ ಕುಮಾರ್ಮಯ್ಯ ಆಂಕೊಲಾಜಿ ಪ್ರಾಧ್ಯಾಪಕರು, ಬೆಂಗಳೂರು, ಡಾ. ಪಿ.ಎಸ್. ಐತಾಳ್ ಉಪಕುಲಪತಿ ಶ್ರೀನಿವಾಸ ವಿಶ್ವವಿದ್ಯಾಲಯ,  ಶ್ರೀ ಆದಿತ್ಯಕುಮಾರ್ ಮಯ್ಯ ರಿಜಿಸ್ಟ್ರಾರ್(ಶೈಕ್ಷಣಿಕ), ಡಾ.ಅನಿಲ್ ಕುಮಾರ್ ರಿಜಿಸ್ಟ್ರಾರ್, ಡಾ.ಅಜಯ್ ಕುಮಾರ್ ರಿಜಿಸ್ಟ್ರಾರ್ (ಅಭಿವೃದ್ಧಿ), ಡಾ. ಶಾಂತಲಾ ವಿಶ್ವಾಸ ಸಂಚಾಲಕರು , ಡಾ. ಬಿ.ಗೋಪಾಲಚಾರ್ ಸಹ ಸಂಚಾಲಕ ಮತ್ತಿತರರು ಉಪಸ್ಥಿತರಿದ್ದರು.


ಶ್ರೀನಿವಾಸ ವಿಶ್ವವಿದ್ಯಾಲಯ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸರಾವ್ ಸ್ವಾಗತಿಸಿದರು. ಡಾ. ಬಿ. ಗೋಪಾಲಚಾರ್ ಪ್ರಸ್ತಾವಿಕ ಮಾತನಾಡಿದರು. ಮೌಲ್ಯಮಾಪನ ರಿಜಿಸ್ಟ್ರಾರ್ ಡಾ .ಶ್ರೀನಿವಾಸಮಯ್ಯ ಡಿ.ವಂದಿಸಿದರು.


ಡಾ. ವಿಜಯಲಕ್ಷ್ಮಿ, ಪ್ರೊ. ರೋಹನ್ ಫರ್ನಾಂಡಿಸ್ ,ಡಾ. ಅಂಬಿಕಾ ಮಲ್ಯ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top