ಗೊರೂರು: ಹಾಸನ ತಾಲ್ಲೂಕು ಗೊರೂರು ಗ್ರಾಮದಲ್ಲಿ ಶ್ರೀ ಯೋಗ ನರಸಿಂಹ ಸ್ವಾಮಿ ರಥೋತ್ಸವ ಜಾತ್ರೆ ಪ್ರಯುಕ್ತ ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಿರ್ಮಿತ ಬಯಲು ರಂಗವೇದಿಕೆಯಲ್ಲಿ ತತ್ವಪದ ಗಾಯಕ ಶ್ರೀ ಯೋಗೇಂದ್ರ ದುದ್ದ ಮತ್ತು ಗಾಯಕಿ ಶ್ರೀಮತಿ ಕಲಾವತಿ ಮಧುಸೂದನ್ ಅವರು ಜನಪದ ಭಾವಗೀತೆ ಭಕ್ತಿ ಗೀತೆಗಳನ್ನು ಪ್ರಸ್ತುತಿ ಪಡಿಸಿದರು. ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಮುಖಂಡರಾದ ಹೇಮಾವತಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಬಿ.ಕೆ.ರುದ್ರಪ್ಪ, ಪ್ರಾಥಮಿಕ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ದುಬ್ಬೇಗೌಡ, ಗ್ರಾ.ಪಂ.ಸದಸ್ಯರಾದ ಬಂಗಾರಿಗೌಡ (ಮಹೇಶ್), ಜಿ.ಆರ್. ಹೇಮರಾಜ್ ಮಾಜಿ ತಾ.ಪಂ.ಸದಸ್ಯರು ಜಗದೀಶ್ ರಾಮಘಟ್ಟ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಜಿ.ಆರ್. ಶ್ಯಾಮಣ್ಣ, ಮಾಜಿ ಗ್ರಾ.ಪಂ.ಸದಸ್ಯರು ವೇದಮೂರ್ತಿ ಹಾಸನ ಜಿಲ್ಲಾ ಬರಹಗಾರರ ಸಂಘದ ಕಟ್ಟಾಯ ಹೋಬಳಿ ಘಟಕದ ಅಧ್ಯಕ್ಷರು ವೇದಮೂರ್ತಿ ಹಾಗೂ ಗೋಡೆ ಬರಹಗಾರ ಯಾಕೂಬ್ ಖಾನ್, ಚುಟುಕು ಸಾಹಿತ್ಯ ಪರಿಷತ್ ಅರಕಲಗೊಡು ತಾ. ಅಧ್ಯಕ್ಷ ಉಡುವೇರೆ ಸುಂದರೇಶ್ ಮೊದಲಾದವರು ಇದ್ದರು.
ಹಾಸನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತೇರು ರಥೋತ್ಸವ ಮೆರವಣಿಗೆಗೆ ಪ್ರಾಯೋಜಿಸಿದ್ದ ಡೊಳ್ಳು ಕುಣಿತ ಮತ್ತು ವೀರಗಾಸೆ ಜನಮನ ತಣಿಸಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


