ಮಂಗಳೂರು: ನಗರದ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ಭಾನುವಾರ (ಫೆ.5) ಬೆಳಗ್ಗೆ 9ರಿಂದ ಅಪರಾಹ್ನ 1 ಘಂಟೆ ವರೆಗೆ ವೈದ್ಯಕೀಯ ಶಿಬಿರ, ಎಲುಬು ಸಾಂದ್ರತೆ ತಪಾಸಣೆ ಮತ್ತು ರಕ್ತದಾನ ಶಿಬಿರ ಜರುಗಲಿದೆ.
ಹವ್ಯಕ ಮಂಡಲ ದಕ್ಷಿಣ ಕನ್ನಡ ಮತ್ತು ಕಾಸರಗೋಡು, ಹವ್ಯಕ ಮಹಾಸಭಾ, ಮಂಗಳೂರು ಹವ್ಯಕ ಸಭಾ, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ, ಶ್ರೀ ಭಾರತೀ ಸೌಹಾರ್ದ ಸಹಕಾರಿ ಸಂಘ, ಶ್ರೀ ಶ್ರದ್ಧಾನಂದ ಸರಸ್ವತಿ ವಿದ್ಯಾಲಯ, ವೆನ್ಲಾಕ್ ಆಸ್ಪತ್ರೆ ಮತ್ತು ಶ್ರೀ ಭಾರತೀ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ.
ಈ ಶಿಬಿರವು ತಜ್ಞ ವೈದ್ಯರಿಂದ, ಹಲವು ಪ್ರಖ್ಯಾತ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳ ಸಹಕಾರದಿಂದ ನೆರವೇರಲಿದೆ. ಪ್ರಮುಖವಾಗಿ ಮಂಗಳೂರು ನರ್ಸಿಂಗ್ ಹೋಮ್ ಮಂಗಳಾ ಹಾಸ್ಪಿಟಲ್, ಭಟ್ ನರ್ಸಿಂಗ್ ಹೋಮ್, ವೇದಮ್ ಆಯುರ್ವೇದಿಕ್ ಹಾಸ್ಪಿಟಲ್, ಸ್ಪರ್ಶ ಡಯಗ್ನೋಸ್ಟಿಕ್, ದೆಲಂಪಾಡಿ ಯೋಗ ಪ್ರತಿಷ್ಠಾನ, ವೆನ್ಲಾಕ್ ಹಾಸ್ಪಿಟಲ್, ನಿಟ್ಟೆ ವಾಕ್ ಶ್ರವಣ ಮಹಾವಿದ್ಯಾಲಯ ಸಹಕರಿಸುತ್ತಿದೆ.
ಗ್ರಾಮೀಣ ದಕ್ಷಿಣ ಕನ್ನಡ, ಕಾಸರಗೋಡು ಪರಿಸರದಿಂದ ಸಾಕಷ್ಟು ಸದಸ್ಯರು ಈ ಶಿಬಿರದಲ್ಲಿ ಭಾಗಿಗಳಾಗುವ ನಿರೀಕ್ಷೆ ಹೊಂದಿದೆ. ಅಲ್ಲದೆ ಸ್ಥಳೀಯ ವಿದ್ಯಾರ್ಥಿಗಳು ಸರಹದ್ದಿನ ಸದಸ್ಯರು ಇದರ ಪ್ರಯೋಜನ ಪಡೆಯುವ ವಿಶೇಷವಾಗಿ ಸಮಾಜದ ಹಿರಿಯ ವೈದ್ಯರನ್ನು ಸನ್ಮಾನಿಸುವ, ಕೃತಜ್ಞತೆ ಸಲ್ಲಿಸುವ, ಕಾರ್ಯಕ್ರಮ ರೂಪಿಸಿ, ಹಿರಿಯರಿಗೆ ಗೌರವ ಸಲ್ಲಿಸುವ ಯೋಜನೆ ಕೈಗೊಂಡಿರುತ್ತದೆ. ತಜ್ಞ ವೈದ್ಯರ ಸೂಕ್ತವಾದ ಪರೀಕ್ಷೆ, ಸಲಹೆ ಮತ್ತು ಪ್ರಾಥಮಿಕ ತಪಾಸಣೆಯನ್ನು ನಡೆಸಲಾಗುತ್ತದೆ.
ಈ ಶಿಬಿರಕ್ಕೆ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ಸುಗೊಳಿಸುವಂತೆ ಹವ್ಯಕ ಸಭಾ ಮಂಗಳೂರು ಇದರ ಅಧ್ಯಕ್ಷ ರಾದ ಡಾ ರಾಜೇಂದ್ರ ಪ್ರಸಾದ್ ಮತ್ತು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ ಮುರಲಿ ಮೋಹನ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ