ಮಂಗಳೂರು : ಸಮಾಜದಲ್ಲಿ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವಿಕಾಸದ ಅಭಿವೃದ್ದಿಗಾಗಿ ಶ್ರೀನಿವಾಸ ವಿಶ್ವವಿದ್ಯಾಲಯ ಮಂಗಳೂರು, ಕೇಂದ್ರ ಸರ್ಕಾರ ಆಯುಷ್ ಮಂತ್ರಾಲಯದ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ನವದೆಹಲಿ ಸಹಯೋಗದಲ್ಲಿ ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ನವದೆಹಲಿ ಕೇಂದ್ರ ಆಯುಷ್ ಮಂತ್ರಾಲಯದ ಯೋಗ ಸರ್ಟಿಫಿಕೇಷನ್ ಬೋರ್ಡ್ ನ ಕೇಂದ್ರ ಸಮಿತಿ ಸದಸ್ಯ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಡಾ.ಕೆ.ರಾಘವೇಂದ್ರ ಆರ್. ಪೈ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಜರುಗುವ ಅಂತಾರಾಷ್ಟ್ರೀಯ ಪ್ರಥಮ ಸಂಸ್ಕೃತ ಸಮ್ಮೇಳನದ ಪೂರ್ವಭಾವಿಯಾಗಿ “ಅಮೃತಯೋಗೋತ್ಸವ 75” ಎಂಬ ಬೃಹತ್ ಸಾರ್ವಜನಿಕ ಸಾಮೂಹಿಕ ಯೋಗಭ್ಯಾಸವನ್ನು ಫೆಬ್ರವರಿ 15 ಬುಧವಾರ ಬೆಳಗ್ಗೆ 6 ಗಂಟೆಗೆ ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್ ನಲ್ಲಿ ಜರುಗಲಿದೆ.
ದೇಶದ ಪರಂಪರೆ, ಸಂಸ್ಕೃತಿ ಹಾಗೂ ಸಂಸ್ಕೃತ ಭಾಷೆಯ ಮಹತ್ವ ವಿಶ್ವದ ಎಲ್ಲೆಡೆ ತಿಳಿಯಬೇಕೆನ್ನುವ ಉದ್ದೇಶದಿಂದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ ಸಿಎ ಎ ರಾಘವೇಂದ್ರ ರಾವ್ ಅವರು ವಿಶ್ವ ಸಂಸ್ಕೃತ ಮಹಾಸಮ್ಮೇಳನವನ್ನು ಹಮ್ಮಿಕೊಂಡಿದ್ದಾರೆ.ಕರ್ನಾಟಕ ರಾಜ್ಯ ಕಾಯಿದೆಯಿಂದ 2013 ರಲ್ಲಿ ಸ್ಥಾಪಿಸಲಾದ ಶ್ರೀನಿವಾಸ ವಿಶ್ವವಿದ್ಯಾಲಯ ಮಂಗಳೂರು, ಕೌಶಲ ಕೇಂದ್ರಿತ ವಿಶ್ವವಿದ್ಯಾಲಯವಾಗಿದೆ. ಶ್ರೀನಿವಾಸ ವಿಶ್ವವಿದ್ಯಾನಿಲಯವು ಮಂಗಳೂರಿನ ಎ. ಶಾಮ ರಾವ್ ಪ್ರತಿಷ್ಠಾನದಿಂದ ಪ್ರಾರಂಭವಾಗಿ 18 ಶ್ರೀನಿವಾಸ ಸಮೂಹ ಸಂಸ್ಥೆಗಳ ಪ್ರಮುಖ ಸಂಸ್ಥೆಯಾಗಿದೆ. ಅಡ್ಕ ಶಾಮ ರಾವ್ ಅವರ ಪುತ್ರ, ಹೆಸರಾಂತ ಚಾರ್ಟರ್ಡ್ ಅಕೌಂಟೆಂಟ್ ಮತ್ತು ದಾರ್ಶನಿಕ, ಶಿಕ್ಷಣ ತಜ್ಞ, ಡಾ ಸಿಎ ಎ ರಾಘವೇಂದ್ರ ರಾವ್ ಅವರು 1988 ರಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು.ಶ್ರೀನಿವಾಸ ವಿಶ್ವವಿದ್ಯಾಲಯವು ಶಿಕ್ಷಣದ ಗುಣಮಟ್ಟ ಅಭಿವೃದ್ಧಿಪಡಿಸಲು, ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ತಾಂತ್ರಿಕ ಮತ್ತು ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಎದುರಿಸಲು ಸಾಮರ್ಥ್ಯ ಮತ್ತು ಕೌಶಲ್ಯವನ್ನು ಉತ್ಪಾದಿಸುವ ಪ್ರಯತ್ನ ಸಾಗುತ್ತಿದೆ. ಪ್ರಸ್ತುತ, ಶ್ರೀನಿವಾಸ ವಿಶ್ವವಿದ್ಯಾಲಯವು ಸುಮಾರು 69 ಕಾರ್ಯಕ್ರಮಗಳೊಂದಿಗೆ ಪದವಿಪೂರ್ವ, ಸ್ನಾತಕೋತ್ತರ ಮತ್ತು ಸಂಶೋಧನಾ ಕೋರ್ಸ್‌ಗಳನ್ನು ನೀಡುತ್ತಿದೆ. ವಿಶ್ವವಿದ್ಯಾಲಯವು ಪ್ರಸ್ತುತ ಮತ್ತು ಭವಿಷ್ಯದ ಉದ್ಯಮದ ಪ್ರಸ್ತುತತೆಗೆ ಅನುಗುಣವಾಗಿ ಯುಜಿ ಮತ್ತು ಪಿಜಿ ಮಟ್ಟದಲ್ಲಿ ಹೊಸ ಸೂಪರ್ ಸ್ಪೆಷಾಲಿಟಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಮತ್ತು ಪ್ರಾರಂಭಿಸಲು ಹೊಸತನಗಳನ್ನು ಮಾಡಿದೆ.
ಅಮೃತಯೋಗೋತ್ಸವದಲ್ಲಿಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಿಬ್ಬಂದಿ ಮಂಗಳೂರು ಉಡುಪಿ ಜಿಲ್ಲೆ ವಿವಿಧ ಯೋಗ ಸಂಸ್ಥೆಗಳ ಯೋಗ ಪಟುಗಳು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಆಸಕ್ತ ಸಾರ್ವಜನಿಕರು ಸುಮಾರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಅಮೃತ ಯೋಗೋತ್ಸವದಲ್ಲಿ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ ಮತ್ತು ಆಧ್ಯಾತ್ಮಿಕವ್ಯಕ್ತಿತ್ವ ವಿಕಾಸಕ್ಕೆ ಪೂರಕ ಯೋಗ ತಂತ್ರಗಳನ್ನು ಕಲಿಸಲಾಗುವುದು.
ಶಾರೀರಿಕ ದೃಢತೆಗೆ ಯೋಗ ನಡಿಗೆ ಪೈಸೂತ್ರ, ಕರ್ಣ ಚೈತನ್ಯ ಮಾಲಾಕ್ರಿಯೆ, ಗಣೇಶನಮನ ನಡಿಗೆ, ಹಿಮಾಲಯೌಗಿಕ ವ್ಯಾಯಾಮವನ್ನು, ಮಾನಸಿಕ ವಿಕಾಸಕ್ಕೆ ಪ್ರಾಣ ಚೈತನ್ಯ ಕ್ರಿಯೆ, ಯೋಗ ನಿದ್ರೆ, ಬೌದ್ಧಿಕ ವ್ಯಕ್ತಿತ್ವಕ್ಕೆ ಮೈಂಡ್ ಸೌಂಡ್ ರೇಸೊನೈಸ್ಸ್ ( ಮನೋ ತರಂಗ ಸಂತುಲನ ತಂತ್ರ ) ಭಾವನಾತ್ಮಕ ಸಂಸ್ಕಾರಕ್ಕೆ ಮಂತ್ರ ನಾದ ಯೋಗ, ಸೀತಾ ವೃಕ್ಷಧ್ಯಾನ, ಆಧ್ಯಾತ್ಮಿಕ ಪ್ರಗತಿಗೆ ಪ್ರಾಣಾಯಾಮ, ನಂದಿ ಉಸಿರಾಟ ಸಂಹಿತ ಧ್ಯಾನವನ್ನು ಕಲಿಸಲಾಗುವುದು.ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ ಸಾರ್ವಜನಿಕರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದರ ಸದವಕಾಶದ ಸದುಪಯೋಗ ಪಡೆಯಲು ವಿನಂತಿಸಲಾಗಿದೆ.
ಅಮೃತ ಯೋಗ ಮೆಡಲ್ ಪಡೆಯಿರಿ :
ಈ ಬೃಹತ್ ಅಮೃತಯೋಗೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ನವದೆಹಲಿಯ ಮೊರಾರ್ಜಿ ದೇಸಾಯಿ ಯೋಗ ಸಂಸ್ಥೆಯು ವಾಲೆಂಟರಿ ಯೋಗ ಸರ್ಟಿಫಿಕೇಟ್ ಅನ್ನು ಹಾಗೂ ಸಾಂಕೇತಿಕ ನೋಂದಣಿ ಶುಲ್ಕದೊಂದಿಗೆ ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯ ಅಮೃತಯೋಗ 75 ಎಂಬ ಬಂಗಾರ ಮೆಡಲ್ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಪರಿಚಯ ಯೋಗ ಗುರು ಡಾ. ಕೆ ರಾಘವೇಂದ್ರ ಆರ್ ಪೈ:
ಯೋಗ ಗುರು ಡಾ. ಕೆ ರಾಘವೇಂದ್ರ ಆರ್ ಪೈಅವರುಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿಕಟಪೂರ್ವ ನಿರ್ದೇಶಕ. ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಕಾರ್ಯದರ್ಶಿ. ಕೇಂದ್ರ ಸರ್ಕಾರ ನವದೆಹಲಿ ಆಯುಷ್ ಮಂತ್ರಾಲಯದ ಯೋಗ ಸರ್ಟಿಫಿಕೇಷನ್ ಬೋರ್ಡಿನ ಮಾನ್ಯತಾ ಕೇಂದ್ರ ಸಮಿತಿಯ ಸದಸ್ಯರಾಗಿರುವರು. ಮೈಸೂರು ವಿಶ್ವವಿದ್ಯಾನಿಲಯ ತತ್ವಶಾಸ್ತ್ರ ವಿಭಾಗದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೈಸೂರು ವಿವಿ ಸಂಸ್ಕೃತ ಎಂಎ, ಲೋನಾವಾಲಾ ಕೈವಲ್ಯಧಾಮದಿಂದ ಪಿಜಿ ಡಿಪ್ಲೋಮಾ ಯೋಗ ಶಿಕ್ಷಣ, ಹಂಪಿ ಕನ್ನಡ ವಿವಿಯಿಂದ “ದಾಸ ಸಾಹಿತ್ಯ ಮತ್ತು ಯೋಗ ದರ್ಶನ” ಕುರಿತು ಬರೆದ ಪ್ರೌಢ ಪ್ರಬಂಧ ಡಾಕ್ಟರೇಟ್ ಇನ್ ಲಿಟರೇಟರ್ (ಡಿ.ಲಿಟ್ )ಪದವಿ ಪುರಸ್ಕೃತರು.
ಇಂಗ್ಲೆಂಡ್, ಜರ್ಮನಿ, ಅಮೇರಿಕಾ, ಕತಾರ್, ಶ್ರೀಲಂಕಾ, ಚೈನಾ, ಸಿಂಗಾಪುರ, ವಿಯೆಟ್ನಾಂ, ಸ್ವಿಜರ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಯೋಗ ತರಬೇತಿ ಕಾರ್ಯಗಾರ ಪ್ರಬಂಧ ಮಂಡನೆ ನಡೆಸಿರುವರು. ಪ್ರಸ್ತುತ ಮೈಸೂರಿನಲ್ಲಿ ಯೋಗ ವಿಶ್ವಕೋಶದ ರಚನೆಯಲ್ಲಿ ತೊಡಗಿರುವರು. ರಾಜ್ಯ ರಾಷ್ಟ್ರೀಯ ಪತ್ರಿಕೆಯ ಅಂಕಣಕಾರರು, ಯೋಗ ವಿದ್ಯಾಭೂಷಣ ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ ಯೋಗಾಚಾರ್ಯ, ರಷ್ಯಾ ಯೋಗ ಗುರು, ಅಮೆರಿಕ ಚಿಕಾಗೋ ನಗರದಲ್ಲಿ “ಸ್ವಾಮಿ ವಿವೇಕಾನಂದ ಲೀಡರ್ಶಿಪ್” ಪುರಸ್ಕೃತರು.60 ಗಂಟೆಗಳ ಕಾಲ 7,777 ಆವರ್ತ ಸೂರ್ಯನಮಸ್ಕಾರ ಮಾಡಿ ವಿಶ್ವ ದಾಖಲೆ ಮಾಡಿರುವರು.
4000ಕ್ಕೂ ಹೆಚ್ಚು ಯೋಗ ತರಬೇತಿಯನ್ನು 11 ಲಕ್ಷಕ್ಕೂ ಹೆಚ್ಚು ಯೋಗ ವಿದ್ಯಾರ್ಥಿಗಳಿಗೆ ತರಬೇತಿ 5,000 ಯೋಗ ಶಿಕ್ಷಕರನ್ನು ತರಬೇತಿಗೊಳಿಸಿರುವರು.
ನೋಂದಣಿಗಾಗಿ ಸಂಪರ್ಕಿಸಿ: https://forms.gle/dCQL3ycGNkoqR32C9
ಹೆಚ್ಚಿನ್ ಮಾಹಿತಿಗಾಗಿ ಸಂಪರ್ಕಿಸಿ: ಪ್ರೊ. ಸುಶ್ಮಿತ - 7975164177
ಡಾ. ಅಜಯ್ ಕುಮಾರ್ , ರಿಜಿಸ್ಟ್ರಾರ್ – 7019238290
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ