ಚಿಕ್ಕಮಗಳೂರು: ಎಚ್.ಡಿ ತಮ್ಮಯ್ಯ ಅಭಿಮಾನಿಗಳಿಂದ ಬದಲಾವಣೆ ಸಂಕಲ್ಪ ಯಾತ್ರೆ- ಬೈಕ್ ರ‍್ಯಾಲಿ

Upayuktha
0

ಕಾಂಗ್ರೆಸ್‌ ಸೇರ್ಪಡೆಯಾದ ಮಾಜಿ ನಗರಸಭೆ ಅಧ್ಯಕ್ಷ



ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಸೇರ್ಪಡೆ ಆದ ನಂತರ ಎಚ್.ಡಿ ತಮ್ಮಯ್ಯ ಅವರ ಅಭಿಮಾನಿಗಳು ಫೆ.21 ರಂದು ಮಂಗಳವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ “ಬದಲಾವಣೆ ಸಂಕಲ್ಪ ಯಾತ್ರೆ” ಬೃಹತ್ ಬೈಕ್ ರ‍್ಯಾಲಿ ಏರ್ಪಡಿಸಿದ್ದಾರೆ. 

ಬೈಕ್ ರ‍್ಯಾಲಿಯು ಬೆಳಗ್ಗೆ 11.30ಕ್ಕೆ ಕರ್ತಿಕೆರೆಯಿಂದ ಹೊರಟು ಬೇಲೂರು ರಸ್ತೆ, ಐ.ಜಿ ರಸ್ತೆ, ಎಂ.ಜಿ ರಸ್ತೆ ಮೂಲಕ ಜಿಲ್ಲಾ ಕಾಂಗ್ರೆಸ್ ಕಛೇರಿಯನ್ನು ತಲುಪಲಿದೆ. ಬಳಿಕ ಮಾಜಿ ನಗರಸಭೆ ಅಧ್ಯಕ್ಷ ಎಚ್.ಡಿ ತಮ್ಮಯ್ಯ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top