ಆಳ್ವಾಸ್ ‘ನ್ಯೂಸ್ ಕ್ಯಾಪ್ಸ್ಯೂಲ್’ನ 2 ವರ್ಷದ ಸಂಭ್ರಮಾಚರಣೆಯಲ್ಲಿ ಬಾಲಕೃಷ್ಣಶೆಟ್ಟಿ
ವಿದ್ಯಾಗಿರಿ : ‘ವೃತ್ತಿಯನ್ನು ಅಂತಃಸಾಕ್ಷಿಯಿಂದ ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಯಶಸ್ಸು ಖಂಡಿತ’ ಎಂದು ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಹಮ್ಮಿಕೊಂಡ ‘ನ್ಯೂಸ್ ಕ್ಯಾಪ್ಸ್ಯೂಲ್’ನ 2 ವರ್ಷದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ವೃತ್ತಿಯಲ್ಲಿ ಮೇಲು-ಕೀಳಿಲ್ಲ. ಯಾವುದೇ ವೃತ್ತಿಯಲ್ಲಿ ಸಮರ್ಪಣಾಭಾವದಿಂದ ದುಡಿದಾಗ ಸಾಧನೆ ಸಾಕಾರಗೊಳ್ಳುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬ್ರ್ಯಾಂಡ್ ಅನ್ನು ವಿಸ್ತರಿಸುವಲ್ಲಿ ‘ನ್ಯೂಸ್ ಕ್ಯಾಪ್ಸ್ಯೂಲ್’ ಪಾತ್ರವೂ ಮಹತ್ತರವಾಗಿದೆ ಎಂದು ಅವರು ಶ್ಲಾಘಿಸಿದರು.
ಎರಡು ವರ್ಷಗಳ ಹಿಂದೆ ಪ್ರಾಯೋಗಿಕ ಪರಿಕಲ್ಪನೆಯಲ್ಲಿ ಆರಂಭಗೊಂಡ ‘ನ್ಯೂಸ್ ಕ್ಯಾಪ್ಸ್ಯೂಲ್’ ಕೋವಿಡ್, ರಜೆ ಮತ್ತಿತರ ಸಂದರ್ಭಗಳನ್ನೂ ಲೆಕ್ಕಿಸದೇ ನಿರಂತರವಾಗಿ ಸಾಗಿ ಬಂದಿದೆ. ಪ್ರತಿನಿತ್ಯ ಬರುವ ‘ನ್ಯೂಸ್ ಕ್ಯಾಪ್ಸ್ಯೂಲ್’ ನಮ್ಮ ವಿದ್ಯಾರ್ಥಿಗಳಿಗೆ ಕಲಿಕೆಯಾಗಿದ್ದು, ಮಾಧ್ಯಮಗಳಲ್ಲಿ ವೃತ್ತಿಗೆ ಸೇರಿದಾಗ ಸಾಕಷ್ಟು ನೆರವಾಗಿದೆ ಎಂದು ವಿಭಾಗದ ಸಂಯೋಜಕ ಪ್ರಸಾದ ಶೆಟ್ಟಿ ಹೇಳಿದರು.
ಆವಿಷ್ಕಾರ ಹಾಗೂ ಆರಂಭದ ಹೊಸತನವು ಬದುಕಿನ ನಿತ್ಯ ಉಸಿರಾಗಬೇಕು. ಆದರೆ, ಅದು ನಿರಂತರವಾದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ‘ನ್ಯೂಸ್ ಕ್ಯಾಪ್ಸ್ಯೂಲ್’ ಆರಂಭಿಕ ದಿನಗಳನ್ನು ಆನಿಮೇಷನ್ ವಿಜ್ಞಾನ ಪದವಿ ವಿಭಾಗದ ಮುಖ್ಯಸ್ಥ ರವಿ ಮೂಡುಕೊಣಾಜೆ ಮೆಲುಕು ಹಾಕಿದರು.
‘ಕ್ಯಾಪ್ಸ್ಯೂಲ್’ ಕೇವಲ ಸುದ್ದಿ ಹಾಗೂ ಚಿತ್ರದ ಮಿಶ್ರಣವಲ್ಲ. ಅದು ಭಾವುಕ ವಿಚಾರವೂ ಹೌದು. ‘ಕ್ಯಾಪ್ಸ್ಯೂಲ್ ವೀಕ್ಷಿಸಲು ಪ್ರತಿನಿತ್ಯ ಕಾಯುತ್ತೇವೆ’ ಎಂಬ ಆಶ್ರಮದ ಮಕ್ಕಳ ಮಾತು ಹಾಗೂ ಸಂಭ್ರಮ ಪಟ್ಟ ವಿದ್ಯಾರ್ಥಿಗಳ ಸಡಗರವು ನೆಮ್ಮದಿ ನೀಡಿದೆ ಎಂದು ಆಳ್ವಾಸ್ ಕಾಲೇಜಿನ ಪ್ರವೇಶಾತಿ ಅಧಿಕಾರಿ ಹಣಮಂತ ಸೀಮಿಕೇರಿ ಹೇಳಿದರು.
ವಿದ್ಯಾರ್ಥಿ ಅಕ್ಷಯ್, ಆನಂದ ಜೇವೂರ್ ಹಾಗೂ ಸುಕನ್ಯಾ ಅನಿಸಿಕೆ ಹಂಚಿಕೊಂಡರು. ಉಮರ್ ಫಾರುಕ್ ನಿರೂಪಿಸಿ, ಪ್ರಿಯದರ್ಶಿನಿ ವಂದಿಸಿದರು. ವಿಭಾಗದ ಪ್ರಾಧ್ಯಾಪಕರುಗಳಾದ ಹರ್ಷವರ್ಧನ ಪಿಆರ್, ಸುಶ್ಮಿತಾ ಜಯಾನಂದ್, ನಿಶಾನ್, ದೀಕ್ಷಿತಾ ಹಾಗೂ ಇಂಚರ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ