ಪುತ್ತೂರು : ಸತತ ಐದು ಬಾರಿ ಬಜೆಟ್ ಮಂಡನೆ ಮಾಡಿದ ಹಿರಿಮೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಅವರನ್ನು ವೃತ್ತಿಗಿತ್ತಿ ಎಂದೇ ಹೇಳಬಹುದು.ಬಜೆಟ್ ಮಂಡಿಸುವುದು ಅಷ್ಟು ಸುಲಭವಾದ ಮಾತಲ್ಲ. ಬಜೆಟ್‍ಗೆ ಹಲವರು ಹಲವಾರು ತೆರೆನಾದ ಅಭಿಪ್ರಾಯಗಳನ್ನು ಪತ್ರಿಕಾ ಗೋಷ್ಠಿಯ ಮುಖೇನ ಒಂದೊಂದು ರೀತಿಯ ವ್ಯಕ್ತ ಪಡಿಸುತ್ತಾರೆ.ಆದರೆ ಬಡ ವ್ಯಕ್ತಿಗಳಿಗೆ ಯಾವುದೇ ಅಭಿವೃದ್ಧಿಯ ಪೂರಕ ಹಾಗೂ ಮಾರಕ ವಿಷಯಗಳ ಅರಿವೇ ಇರುವುದಿಲ್ಲ. ಹಾಗಾಗಿ ಈ ಕಾಲೇಜಿನ ಶಿಕ್ಷಕ ವೃಂದದವರನ್ನು ಅಭಿನಂದಿಸುತ್ತೇನೆ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ತಿಳುವಳಿಕೆ ಅತ್ಯಗತ್ಯವಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಜಯವಂತ ನಾಯಕ್ ಹೇಳಿದರು.
ಇವರು ವಿವೇಕಾನಂದ (ಸ್ವಾಯತ್ತ )ಕಾಲೇಜು ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲಾದ ಬಜೆಟ್ -2023 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲುರಾಯ ಇವರು ಮಾತನಾಡಿ, ಪ್ರಶ್ನೆ ಕೇಳುವುದು ಕಲಿಕೆಯ ಉತ್ತಮ ವಿಧಾನ. ಪ್ರತಿಯೊಬ್ಬನೂ ಪ್ರಶ್ನಿಸುವ ಮನೋಭಾವನೆಯನ್ನು ಹೊಂದಿರಬೇಕು. ಪ್ರಶ್ನೆ ಕೇಳುವ ಮನೋಭಾವನೆ ಇದ್ದರೆ ವ್ಯಕ್ತಿ ಉತ್ತಮ ಮಟ್ಟಕ್ಕೆ ಬೆಳೆಯಲು ಸಾಧ್ಯ. ಹೆಚ್ಚು ಪ್ರಶ್ನಿಸಿದಷ್ಟು ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ. ಒಂದು ಸಂಸ್ಥೆಯ ಅಭಿವೃದ್ಧಿಗೆ ಬಜೆಟ್ ಎಷ್ಟು ಪೂರಕವೋ ಹಾಗೆಯೇ ದೇಶದ ಅಭಿವೃದ್ಧಿಗೂ ಕೂಡಾ ಕೇಂದ್ರ ಬಜೆಟ್ ಬಹಳ ಮುಖ್ಯವಾಗಿದೆ. ಹಾಗಾಗಿ ಬಜೆಟ್‍ಎನ್ನುವುದು ಆರ್ಥಿಕ ಅಭಿವೃದ್ಧಿಯ ಸಾಧನವಾಗಿದೆ ಎಂದರು.
ಈ ಸಂದರ್ಭದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ರಶ್ಮಿ ಪಿ, ರಮ್ಯಾ.ಎ, ಆಶಾಲಕ್ಷ್ಮಿ. ಎಂ, ಪವಿತ್ರ.ಬಿ, ರಚಿತರಾವ್.ಎಂ, ಅನನ್ಯಶ್ರೀ. ಕೆ, ಮನೋಜ್‍ಕುಮಾರ್.ಪಿ, ಸೌಮ್ಯ ಪಿ. ಬಿ. ವಿಭಾಶ್ರೀ, ಬಜೆಟ್ ಕುರಿತಾದ ವಿಶ್ಲೇಷಣೆಯನ್ನು ಮಂಡಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ನೂತನ ಪರೀಕ್ಷಾಂಗ ಕುಲಸಚಿವರಾದ ಡಾ. ಎಚ್.ಜಿ ಶ್ರೀಧರ್ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಡಾ. ವಿಜಯ ಸರಸ್ವತಿ ಸ್ವಾಗತಿಸಿ, ವಿದ್ಯಾರ್ಥಿ ಧನುಷ್ ವಂದಿಸಿದರು. ವಿದ್ಯಾರ್ಥಿನಿ ಲತಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


