ಭಾರತ ಹುಣ್ಣಿಮೆ- ಶ್ರೀ ವ್ಯಾಸ ಪೂರ್ಣಿಮಾ-ಪುಷ್ಯಾರ್ಕಯೋಗ: ರಾಯರ ಮಠದಲ್ಲಿ ವಿಶೇಷ ಪೂಜೆ

Upayuktha
0

ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ  ಅರ್ಚಕರಿಂದ "ಗುರು ಪುಷ್ಯಾರ್ಕ" ಯೋಗದ ಪ್ರಯುಕ್ತ ಇಂದು (ಭಾನುವಾರ, ಫೆ.5) ಬೆಳಗ್ಗೆ 7-30ಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶ್ರೀ ರಾಘವೇಂದ್ರ ಸ್ತೋತ್ರ ಪಾರಾಯಣದೊಂದಿಗೆ ವಿಶೇಷ ಪೂಜೆಗಳು ನೆರವೇರಿದವು.

ನಂತರ ಶ್ರೀ ಭಾರತ ಪೂರ್ಣಿಮೆ ಮತ್ತು ಪುಷ್ಯಾರ್ಕಯೋಗದ ಪ್ರಯುಕ್ತ ಮಠದಲ್ಲಿ ಭಕ್ತರಿಂದ ಸಾಮೂಹಿಕವಾಗಿ ಶ್ರೀ ಸತ್ಯನಾರಾಯಣ ವ್ರತ ಪೂಜೆಯು ನೆರವೇರಿತು. ಪುರೋಹಿತರಾದ ನಂದಕಿಶೋರಾಚಾರ್ಯ ಈ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಈ ಪೂಜಾ ವೈಭವದ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top