ನಾವು ಏನಾಗಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು
ಶ್ರೀ ವಿದ್ಯಾ ಕೇಂದ್ರದ ಸ್ಮಾರ್ಟ್ ಸ್ಕೂಲ್ ನಲ್ಲಿ 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಬೆಂಗಳೂರು: ಮಾಗಡಿ ರಸ್ತೆಯಲ್ಲಿರುವ ಶ್ರೀ ವಿದ್ಯಾ ಕೇಂದ್ರದ ಸ್ಮಾರ್ಟ್ ಸ್ಕೂಲ್ ಶಾಲೆಯಲ್ಲಿ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಶನಿವಾರ (ಫೆ.4) ನಡೆಯಿತು. ನಮ್ಮ ಸಂಸ್ಕಾರದಂತೆ ಶಿಕ್ಷಾವಲ್ಲಿಯ ಮಂತ್ರಘೋಷಗಳೊಂದಿಗೆ ಆರಂಭವಾದ ಈ ಸಮಾರಂಭದಲ್ಲಿ ಶಾಲೆಯ ಅಧ್ಯಕ್ಷರು, ಟ್ರಸ್ಟಿ, ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಪೋಷಕರೆಲ್ಲರೂ ಭಾಗವಹಿಸಿದ್ದರು.
ಶಾಲೆಯ ಅಧ್ಯಾಪಕಿಯರೇ ರಚಿಸಿ, ಸಂಗೀತ ಸಂಯೋಜಿಸಿ ಮಕ್ಕಳಿಗಾಗಿ ಆಶಯ ಗೀತೆಯನ್ನು ಹಾಡಿದರು. ಬೀಳ್ಕೊಡಲ್ಪಡುತ್ತಿರುವ ವಿದ್ಯಾರ್ಥಿಗಳೆಲ್ಲರೂ ಶಾಲೆಯಲ್ಲಿನ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಗೀತಾ ಪಿ ಎಸ್ ಇವರು ಶಾಲೆಯ ಸಂಸ್ಕಾರವನ್ನು ಶಾಲೆ ಸಮಾರಂಭವನ್ನು ಅಧ್ಯಾಪಕರುಗಳನ್ನು ಎಲ್ಲರನ್ನೂ ಮೆಚ್ಚಿ, ಸಣ್ಣ ಕಥೆಗಳೊಂದಿಗೆ ಜೀವನದ ಮೌಲ್ಯಗಳನ್ನು ಮಕ್ಕಳಿಗೆ ಬಹಳ ಸೊಗಸಾಗಿ ಹೇಳಿಕೊಟ್ಟರು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಉದ್ಘಾಟನೆಗೊಂಡಿದ್ದ ವಿದ್ಯಾರ್ಥಿ ಸಂಘವನ್ನು, ಬ್ಯಾಡ್ಜ್‌ಗಳನ್ನು ಹಿಂಪಡೆಯುವುದರ ಮೂಲಕ ಸಮಾರೋಪ ಮಾಡಲಾಯಿತು. ಸಂಕೇತಿಕವಾಗಿ ಶಾಲಾ ಧ್ವಜವನ್ನು ಇಳಿಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಧ್ವಜವನ್ನು ಮತ್ತೆ ಶಾಲೆಯ ಚೇರ್ಮನ್ ರವರಿಗೆ ಅರ್ಪಿಸಿದರು.
ಸಂಸ್ಥೆಯ ಚೇರ್ಮನ್ ಆದ ಶ್ರೀ ಶಾಮ ಸುಂದರ ಶರ್ಮ ಇವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪೂರ್ಣಿಮಾ ಎಸ್. ಡಿ ಇವರು ವಿದ್ಯಾರ್ಥಿಗಳನ್ನು ಕುರಿತು ಶುಭ ಆಶಿಸಿ ಮುಂಬರುವ ಪರೀಕ್ಷೆಗಳಿಗೆ ಶುಭ ಕೋರಿದರು. ವಿದ್ಯಾರ್ಥಿನಿ ಸ್ಪರ್ಶ ಭಟ್ ಸಭೆಯನ್ನು ಸ್ವಾಗತಿಸಿದರೆ ವಿದ್ಯಾರ್ಥಿ ಸಮರ್ಥ್ ಸಭೆಯನ್ನು ವಂದಿಸಿದರು.
9ನೇ ತರಗತಿಯ ವಿದ್ಯಾರ್ಥಿಗಳಾದ ಅದಿತಿ, ನಿಹಾಲ್, ಸುಪ್ರಭಾ ಕುಲಕರ್ಣಿ ಮತ್ತು ಸಂಪ್ರೀತ್ ಕಾರ್ಯಕ್ರಮ ನಿರ್ವಹಿಸಿದರು.
- ಲಕ್ಷ್ಮಿ ಟಿ.ಎನ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

