ಬಣ್ಣಗಳಲ್ಲಿ ಮೂಡಿದ ಚಿತ್ರಕಲೆ ಬದುಕಿನಲ್ಲಿ ಕಲಿಸಿತು ತಾಳ್ಮೆ

Upayuktha
0

ಪ್ರತಿಯೊಬ್ಬ ವ್ಯಕ್ತಿ ಹುಟ್ಟುವಾಗ ಕಲಾವಿದನಾಗಿರುವುದಿಲ್ಲ. ಹಂತ ಹಂತವಾಗಿ ಬೆಳೆದು,  ಬಾಹ್ಯ ಪರಿಸರಕ್ಕೆ ತೆರೆದು ಕೊಂಡಾಗ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗುತ್ತದೆ. ಸಣ್ಣ ವಯಸ್ಸಿನಲ್ಲಿ ಪ್ರಚೋದನೆ ನೀಡಿ, ನೀನು ಉತ್ತಮವಾಗಿ ಹಾಡುತ್ತೀಯ, ಓದುತೀಯ ನಟಿಸುತ್ತಿಯ ಎಂದು ಪ್ರೇರಕ ಮಾತುಗಳು ಹಲವಾರು ರೀತಿಯಲ್ಲಿ  ಕಲೆಯನ್ನು ಜೀವನದಲ್ಲಿ ಆರಾಧಿಸಲು ಸ್ಪೂರ್ತಿಯಾಗುತ್ತದೆ. ಕಲೆ ಎಂದರೆ ನನಗೆ ಇಷ್ಟವಾಗುವುದೇ ಚಿತ್ರಕಲೆ,ಅದು ನನ್ನ ಜೀವಎಂದು ಹೇಳಿದರು ತಪ್ಪಾಗುವುದಿಲ್ಲ.ಬಾಲ್ಯದಲ್ಲಿ ನನ್ನ ತಾಯಿ ಚಿತ್ರಕಲೆ ತರಗತಿಗೆ ಹಾಕಿದರು.ಆದರೆ ಅನಿವಾರ್ಯ ಕಾರಣಗಳಿಂದ ಒಂದನೇ ತರಗತಿಯಿಂದ ಮೂರನೇ ತರಗತಿ ಅವಧಿಯಲ್ಲಿ  ಕಲಿಯುವ ಅವಕಾಶ ಸಿಕ್ಕಿತು. ಚಿತ್ರಕಲೆ ತರಗತಿಗಳನ್ನು ಬಿಟ್ಟು ಮಾತ್ರಕ್ಕೆ ಆಸಕ್ತಿ ಏನು ಕಡಿಮೆ ಆಗಿರಲಿಲ್ಲ, ಶಾಲೆಗಳಲ್ಲಿ  ನಡೆಯುತ್ತಿರುವ ಹಲವಾರು ಚಿತ್ರಗಳ ಸ್ಪರ್ಧೆಗಳಿಗೆ ಭಾಗವಹಿಸಿ,ಪ್ರಶಸ್ತಿಗಳನ್ನು ಗೆದ್ದೆ.ಪ್ರೌಢ ತರಗತಿಯಲ್ಲಿ ಇರುವಾಗ ಅಲ್ಲಿನ ಪ್ರೀತಿಯ ಚಿತ್ರಕಲಾ ಶಿಕ್ಷಕಿಯವರ ಮಾರ್ಗದರ್ಶನದಲ್ಲಿ ಎರಡು ಚಿತ್ರಕಲಾ ಗ್ರೇಡ್ ಪರೀಕ್ಷೆಗಳನ್ನು ಬರೆದೆ. ಅವರು ಕಸ ಎಂದು ಬಿಸಾಡಿದ ಎರಡು ಚಿತ್ರಕಲೆಯ ಪ್ರತಿಗಳು ಇನ್ನೂ ನನ್ನ ಹತ್ತಿರ ಇದೆ.ವಿಪರ್ಯಾಸವೆಂದರೆ ಅದಕ್ಕೆ ಸುಮಾರು 20 ವರ್ಷಗಳ ಹಿಂದೆ ಅವರು ಚಿತ್ರಕಲೆಯ ಶಿಕ್ಷಕಿ ಆಗಲು ಮಾಡಿದ ಚಿತ್ರಗಳು ಇಂದು ಅದು ನನಗೆ ಸ್ಪೂರ್ತಿಯನ್ನು ಉಂಟು ಮಾಡಿದೆ.


ಹಿಂದೆ ನಾನು ಹಲವಾರು ತರಹದ ವೃತ್ತ ಪತ್ರಿಕೆ ಮತ್ತು ದಿನಪತ್ರಿಕೆ ಗಳಲ್ಲಿ ಬರುತ್ತಿರುವ ಚಿತ್ರವನ್ನು ಕತ್ತರಿಸಿಕೊಂಡು ಅದರಲ್ಲಿದ್ದ ಚಿತ್ರವನ್ನು ಬಿಡಿಸುತ್ತಾ ಇದ್ದೆ.ಈಗ ಮೊಬೈಲ್ ಗಳು ಮತ್ತು ತಂತ್ರಜ್ಞಾನ ಮುಂದುವರೆದ ಸೋಶಿಯಲ್ ಮೀಡಿಯಾದಲ್ಲಿ ಬರುವ ಹಲವಾರು ಚಿತ್ರಣವನ್ನು ಬಿಡಿ ಬಿಡಿಸುತ್ತೇನೆ ಮತ್ತು ಹಲವಾರು ಮಾಹಿತಿಯನ್ನು ತಿಳಿದುಕೊಂಡಿದ್ದೇನೆ.  ಚಿತ್ರಕಲೆಯಿಂದ ನಾನು ಕಲಿತದ್ದು ತಾಳ್ಮೆ, ನಿಜ ಜೀವನದಲ್ಲಿ ಸಾಧ್ಯವಾಗದ ಹಲವಾರು ವಿಚಾರವನ್ನು ಚಿತ್ರಣ ವಿಚಾರವನ್ನು ಚಿತ್ರಣದ ರೂಪದಲ್ಲಿ ರೂಪಿಸುವುದು, ಹಲವಾರು ಬಣ್ಣಗಳ ಪ್ರಯೋಗ ಇತ್ಯಾದಿ. ಚಿತ್ರವು ಮಾತನಾಡುತ್ತದೆ ಎಂದು ತಿಳಿಸಿದ್ದು ಚಿತ್ರಕಲೆ  . ನನ್ನ ಹತ್ತಿರ 700ಕ್ಕೂ ಅಧಿಕ ಚಿತ್ರವನ್ನು ಚಿತ್ರವನ್ನು ಹೊಂದಿದ್ದೇನೆ. ಆದರೆ ನಾನೇನು ಅದ್ಭುತ ಕಲಾವಿದೆಯಲ್ಲ,ಆದರೂ ಹಂತ ಹಂತವಾಗಿ ಬೆಳೆದು ಬಂದ ಪ್ರಗತಿಯನ್ನು ನೋಡಲು ಇಟ್ಟಿರುವ ಚಿತ್ರಣದ ಆತ್ಮಗಳು! ಜೀವನದ ಉದ್ದಗಲಕ್ಕೂ ಆದರ್ಶವಾಗಲಿದೆ.

 

 ದೇವಿಶ್ರೀ ಶಂಕರಪುರ

 ಆಳ್ವಾಸ್ ಕಾಲೇಜು ಮೂಡುಬಿದರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top