ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯ ಮಂಗಳೂರು, ಕೇಂದ್ರ ಸರ್ಕಾರ ಆಯುಷ್ ಮಂತ್ರಾಲಯದ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ನವದೆಹಲಿ ಸಹಯೋಗದಲ್ಲಿ ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ನವದೆಹಲಿ ಕೇಂದ್ರ ಆಯುಷ್ ಮಂತ್ರಾಲಯದ ಯೋಗ ಸರ್ಟಿಫಿಕೇಷನ್ ಬೋರ್ಡ್ ನ ಕೇಂದ್ರ ಸಮಿತಿ ಸದಸ್ಯ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಡಾ.ಕೆ.ರಾಘವೇಂದ್ರ ಆರ್. ಪೈ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿಅಂತಾರಾಷ್ಟ್ರೀಯ ಪ್ರಥಮ ಸಂಸ್ಕೃತ ಸಮ್ಮೇಳನದ ಪೂರ್ವಭಾವಿಯಾಗಿ “ಅಮೃತ ಯೋಗೋತ್ಸವ 75” ಎಂಬ ಬೃಹತ್ ಸಾರ್ವಜನಿಕ ಸಾಮೂಹಿಕ ಯೋಗಭ್ಯಾಸ ಫೆಬ್ರವರಿ 15, 2023 ಮಂಗಳವಾರ ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್ ನಲ್ಲಿ ನಡೆಯಿತು.
ದೇಶದ ಪರಂಪರೆ, ಸಂಸ್ಕೃತಿ ಹಾಗೂ ಸಂಸ್ಕೃತ ಭಾಷೆಯ ಮಹತ್ವ ವಿಶ್ವದ ಎಲ್ಲೆಡೆ ತಿಳಿಯಬೇಕೆನ್ನುವ ಉದ್ದೇಶದಿಂದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ ಸಿಎ ಎ ರಾಘವೇಂದ್ರ ರಾವ್ ಅವರು ವಿಶ್ವ ಸಂಸ್ಕೃತ ಮಹಾಸಮ್ಮೇಳನವನ್ನು ಹಮ್ಮಿಕೊಂಡಿದ್ದಾರೆ.ಇದರ ಪೂರ್ವಭಾವಿಯಾಗಿ ನಡೆದಂತಹ ಅಮೃತಯೋಗೋತ್ಸವದಲ್ಲಿ ಡಾ ಸಿಎ ಎ ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಯೋಗದಡೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು ಹಾಗೂ ಪಠ್ಯ ವಿಷಯವಾಗಿ ಸೇರಿಸಲಾಗುವುದು ಹಾಗೂ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ನಡೆಯಬೇಕೆಂದು ಹೇಳಿದರು.
ಸಹ ಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸರಾವ್ ಮಾತನಾಡಿ, ಪ್ರತಿಯೊಬ್ಬರು ದಿನದಲ್ಲಿ ಅರ್ಧ ಗಂಟೆಯಾದರೂ ಯೋಗವನ್ನು ಮಾಡಬೇಕು. ಇದರಿಂದ ಸಮಾಜದಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ನವದೆಹಲಿ ಕೇಂದ್ರ ಆಯುಷ್ ಮಂತ್ರಾಲಯದ ಯೋಗ ಸರ್ಟಿಫಿಕೇಷನ್ ಬೋರ್ಡ್ ಕೇಂದ್ರ ಸಮಿತಿ ಸದಸ್ಯ ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಡಾ.ಕೆ.ರಾಘವೇಂದ್ರ ಆರ್. ಪೈಅವರು ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಯೋಗ ಕುಟೀರದ ನಿರ್ದೇಶಕರಾದ ರಾಧಾಕೃಷ್ಣ ಶೆಟ್ಟಿ, ಕಾರ್ಪೊರೇಟರ್ ಶ್ವೇತಾ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಟ್ರಸ್ಟಿ ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್ ರಾವ್, ಪ್ರೊ. ಇಶಾ ಆರ್, ಶ್ರೀಮತಿ. ಎ. ಮಿತ್ರ ಎಸ್. ರಾವ್, ರಿಜಿಸ್ಟಾರ್ ಡಾ. ಅನಿಲ್ ಕುಮಾರ್, ಉಪಕುಲಪತಿ ಡಾ.ಪಿ.ಎಸ್. ಐತಾಳ್, ಯೋಗ ಗುರು ಮುಸ್ತಫ, ಯೋಗ ಗುರು ಗೋಪಾಲ್ ಆಚಾರ್ಯ ಉಪಸ್ಥಿತರಿದ್ದರು.
ಯೋಗೋತ್ಸವದಲ್ಲಿ ಶಾರೀರಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ನೈತಿಕ ಮತ್ತು ಆಧ್ಯಾತ್ಮಿಕವ್ಯಕ್ತಿತ್ವ ವಿಕಾಸಕ್ಕೆ ಪೂರಕ ಯೋಗ ತಂತ್ರಗಳನ್ನು ಕಲಿಸಲಾಯಿತು. ಶಾರೀರಿಕ ದೃಢತೆಗೆ ಯೋಗ ನಡಿಗೆ ಪೈಸೂತ್ರ, ಕರ್ಣ ಚೈತನ್ಯ ಮಾಲಾಕ್ರಿಯೆ, ಗಣೇಶನಮನ ನಡಿಗೆ, ಹಿಮಾಲಯೌಗಿಕ ವ್ಯಾಯಾಮವನ್ನು, ಮಾನಸಿಕ ವಿಕಾಸಕ್ಕೆ ಪ್ರಾಣ ಚೈತನ್ಯ ಕ್ರಿಯೆ, ಯೋಗ ನಿದ್ರೆ, ಬೌದ್ಧಿಕ ವ್ಯಕ್ತಿತ್ವಕ್ಕೆ ಮೈಂಡ್ ಸೌಂಡ್ ರೇಸೊನೈಸ್ಸ್ ( ಮನೋ ತರಂಗ ಸಂತುಲನ ತಂತ್ರ ) ಭಾವನಾತ್ಮಕ ಸಂಸ್ಕಾರಕ್ಕೆ ಮಂತ್ರ ನಾದ ಯೋಗ, ಸೀತಾ ವೃಕ್ಷಧ್ಯಾನ, ಆಧ್ಯಾತ್ಮಿಕ ಪ್ರಗತಿಗೆ ಪ್ರಾಣಾಯಾಮ, ನಂದಿ ಉಸಿರಾಟ ಸಂಹಿತ ಧ್ಯಾನವನ್ನು ಕಲಿಸಲಾಯಿತು.
ಅಮೃತ ಯೋಗೋತ್ಸವದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ, ವಿವಿಧ ಯೋಗ ಸಂಸ್ಥೆಗಳ ಯೋಗ ಪಟುಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಆಸಕ್ತ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.
ಶ್ರೀನಿವಾಸ ವಿಶ್ವವಿದ್ಯಾಲಯದ ಅಭಿವೃದ್ಧಿ ರಿಜಿಸ್ಟಾರ್ ಡಾ . ಅಜಯ್ ಕುಮಾರ ಸ್ವಾಗತಿಸಿದರು. ಮೌಲ್ಯಮಾಪನ ರಿಜಿಸ್ಟಾರ್ ಡಾ. ಶ್ರೀನಿವಾಸ್ ಎಮ್ ಯ ಡಿ. ವಂದಿಸಿದರು. ಪ್ರೊ. ಶ್ರೀನಾಥ್ ರಾವ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಈ ಬೃಹತ್ ಅಮೃತಯೋಗೋತ್ಸವದಲ್ಲಿ ಪಾಲ್ಗೊಂಡ ಎಲ್ಲರಿಗೂ ಶ್ರೀನಿವಾಸ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಪತ್ರ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ