ಅಂದು ತುಸು ತಣ್ಣನೆ ಗಾಳಿ ಸೂರ್ಯ ನಿದ್ರಾ ಲೋಕಕ್ಕೆ ಜರುಗುವ ಹೊತ್ತು, ಹಾಗೆಯೇ ಕಣ್ಣು ಮುಚ್ಚಿ ಆನಂದಿಸುತಿದ್ದೇ , ಒಮ್ಮೆಲೇ ಕಣ್ತೆರೆದು ನೋಡಿದರೆ ವರ್ಣಿಸಲಾಗದ ಸೌಂದರ್ಯ, ಹಚ್ಚ ಹಸಿರು, ಮೋಡಗಳ ಮಧ್ಯೆ ಇರುವಂತೆ ಸುತ್ತಲೂ ಮಂಜು. ಇದರ ಸೌಂದರ್ಯವನ್ನು ಸವಿಯುತ್ತ ನಾಲ್ಕೈದು ಹೆಜ್ಜೆ ಮುಂದೆ ನಡೆದೆ ಅಲ್ಲಿ ನೋಡಿದರೆ ಹೂದೋಟಗಳಿಂದ ಅಲಂಕರಿಸಿದ ಸ್ವರ್ಗವೇ ಸೃಷ್ಟಿ ಆದಂತಿತ್ತು. ಆ ಪ್ರಕೃತಿ ನೋಟ ಸವಿಯಲು ಅಯ್ಯೋ ತನ್ನೆರಡು ಕಣ್ಣು ಕಡಿಮೆಯಾಗಿದ್ದೇನೋ ಎಂದೆನಿಸಿತು. ಆ ನಿಸರ್ಗದ ಸೌಂದರ್ಯವೂ ನನಗೆ ರಸದೌತಣ ಬಡಿಸಿದಂತಾಯಿತು.
ಪ್ರಾಯದ ವಯಸ್ಸಿನ ತರುಣನಾಗಿದ್ದ ನನಗೆ ಈ ನಿಸರ್ಗದ ಮಧ್ಯದಲ್ಲಿ ಯಾವುದು ರಂಬೆ, ಊರ್ವಶಿ, ಮೇನಕೆಯರ ನೃತ್ಯ ಇರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದುಕೊಂಡು ಮನದೊಳಗೆ ನಗುತ್ತಿದ್ದೇನು. ಅದೇ ಹೊತ್ತಿನಲ್ಲಿ ಎಲ್ಲಿಯೂ ದೂರದಲ್ಲಿ ಗೆಜ್ಜೆ ಶಬ್ದ... ಎದೇ ದಸಕ್ ಎಂದಿತು ಕೈ ಕಾಲು ನಡುಗಲಾರಂಭಿಸಿತು. ಮೈಯಲ್ಲಿ ಇದ್ದಕ್ಕಿದ್ದಂತೆ ಬೆವರು ನನ್ನ ಭ್ರಮೆ ಎಂದುಕೊಂಡು ಸುಮ್ಮನಾದೆ ಮತ್ತೆ ಅದೇ ಶಬ್ದ... ಭಯ ಇನ್ನಷ್ಟು ಹೆಚ್ಚಿತು ಏನೇ ಆಗಲಿ ಎಂದು ಆ ಗೆಜ್ಜೆ ಶಬ್ದ ನಾದದ ಕಡೆ ನಡೆದೆ. ಮತ್ತೂ ನಡೆದಂತೆ ಮಲ್ಲಿಗೆ ಹೂವಿನ ಪರಿಮಳ ಎಲ್ಲೋ ಅಜ್ಜಿ ಹೇಳಿದ ನೆನಪು ಹೆಣ್ಣು ದೆವ್ವಗಳು ಇದ್ದಾವೆ ಎಂದು ತಿಳಿಯುವುದೇ ಗೆಜ್ಜೆ ಹಾಗೂ ಹೂವಿನ ಪರಿಮಳದಿಂದ ಎಂದು. ಭಯದ ಜೊತೆಗೆ ಕುತೂಹಲವು ಹೆಚ್ಚಾಗ ತೊಡಗಿತ್ತು. ಪುನಹ ಮುಂದೆ ನಡೆದೆ, ಉದ್ದನೆಯ ಕೂದಲು ಕಂಡಂತಾಯಿತು ಯಾರು ನಿಂತಂತೆ ಬಾಸ ಹತ್ತಿರ ಹೋದೆ ಒಂದು ಅದ್ಭುತ ಎನಿಸಿತು ನಾನಂದುಕೊಂಡಂತೆ ರಂಬೆ, ಊರ್ವಶಿ, ಮೇನಕೆಯೇ ಆಗಿರಬಹುದು ಎಂದು ಖುಷಿ ಪಟ್ಟೆ ಇದು ಕನಸೋ ನನಸೋ ಎಂದೆನಿಸಿತು.
ತಿಳಿ ಗುಲಾಬಿ ಬಣ್ಣದ ಸೀರೆ ಉಟ್ಟು ಉದ್ದನೆಯ ಕೂದಲಿಗೆ ಮಲ್ಲಿಗೆ ಹೂವಿನೊಂದಿಗೆ ಒಂದು ಗುಲಾಬಿ ಹೂವು ಮುಡಿದು, ಕಿವಿಗೆ ಬಟ್ಟಲಿನಾಕಾರದ ಜುಮಿಕಿ ತೊಟ್ಟು, ಕಾಲಿನಲ್ಲಿ ಕಾಲ್ಗೆಜ್ಜೆ ಇದನ್ನೆಲ್ಲಾ ಕಂಡು ಹೊಟ್ಟೆಯಲ್ಲಿ ತಳವಳ, ಮುಖದಲ್ಲಿ ತನ್ನಷ್ಟಕ್ಕೆ ನಗು...
ಅವಳ ಸೌಂದರ್ಯಕ್ಕೆ ಮಾರು ಹೋದ ನಾನು ಹಿಂದಿನಿಂದಲೇ ತಬ್ಬಿಕೊಳ್ಳುವ ಎಂದು ಓಡಿದೇ ಮತ್ತೇ ಹಿಂದೆ ಕಾಲಿಟ್ಟೆ ಅಪಚಾರವಾಗಬಹುದೆಂದು. ಎಷ್ಟು ಬೇಗ ಅವಳ ಸೌಂದರ್ಯ ಸವಿತೇನೋ ಎಂಬ ಕುತೂಹಲದಿಂದ ಅವಳ ಬಳಿ ಹೋಗಿ ಯಾಕೆ ಭುಜ ಮುಟ್ಟಿದೆ. ತಿರುಗಿ ಕಂಡಲು ಒಮ್ಮೆ ಬೆಚ್ಚಿಬಿದ್ದೆ ಕಣ್ಣು ಬಿಟ್ಟು ನೋಡಿದರೆ ನನ್ನ ಹೆಂಡತಿ ಕಾಫಿ ಕಪ್ ಹಿಡಿದು ನಿಂತಿದ್ದಳು. ಆಗ ಗೊತ್ತಾದದ್ದು ಓ "ನಾ ಕಂಡದ್ದು ಕನಸು" ಎಂದು ಕನಸಿನಲ್ಲಿ ಒಮ್ಮೆಲೇ ಬೆಚ್ಚಿ ಬಿಳಲು ಕಾರಣವೂ ಸಹ ಇವಳೇ....
-ನೇಹಾ. N
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ