ನಿರಂತರ ಅಭ್ಯಾಸಗಳು ನಮ್ಮ ಜೀವನವನ್ನು ರೂಪಿಸುತ್ತವೆ: ಡಾ. ಲಕ್ಷ್ಮೀನಾರಾಯಣ

Upayuktha
0

ಬೆಳ್ತಂಗಡಿ: ನಿತ್ಯವೂ ಹೊಸ ಬಗೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ನಮ್ಮ ಜೀವನ ಮತ್ತು ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಎಸ್‌ಡಿಎಂ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನ ಡಾ. ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.


ಬೆಳ್ತಂಗಡಿಯ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 'ವಾರ್ಷಿಕ ಪ್ರತಿಭೋತ್ಸವ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.


ಸಮಯ ಎಲ್ಲರಿಗೂ ಒಂದೇ ರೀತಿಯಾಗಿರುತ್ತದೆ, ಅದನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು ಮುಖ್ಯ, ಆರಂಭದ ದಿನಗಳಲ್ಲಿ ಒಳ್ಳೆಯ ಸ್ನೇಹಿತರು, ಪುಸ್ತಕಗಳು, ಉತ್ತಮ ಗುರುಗಳ ಸಹವಾಸದಿಂದ ಅಮೂಲ್ಯ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.


ಜೀವನ ನಿರ್ಮಿಸಿ ಕೊಳ್ಳುವುದು ನಮ್ಮ ಕೈನಲ್ಲೆ ಇದ್ದು, ಪ್ರತಿಭೆಯನ್ನು ಗುರಿಯ ಅಳವಡಿಸಿಕೊಳ್ಳುವ ಮೂಲಕ ಯಶಸ್ಸನ್ನು ಕಂಡು ಕೊಳ್ಳಬಹುದು ಎಂದು ಬೆಳ್ತಂಗಡಿಯ ಬಿಸಿಎಂ ಹಾಸ್ಟೆಲ್ ಗಳ ವಿಸ್ತರಣಾಧಿಕಾರಿ ಜೋಸೆಫ್ ನಿಲಯದ ಮಕ್ಕಳಿಗೆ ಹಿತನುಡಿದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಿಲಯದಿಂದ ಆಯೋಜಿಸಲಾಗಿದ್ದ ಕ್ರೀಡಾ ಕೂಟ ದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿಲಯ ಪಾಲಕ ಚಂದ್ರಪ್ಪ, ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್, ಲೋಕೇಶ್, ಶಶಾಂಕ್ ಉಪಸ್ತಿತರಿದ್ದರು. ರಕ್ಷಿತ್ ನಿರೂಪಿಸಿ, ಮನೋಜ್ ವಂದಿಸಿದರು.


ಚಿತ್ರ, ವರದಿ- ರಂಜಿತ್ ಗೌಡ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top