ಮೈಸೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ, ಟಿ ಕೆ ಬಡಾವಣೆ, ಮೈಸೂರು ಇವುಗಳ ಸಂಯುಕ್ತಾಶ್ರಯದಲ್ಲಿ ಜನವರಿ 31 ರಿಂದ ಫೆಬ್ರವರಿ 3 ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಜನವರಿ 31, ಮಂಗಳವಾರ : ಸಂಜೆ 6 ಗಂಟೆಗೆ-ಹರೇ ಶ್ರೀನಿವಾಸ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ-ಶ್ರೀ ಶ್ರೀಪಾದರಾಜಾಚಾರ್ಯರಿಂದ "ಶ್ರೀ ಪ್ರಹ್ಲಾದರಾಜರ ಅವತಾರ" ಪ್ರವಚನ.
ಫೆಬ್ರವರಿ 1, ಬುಧವಾರ : ಸಂಜೆ 6 ಗಂಟೆಗೆ-ಚಿನ್ಮಯಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ-ಶೀ ಶ್ರೀಪಾದರಾಜಾಚಾರ್ಯರಿಂದ "ಶ್ರೀ ವ್ಯಾಸರಾಜರ ಅವತಾರ" ಪ್ರವಚನ.
ಫೆಬ್ರವರಿ 2, ಗುರುವಾರ : ಸಂಜೆ 6 ಗಂಟೆಗೆ-"ಹರಿನಾಮ ಸಂಕೀರ್ತನೆ". ಗಾಯನ : ಕು|| ನಾಗಶ್ರೀ ಶ್ರೀರಾಮ ಭಟ್, ಕೀ-ಬೋಡ್೯ : ಶ್ರೀ ರವಿಶಂಕರ್, ತಬಲಾ : ಶ್ರೀ ಸುಜಯೀಂದ್ರರಾವ್.
ಫೆಬ್ರವರಿ 3, ಶುಕ್ರವಾರ : ಸಂಜೆ 6 ಗಂಟೆಗೆ-ಶ್ರೀ ವಿಶ್ವೇಶಕೃಷ್ಣ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ-ಶ್ರೀ ಶ್ರೀಪಾದರಾಜಾಚಾರ್ಯರಿಂದ "ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಅವತಾರ" ಪ್ರವಚನ.
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, #1ಟಿ, 10ನೇ ಮುಖ್ಯರಸ್ತೆ, 4ನೇ ಹಂತ, ಟಿ ಕೆ ಬಡಾವಣೆ, ಮೈಸೂರು-570009
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ