ತೆಂಕನಿಡಿಯೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಐಕ್ಯೂಎಸಿ, ಇತಿಹಾಸ ವಿಭಾಗ ಹಾಗೂ ರಾಜಕೀಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ. ಭಾರತ ಮತ್ತು ಐರೋಪ್ಯ ಒಕ್ಕೂಟದ ಸಂಬಂಧಗಳು ಕುರಿತಾದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಯಿತು.
ಐರೋಪ್ಯ ಒಕ್ಕೂಟದ ಪಾರ್ಲಿಮೆಂಟಿನ ಮಾಜಿ ಸಂಸದರಾದ ರಾಬರ್ಟ್ ಇನಾನ್ಸ್ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿ ಭಾರತದ ಕುರಿತಾದ ಅಭಿಪ್ರಾಯವನ್ನು ಉಲ್ಲೇಖಿಸುತ್ತಾ ಯುರೋಪ್‍ನಲ್ಲಿರುವಂತೆ ಭಾರತದಲ್ಲೂ ಸಾಕಷ್ಟು ವೈವಿಧ್ಯತೆ ಇದ್ದು. ಸ್ವಾತಂತ್ರ್ಯಾ ನಂತರ ತನ್ನದೇ ಸಂಸದೀಯ ಪ್ರಜಾಪ್ರಭುತ್ವ ಅಳವಡಿಸಿಕೊಂಡು ಇಂದು ಜಗತ್ತಿನ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುವ ಎಲ್ಲಾ ಸಾಮಥ್ರ್ಯ ಹೊಂದಿದೆ ದೇಶದ ಭವಿಷ್ಯ ರೂಪಿಸುವ ಯುವಶಕ್ತಿಯನ್ನು ಹೊಂದಿರುವ ಭಾರತೀಯರ ಸಾಮಥ್ರ್ಯ ಸಾಧನೆಯ ಕುರಿತಾಗಿ ಸಾಕಷ್ಟು ಯುರೋಪ್‍ನಲ್ಲಿ ಗೌರವ ಭಾವನೆಯಿದ್ದು.
ಭಾರತೀಯ ಸಮುದಾಯದ ಜನರು ಅಲ್ಲಿನ ಪ್ರಗತಿಗೂ ಸಹಕರಿಸುತ್ತಿದ್ದು ಶಿಕ್ಷಣದ ಕುರಿತಾದ ಭಾರತೀಯರ ಆಸಕ್ತಿಯನ್ನು ಯುರೋಪಿನ ಜನ ಮೆಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿರುವುದು ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸುವಲ್ಲಿಒಂದು ಸವಲಾಗಿಪರಿಣಮಿಸಿದೆ ಎಂದು ತಿಳಿಸಿದರು. ಇನ್ನೀರ್ವ ಸಂಪನ್ಮೂಲ ವ್ಯಕ್ತಿಗಳಾದ ಮಣಿಪಾಲ ವಿ.ವಿ.ಯ ಯುರೋಪಿಯನ್ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ನೀತಾ ಇನಾಂದಾರ್ ಹಾಗೂ ಮಾನವಿಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ್ ಶೆಟ್ಟಿ ಜಿಯೋಪಾಲಿಟಿಕ್ಸ್ ದೃಷ್ಠಿಕೋನದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟದ ಸಂಬಂದ ಹಾಗೂ ಯುರೋಪ್‍ನಲ್ಲಾಗುತ್ತಿರುವ ಬದಲಾವಣೆಗಳ ಕುರಿತಾಗಿ ವಿಚಾರ ಮಂಡಿಸಿದರು.
ವಿಚಾರ ಸಂಕಿರಣಕ್ಕೆ ಚಾಲನೆಯಿತ್ತ ಪ್ರಾಂಶುಪಾಲ ಪ್ರೊ. ಸುರೇಶ್ ರೈ. ಕೆ. ಅಪಾರ ಮಾನವ ಸಂಪನ್ಮೂಲ ಹೊಂದಿರುವ ಭಾರತದಂತ ರಾಷ್ಟ್ರದ ಜೊತೆಗೆ ಸಂಬಂಧ ಬಲಗೊಳಿಸಲು ಬಹುತೇಕ ರಾಷ್ಟ್ರಗಳು ಉತ್ಸುಕರಾಗಿದ್ದು ಐರೋಪ್ಯ ಒಕ್ಕೂಟವೂ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಹೆಜ್ಜೆಯಿಡುವಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಪ್ರೊ. ಗೋಪಾಲಕೃಷ್ಣ ಎಂ. ಗಾಂವ್ಕರ್, ಶ್ರೀ ರಾಧಾಕೃಷ್ಣ, ತಿಮ್ಮಣ್ಣ ಜಿ. ಭಟ್ ಉಪಸ್ಥಿತರಿದ್ದರು. ಶ್ರೀ ಕೃಷ್ಣ sಸಾಸ್ತಾನ, ಡಾ. ವೆಂಕಟೇಶ್ ಹೆಚ್.ಕೆ., ರವಿ ಚಿತ್ರಾಪುರ, ಡಾ. ಮಹೇಶ್ ಕುಮಾರ್ ಕೆ.ಇ. ಸಹಕರಿಸಿದರು. ಶ್ರೀ ಪ್ರಶಾಂತ್ ನೀಲಾವರ ವಿಚಾರ ಸಂಕಿರಣ ಆಯೋಜಿಸಿದರೆ ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಕಾಲೇಜಿನ ಆಸಕ್ತ ಪದವಿ ವಿದ್ಯಾರ್ಥಿಗಳ ಜೊತೆ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ವಿಚಾರ ಸಂಕಿರಣಕ್ಕೂ ಪೂರ್ವದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಧ್ವಜಾರೋಹಣದ ಮೂಲಕ ಗಣರಾಜ್ಯೋತ್ಸವ ಆಚರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ