ಎಂಜಿಎಂ ಕಾಲೇಜಿನಲ್ಲಿ ಪ್ರಾಕ್ತನ ಕಲಾ ವಿದ್ಯಾರ್ಥಿಗಳ ಪುನರ್ ಸಮ್ಮಿಲನ

Upayuktha
0

ಉಡುಪಿ: 1982ರಲ್ಲಿ ಉಡುಪಿ ಮಹಾತ್ಮ ಗಾಂಧಿ ಮೆಮೇೂರಿಯಲ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಲ್ಲಿ ಸುಮಾರು 30 ಮಂದಿ ವಿದ್ಯಾರ್ಥಿಗಳು ದಿನಾಂಕ 22ರ ರವಿವಾರದಂದು ತಮ್ಮ ಮಾತೃ ಸಂಸ್ಥೆಯ ಪರಿಸರದಲ್ಲಿ ಸಭೆ ತಮ್ಮ 40 ವರುಷಗಳ ಹಿಂದಿನ ನೆನಪುಗಳನ್ನು ಹಂಚಿಕೊಂಡು ಸಂಭ್ರಮಿಸಿದರು.


ನಿವೃತ್ತಿ ಪ್ರಾಂಶುಪಾಲರು ಅಂದು ಇದೇ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದ ಪ್ರೊ.ಎಂ.ಎಲ್. ಸಾಮಗ ಅಂದಿನ ಕಾಲದಲ್ಲಿ ಗುರು ಶಿಷ್ಯರ ನಡುವಿನ ಸಂಬಂಧ ನೆನಪಿಸಿಕೊಂಡರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಚಿತ್ರಪಾಡಿ ಲಕ್ಷ್ಮೀನಾರಾಯಣ ಕಾರಂತರು ಮಾತನಾಡಿ ಮುಂದಿನ ವರ್ಷದಿಂದ ಕಾಲೇಜಿಗೆ ಅಮೃತೇೂತ್ಸವ ಆಚರಣೆಯ ಶುಭ ಸಂದರ್ಭದಲ್ಲಿ ತಮ್ಮೆಲ್ಲರ ಸಹಭಾಗಿತ್ವದಲ್ಲಿ  ನಡೆಯಲ್ಲಿದೆ ಎಂದು ಶುಭ ಹಾರೈಸಿದರು.

ಎಂ.ಜಿ.ಎಂ. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯತ್ವ ಸ್ವೀಕರಿಸ ಬೇಕೆಂದು ವಿನಂತಿಸಿ ಕೊಂಡರು. ಪ್ರಾಕ್ತನ ವಿದ್ಯಾರ್ಥಿ ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಗಣಪತಿ ಭಟ್ ಕೆ.ಬೆಳ್ತಂಗಡಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸುಮಾರು 30 ಮಂದಿ ಹಳೆ ವಿದ್ಯಾರ್ಥಿಗಳು ಸಂಘದ ಸದಸ್ಯರಾಗಿ ಹೆಸರು ನೊಂದಾಯಿಸಿಕೊಂಡರು. ಹಳೆ ವಿದ್ಯಾರ್ಥಿಗಳ ಪುನರ್ ಮಿಲನ್ ಕಾರ್ಯಕ್ರಮದ ಮುಂದಾಳತ್ವವನ್ನು ವಹಿಸಿದ್ದ  ಹಳೆ ವಿದ್ಯಾರ್ಥಿ ರಾಮದಾಸ್ ಪೈ ಸ್ವಾಗತಿಸಿದರು. ಮುಂಬಯಿ ಬೆಂಗಳೂರು ಕೊಡಗು ಹಾಗೂ ವಿವಿಧ ಕಡೆಯಿಂದ ಹಳೆ ವಿದ್ಯಾರ್ಥಿಗಳು ಆಗಮಿಸಿದ್ದರು. ಹಳೆ ವಿದ್ಯಾರ್ಥಿಗಳಾದ ಶೈಲಜಾ ವಾಣಿ ಭಟ್ಟ ಪ್ರಾರ್ಥನೆಗೈದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top