ಮಣಿಪಾಲ್: ಮತದಾನದ ಹಕ್ಕು ಕೇವಲ ರಾಜಕೀಯ ಹಕ್ಕು ಮಾತ್ರವಲ್ಲ ನೈತಿಕ ಜವಾಬ್ದಾರಿಯೂ ಹೌದು. ಚುನಾವಣಾ ಸಂದರ್ಭದಲ್ಲಿ ಯಾರು ಮತದಾನ ಮಾಡಿರುತ್ತಾರೊ ಅವರಿಗೆ ಮಾತ್ರ ಸರ್ಕಾರ ಮತ್ತು ವಿಪಕ್ಷಗಳು ತಪ್ಪಿ ನಡೆದಾಗ ಅವರನ್ನು ಪ್ರಶ್ನಿಸುವ ನೈತಿಕ ಹಕ್ಕು ಬರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡಿದ ಮತದಾರರನ್ನು ಮಾತ್ರ ಪೂಣ೯ ಪ್ರಮಾಣದ ಪ್ರಜೆಗಳು ಎಂದು ಗುರುತಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಯುವ ಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿ ಕೊಳ್ಳುವುದರ ಜೊತೆಗೆ ಚುನಾವಣೆಯಲ್ಲಿ ತಮ್ಮ ಅಭಿಪ್ರಾಯವನ್ನು ಮತದಾನ ಮಾಡುವುದರ ಮೂಲಕ ಅಭಿವ್ಯಕ್ತಿಗೊಳಿಸುವು ದರೊಂದಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹೊಣೆಗಾರಿಕೆ ಪ್ರಕಟ ಪಡಿಸ ಬೇಕು" ಎಂದು ರಾಜಕೀಯ ವಿಶ್ಲೇಷಕ ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಅಭಿಪ್ರಾಯಿಸಿದರು.
ಮಣಿಪಾಲ್ ಕಾಲೇಜ್ ಆಫ್ ನಸಿ೯ಂಗ್ ವತಿಯಿಂದ ಹಮ್ಮಿಕೊಂಡ ಮತದಾನದ ಅರಿವು ಕಾರ್ಯಕ್ರಮ ಉದ್ಘಾಟನೆ ಮಾಡಿ ಉಪನ್ಯಾಸವಿತ್ತರು. ಸಂಸ್ಥೆಯ ಡೀನ್ ಡಾ.ಜುಡಿತ್ ಎ.ನೊರೊಹ್ನ ಸಭೆಯ ಅಧ್ಯಕ್ಷತೆ ವಹಿಸೊದ್ದರು. ವಿವಿಧ ರಾಜ್ಯಗಳ ಮತದಾನದ ಹಕ್ಕು ಪಡೆದಿರುವ ವಿದ್ಯಾರ್ಥಿಗಳು ಈ ಉಪನ್ಯಾಸ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ