ಜನವರಿ 30 ಶಿವಮೊಗ್ಗದಲ್ಲಿ ರಾಜ್ಯ ಸರ್ವೋದಯ ಮಂಡಲ ಸಮಾವೇಶ

Upayuktha
0

ಶಿವಮೊಗ್ಗ : ರಾಷ್ಟ್ರೀಯ ಶಿಕ್ಷಣ ಸಮಿತಿ ಮತ್ತು ಸರ್ವೋದಯ ಮಂಡಲಗಳ ಸಹಯೋಗದಲ್ಲಿ ಇದೇ 30 ರಂದು ಸ್ಥಳೀಯ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗಾಂಧೀ ಸಂಸ್ಮರಣೆ , ಹುತಾತ್ಮರ ದಿನ ಮತ್ತು ರಾಜ್ಯ ಸರ್ವೋದಯ ಸಮಾವೇಶ ಹಮ್ಮಿಕೊಂಡಿದೆ. ಶಿಕ್ಷಣ ಸಮಿತಿ ಅಧ್ಯಕ್ಷ ಜಿ. ನಾರಾಯಣ ರಾವ್ ಅವರ ಎಸ್ ಸರ್ವಾಧ್ಯಕ್ಷ ತೆಯಲ್ಲಿ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಂ.ಎನ್.ನಾಗರಾಜ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.


ಮೇಲುಕೋಟೆ ಜನಪದ ಸೇವಾ ಟ್ರಸ್ಟ್ ನ ಡಾ.ಸುಮನಸ್ ಕೌಲಗಿ ಯುವಜನರನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡುವರು.ಜಿಲ್ಲಾ ಸರ್ವೋದಯ ಅಧ್ಯಕ್ಷ ಭಗವಂತ ರಾವ್ ಉಪಸ್ಥಿತರಿರುವರು.


ಇದರ ಅಂಗವಾಗಿ , ಸ್ವದೇಶಿ ಶಿಕ್ಷಣದ ಪರಿಕಲ್ಪನೆಗಳು, ಸರ್ವೋದಯ ತತ್ವಗಳ ಕ್ರಿಯಾನ್ವಯ , ಯುವಜನರಲ್ಲಿ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಮರಸ್ಯಕ್ಕಾಗಿ ಜಾಲತಾಣ ಗಳ ಸದುಪಯೋಗ ಕುರಿತ ನಾಲ್ಕು ಗೋಷ್ಠಿ ಗಳನ್ನು ಆಯೋಜಿಸಲಾಗಿದೆ.


ಸ್ಥಳೀಯ ಕಾಲೇಜ್ ಗಳಿಂದ ಆಯ್ದ  ಕು. ಹೆಚ್.ಆರ್. ದೀಪಶ್ರಿ, ಕು.ಸು ಪ್ರದಾ, ಕು. ನಿಸರ್ಗ, ಕು. ಜಯಶ್ರೀ, ಕು.ಶಾಲಿನಿ ಹಾಗೂ ರಂಜನ್ ಕುಮಾರ್, ಕು.ಅನನ್ಯ, ಕು. ದಿವ್ಯ ನಡೆಸಿ ಕೊಡಲಿದ್ದಾರೆ.


ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಹೆಚ್.ಎಸ್.ಸುರೇಶ್ ಸಮಾರೋಪ ನುಡಿಗಳನ್ನು ಹೇಳಲಿದ್ದು ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಸಾಹಿತಿಗಳೂ ಆದ ಎಂ.ಎನ್.ಸುಂದರ್ ರಾಜ್ ಉಪಸ್ಥಿತರಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್. ಎಸ್.ನಾಗಭೂಷಣ ತಿಳಿಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top