ಸಿಲಿಕಾನ್ ಸಿಟಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ ಕಾಲೇಜ್ : ವಾರ್ಷಿಕೋತ್ಸವ

Chandrashekhara Kulamarva
0




ಬೆಂಗಳೂರು : ಸಿಲಿಕಾನ್ ಸಿಟಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ್ ಕಾಲೇಜ್ ನಲ್ಲಿ ಕಣ್ಮಣಿ 2022-23 ಎಂಬ ಶೀರ್ಷಿಕೆಯಡಿಯಲ್ಲಿ ಕಾಲೇಜು ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 


ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ವಾರ್ಷಿಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. 


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಸಪ್ನ ಮುಖ್ಯಸ್ಥರು ಕಾನೂನು ವಿಭಾಗ, ಕ್ರೈಸ್ಟ್ ವಿಶ್ವವಿದ್ಯಾಲಯ, ರವರು ವಿದ್ಯಾರ್ಥಿಗಳನ್ನು ಕುರಿತು ಯುವಕರು ಸಮಾಜದ ಆಸ್ತಿ ಆಗಾಗಿ ನವ ಸಮಾಜವನ್ನು, ನವ ಭಾರತವನ್ನು ನಿರ್ಮಾಣ ಮಾಡಬೇಕು ಎಂದು ಹಿತನುಡಿಗಳನ್ನು ನುಡಿದರು. 


ಭರತನಾಟ್ಯ ಕಲಾವಿದರಾದ ಶ್ರೀರಕ್ಷಾ ರವರು, ಡಾ.ಸಮೀರ್ ಸಿಂಹ , ಅಧ್ಯಕ್ಷರು ಸಿಲಿಕಾನ್ ಸಿಟಿ ಅಕಾಡೆಮಿ, ಶ್ರೀ. ರವಿ , ಕಾರ್ಯದರ್ಶಿಗಳು ಸಿಲಿಕಾನ್ ಸಿಟಿ ಅಕಾಡೆಮಿ , ಪ್ರೊ.ಕೀರ್ತಿ ಬದಿಯಡ್ಕ ಪ್ರಾಂಶುಪಾಲರು, ಉಪ ಪ್ರಾಂಶುಪಾಲರಾದ ಪ್ರೊ. ಅರುಣ್ ಕುಮಾರ್ ಆರ್ ಹಾಗೂ ಭೋಧಕ, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.



إرسال تعليق

0 تعليقات
إرسال تعليق (0)
To Top