ಅಂತರ್ ಕಾಲೇಜು ಖೋ-ಖೋ ಚಾಂಪಿಯನ್ಶಿಪ್: ಆಳ್ವಾಸ್ 12ನೇ ಬಾರಿ ಚಾಂಪಿಯನ್

Chandrashekhara Kulamarva
0




ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಶ್ರೀ ಭುವನೇಂದ್ರ ಕಾಲೇಜಿನ ಜಂಟಿ ಆಶ್ರಯದಲ್ಲಿ ಹೆಚ್ ವಿ ಕಮಲೇಶ್ ಸ್ಮರಣಾರ್ಥ ನಡೆದ ಮಹಿಳೆಯರ ಅಂತರ್ ಕಾಲೇಜು  ಖೋ-ಖೋ ಚಾಂಪಿಯನ್ಶಿಪ್‍ನಲ್ಲಿ  ಆಳ್ವಾಸ್ ಕಾಲೇಜು 12ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.


ಈ ಪಂದ್ಯಾಕೂಟದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು. ಪಂದ್ಯಕೂಟದ ಅಂತಿಮ ಪಂದ್ಯದಲ್ಲಿ ಆಳ್ವಾಸ್ ಕಾಲೇಜ್ ಜಿಎಫ್‍ಜಿಸಿ ವಾಮದಪದವು ತಂಡವನ್ನು 10 ಅಂಕಗಳು ಹಾಗೂ  ಇನ್ನಿಂಗ್ಸ್‍ನ ಅಂತರದಿಂದ  ಮಣಿಸಿತು.  ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಆಳ್ವಾಸ್ ತಂಡದ ಪ್ರೇಕ್ಷಾ ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ  ಅಭಿನಂದಿಸಿದ್ದಾರೆ. 


إرسال تعليق

0 تعليقات
إرسال تعليق (0)
To Top