ಡಾ. ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಡಾ. ಸಿ.ಎಸ್. ವಾರುಣಿ ಕಡ್ಡಿರವರಿಗೆ 'ಶ್ರೀ ಪುರಂದರ ಅನುಗ್ರಹ 'ಪ್ರಶಸ್ತಿ ಪ್ರಧಾನ

Chandrashekhara Kulamarva
0

 


ಆಂಧ್ರಪ್ರದೇಶ : ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ಡಾ. ಸಿ.ಎಸ್. ವಾರುಣಿ ಕಡ್ಡಿರವರಿಗೆ 'ಶ್ರೀ ಪುರಂದರ ಅನುಗ್ರಹ 'ಪ್ರಶಸ್ತಿ ಪ್ರಧಾನ ನಡೆಯಿತು.


ಆಂಧ್ರಪ್ರದೇಶದ ವಿಶ್ವವಿಖ್ಯಾತ ತಿರುಮಲ ಕ್ಷೇತ್ರದ ಆಸ್ಥಾನ ಮಂಟಪಂನಲ್ಲಿ ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ಏರ್ಪಡಿಸಿದ್ದ ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಿತ 'ಪುರಂದರ ಅನುಗ್ರಹ' ಪ್ರಶಸ್ತಿಯನ್ನು ದಾಸ ಸಾಹಿತ್ಯದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಸಂಸ್ಕೃತಿ ಚಿಂತಕ ,ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ , ಸಂಗೀತ ವಿದುಷಿ ಡಾ.ಸಿ ಎಸ್ ವಾರುಣಿ ಕಡ್ಡಿ ಹಾಗೂ ತಿರುಪತಿ ಪದ್ಮಾವತಿ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ವಿದುಷಿ ದ್ವಾರಂ ಲಕ್ಷ್ಮಿ ರವರಿಗೆ ಸನ್ಮಾನ ಪತ್ರ ,ಶ್ರೀವಾರಿ ಶೇಷ  ವಸ್ತ್ರವನ್ನು ನೀಡಿ ಸತ್ಕರಿಸಲಾಯಿತು.


ದಾಸ ಸಾಹಿತ್ಯದ ಆದ್ಯ ಪ್ರವರ್ತಕ ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯ ನಿಧಿ ತೀರ್ಥ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿದ್ದ ಸಮಾರಂಭದಲ್ಲಿ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ವಿಶೇಷ ಅಧಿಕಾರಿ ಪಿ ಆರ್ ಆನಂದತೀರ್ಥಾಚಾರ್ಯ ರವರು ತಿರುಮಲೆಗೂ ಹಾಗೂ ದಾಸ ಸಾಹಿತ್ಯ ಪರಂಪರೆಗಿರುವ ವಿಶೇಷ ನಂಟನ್ನು ಸ್ಮರಿಸುತ್ತಾ ಪುರಂದರ ದಾಸರ ಆರಾಧನಾ ಕಾರ್ಯಕ್ರಮದ ನಿಮಿತ್ತವಾಗಿ ನಡೆದ ಈ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿದರು. 


ಕನ್ನಡ ಸವಿನುಡಿಯಲ್ಲಿ ಬರೆದಿರುವ ದಾಸರ ಕೀರ್ತನೆಗಳನ್ನು ಸಹಸ್ರಾರು ಮಂದಿ ಭಕ್ತರಿಗೆ ಪ್ರಸಾರ ಮಾಡುತ್ತಿರುವ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಕಾರ್ಯವನ್ನು ಪೂಜ್ಯಶ್ರೀಗಳು ಶ್ಲಾಘಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top