ಪುತ್ತೂರಿನ ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳು ಅತ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಆಯ್ಕೆ

Upayuktha
0



ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ 6 ವಿದ್ಯಾರ್ಥಿಗಳು ನೈರುತ್ಯ ವಲಯ ಅಂತರ್ ವಿಶ್ವವಿದ್ಯಾನಿಲಯ ಅತ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ. ಜನವರಿ 9 ರಿಂದ 12 ರ ವರೆಗೆ ಚೆನ್ನೈನ ತಮಿಳ್ನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಈ ಕ್ರೀಡಾ ಕೂಟವು ನಡೆಯಲಿದೆ.


ತೃತೀಯ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅಭಿರಂಜನ್.ಎಚ್ 100ಮೀಟರ್ ಓಟ ಹಾಗೂ 4*100ಮೀ ರಿಲೇ ಮತ್ತು ಕೀರ್ತಿರಾಜ್.ಕೆ.ಎಸ್ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ, ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಲೋಹಿತ್ ಆರ್ ಗೌಡ 100 ಮೀಟರ್ ಓಟ ಹಾಗೂ 4*100ಮೀ ರಿಲೇ ಸ್ಪರ್ಧೆಯಲ್ಲಿ, ದ್ವಿತೀಯ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿನಿಯರಾದ ರಕ್ಷಿತಾ. ಐ 20 ಕಿ ಮೀ ನಡಿಗೆ ಸ್ಪರ್ಧೆಯಲ್ಲಿ, ಜಯಶ್ರೀ. ಬಿ ಹೆಪ್ಟತ್ಲಾನ್ ಸ್ಪರ್ಧೆಯಲ್ಲಿ ಹಾಗೂ ಪವಿತ್ರಾ. ಜಿ ಉದ್ದಜಿಗಿತ ಮತ್ತು ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


ಕಳೆದ ತಿಂಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 200 ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಅತ್ಯುತ್ತಮವಾಗಿ ಸಾಧನೆಯನ್ನು ಮಾಡಿದ ಈ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಒಂದೇ ಕಾಲೇಜಿನ 6 ವಿದ್ಯಾರ್ಥಿಗಳು ಅಂತರ್ ವಿಶ್ವವಿದ್ಯಾನಿಲಯ ಅತ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿರುವುದು ಇದೇ ಮೊದಲು. 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top