'ಮತದಾನ' ಶ್ರೇಷ್ಠ ದಾನ: ನಾಗೇಶ್ ಕೆ

Upayuktha
0


ಪುತ್ತೂರು: 16ನೇ ಶತಮಾನದಲ್ಲಿ ಲ್ಯಾಟಿನ್ ಶಬ್ದದ ಮೂಲಕ ಪರಿಚಿತವಾದ ಪದ ವೋಟ್. 1956 ರಲ್ಲಿ ಭಾರತದಲ್ಲಿ ಸಂವಿಧಾನಾತ್ಮಕವಾಗಿ ಜಾರಿಗೆ ಬಂದು ಇಂದಿಗೆ ಸದೃಢ ರಾಷ್ಟ್ರದ ನಿರ್ಮಾಣಕ್ಕೆ ಕಾರಣವಾಗಿರುವುದು ಮತದಾನ ಎಂದು ಪುತ್ತೂರಿನ ತಾಲೂಕು ಕಛೇರಿಯ ನಿವೃತ್ತ ಉದ್ಯೋಗಿ ನಾಗೇಶ್ ಕೆ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಪೊಲಿಟಿಕಲ್ ಫಾರಂ, ಎನ್ಎಸ್ಎಸ್ ಘಟಕ, ಎನ್‌ಸಿಸಿ ಘಟಕ, ರೆಡ್ ಕ್ರಾಸ್ ಮಾನವಿಕ ಸಂಘ ಎಲೆಕ್ಟ್ರಾನ್ ಲಿಟರಸಿ ಕ್ಲಬ್ ಹಾಗೂ ಐಕ್ಯೂಎಸಿ ಯ ಸಹಯೋಗದೊಂದಿಗೆ ನಡೆದ ರಾಷ್ಟ್ರೀಯ ಮತದಾರರ ದಿನದ ಆಚರಣೆಯ ಸಂದರ್ಭದಲ್ಲಿ ಅತಿಥಿಗಳಾಗಿ ಮಾತನಾಡಿದರು.


ವಿದ್ಯಾರ್ಥಿಗಳು ದೇಶದ ಬೆನ್ನೆಲುಬು 18 ವರ್ಷ ತುಂಬಿದ ಪ್ರತಿಯೊಬ್ಬರ ಮತವು ಮಹತ್ವದ್ದಾಗಿದ್ದು ಒಳ್ಳೆಯ ಅಭ್ಯರ್ಥಿಯ ಆಯ್ಕೆ ಹಾಗೂ ಗೆಲುವು ದೇಶದ ನಿರ್ಮಾಣದಲ್ಲಿ ಬಲುಮುಖ್ಯ ಪಾತ್ರ ವಹಿಸುತ್ತದೆ. ಈ ಸಂಸ್ಥೆಯ ಹಲವು ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಜೋಡಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ನನಗೆ ಹೆಮ್ಮೆಯ ವಿಚಾರ. ನಾವು ಮತದಾರರಾಗಿ ಹೆಮ್ಮೆ ಪಡೋಣ,ಮತ ಚಲಾಯಿಸೋಣ,ದೇಶಕ್ಕೆ ಒಳ್ಳೆಯ ಅಭ್ಯರ್ಥಿಗಳನ್ನು ಆರಿಸೋಣ ಎಂದು ಅಭಿಪ್ರಾಯಪಟ್ಟರು.


ಮತದಾನವೆಂಬುದು ನಿರ್ಲಕ್ಷ್ಯ ಮಾಡುವ ವಿಚಾರವಲ್ಲ ಮತದಾನಕ್ಕೂ ಅದರದೇ ಆದ ಇತಿಹಾಸವಿದೆ ನಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಸೂಕ್ತ ವ್ಯಕ್ತಿಯನ್ನು ಆರಿಸಿದಾಗ ಮಾತ್ರ ನಮ್ಮ ಗ್ರಾಮ ರಾಜ್ಯ ಬೆಳೆಯಲು ಸಾಧ್ಯವೆಂದು ಡಾ.ಶ್ರೀಧರ್ ನಾಯಕ್ ಅಧ್ಯಕ್ಷೀಯ ನುಡಿಗಳನ್ನು ನುಡಿದರು. 

ವೇದಿಕೆಯಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಪ್ರಕಾಶ್, ವಾಣಿಜ್ಯ ವಿಭಾಗದ ಉಪನ್ಯಾಸಕ ಲೆ.ಭಾಮಿ ಅತುಲ್ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯಶ್ರೀ ಪಾಲ್ತಾಡಿ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top