ವಿಟ್ಲ ಜಾತ್ರೆಯಲ್ಲಿ ಕಣ್ಣು ಕೋರೈಸುತ್ತಿದೆ ಮುಳಿಯ ಜ್ಯುವೆಲ್ಸ್ ಆಭರಣಗಳ ಹೊಳಪು

Upayuktha
0

ವಿಟ್ಲ: ಶ್ರೀ ಚೆನ್ನಕೇಶವ ದೇವಸ್ಥಾನವು ಜಾತ್ರಾ ವೈಭವದಿಂದ ಕಂಗೊಳಿಸುತ್ತಿದೆ. ನಾನಾ ರೀತಿಯ ಅಲಂಕಾರಗಳು, ಪೂಜೆ - ಆರಾಧನೆ, ಮನರಂಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಇದರೊಂದಿಗೆ ಭಕ್ತರು ಚೆನ್ನಕೇಶವನ ದರ್ಶನ ಪಡೆದುಕೊಂಡು ಭಕ್ತಿ ಭಾವದಿಂದ ಪುಳಕಿತರಾಗುತ್ತಿದ್ದಾರೆ.

ದೇವಾಲಯದ ಆವರಣದಲ್ಲಿ ವಿವಿಧ ಮಳಿಗೆಗಳು ಜನರನ್ನು ಬರಮಾಡಿಕೊಳ್ಳುವಂತಿದೆ. ಹಲವಾರು ಮಳಿಗೆಗಳ ನಡುವೆ ಮುಳಿಯ ಜ್ಯುವೆಲ್ಸ್ ಮಳಿಗೆಯು ವಿಶೇಷವಾಗಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. 75 ವರ್ಷಗಳ ಪರಂಪರೆ ಹೊಂದಿರುವ ಪುತ್ತೂರಿನ ಪ್ರತಿಷ್ಠಿತ ಆಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ವಿಟ್ಲ ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ನೆಲ್ಯಾಡಿಯಲ್ಲೂ ಮುಳಿಯ ಜ್ಯುವೆಲ್ಸ್ ಸಿಲ್ವರಿಯಾ ಫ್ರಾಂಚೈಸಿ ಶಾಪ್ ಆರಂಭಗೊಂಡಿದ್ದು, ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದೀಗ ವಿಟ್ಲ ಜಾತ್ರೆಯಲ್ಲಿ ಮುಳಿಯ ಸಿಲ್ವರಿಯಾ ಮಳಿಗೆಯನ್ನು ಗ್ರಾಹಕರು ಹಾಗೂ ದೇವಸ್ಥಾನ ವ್ಯವಸ್ಥಾಪಕರಾದ ಕೃಷ್ಣಯ್ಯ ಮತ್ತು ಗಣೇಶ್ ನಾಯಕ್ ಇವರಿಂದ ಉದ್ಘಾಟಿಸಲಾಗಿದೆ. ಇದರೊಂದಿಗೆ ಮುಳಿಯ ಜ್ಯುವೆಲ್ಸ್ ನ ಡೈಮಂಡ್ ಫೆಸ್ಟ್ ಕೂಡ ಜಾತ್ರೆಯಲ್ಲಿ ನಡೆಯುತ್ತಿದೆ.

ವಿಭಿನ್ನ ಶೈಲಿ, ವಿನ್ಯಾಸದ ಅತ್ಯಾಕರ್ಷಕ ಆಭರಣಗಳು ಮಳಿಗೆಯಲ್ಲಿದ್ದು ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಸಿಲ್ವರಿಯಾ ಮಳಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ನೀವು ಜಾತ್ರೆಗೆ ಬಂದಾಗ ಮುಳಿಯ ಜ್ಯುವೆಲ್ಸ್ ಸಿಲ್ವರಿಯಾ ಮಳಿಗೆಗೆ ಭೇಟಿ ನೀಡದೆ ತೆರಳಿದರೆ, ನೀವು ಅಮೂಲ್ಯವಾದುದನ್ನು ಕಳೆದುಕೊಂಡಂತೆಯೇ ಸರಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top