ಪುತ್ತೂರು: ನಾಡಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಸೋಮವಾರದಿಂದ (ಜ.9) ವಿಶೇಷ ವಜ್ರಾಭರಣಗಳ ಉತ್ಸವ (ಯುನಿಕ್ ಡೈಮಂಡ್ ಫೆಸ್ಟ್) ಪ್ರಾರಂಭವಾಗಲಿದೆ. ಉತ್ಸವವು ಜ.25ರ ವರೆಗೆ ನಡೆಯಲಿದೆ.
ಮುಳಿಯ ಜ್ಯುವೆಲ್ಸ್‌ನ ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಗಳಲ್ಲಿ ಈ ಯುನಿಕ್ ಡೈಮಂಡ್ ಫೆಸ್ಟ್ ನಡೆಯಲಿದೆ.
ಕೇವಲ 4,850 ರೂ.ಗಳ ಕೈಗೆಟುಕುವ ಬೆಲೆಗಳಿಂದ ವಿವಿಧ ಶ್ರೇಣಿಗಳ ಅಮೂಲ್ಯ ಡೈಮಂಡ್ಸ್ ಮತ್ತು ಕಿಸ್ನ ಗೋಲ್ಡ್ ಅಂಡ್ ಡೈಮಂಡ್ ಜ್ಯುವೆಲ್ಲರಿಗಳು ಲಭ್ಯವಿರುತ್ತವೆ.
ವಜ್ರದ ಆಭರಣಗಳ ಮೇಲೆ ಶೇ 95ರಷ್ಟು ವಿನಿಮಯ ಮೌಲ್ಯ ಹಾಗೂ ಶೇ 90ರಷ್ಟು ಬೈಬ್ಯಾಕ್ ಮೌಲ್ಯಗಳನ್ನು ನೀಡುವುದಾಗಿ ಮುಳಿಯ ಜ್ಯುವೆಲ್ಸ್ ಪ್ರಕಟಿಸಿದೆ.
ಜ.9ರಂದು ಸೋಮವಾರ ಬೆಳಗ್ಗೆ ದೀಪೋಜ್ವಲನದೊಂದಿಗೆ ಉತ್ಸವ ಪ್ರಾರಂಭವಾಗಲಿದೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಬೊಳುವಾರಿನ ಏಸ್ ಮೋಟಾರ್ಸ್ ಮಾಲೀಕರಾದ ಶ್ರೀ ಆಕಾಶ್ ಐತಾಳ್ ಮತ್ತು ಆಕಾಶ್ ಕೋಚಿಂಗ್ ಸೆಂಟರ್‌ನ ಮಾಲಕರಾದ ಶ್ರೀಮತಿ ನಾಗಶ್ರೀ ಐತಾಳ್ ಭಾಗವಹಿಸಲಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ