ಬೆಂಗಳೂರು : ಮಲ್ಲೇಶ್ವರದ ಈಜುಕೊಳದ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ವ ನವಮಿ ಪ್ರಯುಕ್ತ ಜನವರಿ 22 ರಿಂದ 30ರ ವರೆಗೆ ಒಂಭತ್ತು ದಿನಗಳ ಕಾಲ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ
ಕಾರ್ಯಕ್ರಮದ ಎಲ್ಲಾ ದಿನಗಳಲ್ಲೂ ಬೆಳಗ್ಗೆ ವಿವಿಧ ಹೋಮಗಳು ಜರುಗಲಿದ್ದು, ಸಂಜೆಯ ಕಾರ್ಯಕ್ರಮಗಳಲ್ಲಿ ಪ್ರತಿದಿನ ಸಂಜೆ 6-30ಕ್ಕೆ ನಾಡಿನ ಹೆಸರಾಂತ ಪಂಡಿತರುಗಳಿಂದ ಪ್ರವಚನಗಳನ್ನು ಏರ್ಪಡಿಸಿದೆ. ಜನವರಿ 22-ಶ್ರೀ ಮರುತಾಚಾರ್ ರವರಿಂದ "ವೇದಗಳಲ್ಲಿ ಆಚಾರ್ಯರ ಮಹಿಮೆ", ಜನವರಿ 23-ಶ್ರೀ ವೇಣುಗೋಪಾಲಾಚಾರ್ ಗುಡಿ ರವರಿಂದ "ಶ್ರೀಹರಿವಾಯುಸ್ತುತಿ", ಜನವರಿ 24-ಶ್ರೀ ಶ್ರೀನಿಧಿ ಆಚಾರ್ ಉತ್ತನೂರು ರವರಿಂದ "ದ್ವೈತ ಸಿದ್ಧಾಂತದ ಪ್ರಮೇಯಗಳು", ಜನವರಿ 25-ಶ್ರೀ ಅಂಬರೀಶ ಆಚಾರ್ ರವರಿಂದ "ಮಧ್ವಾಚಾರ್ಯರ ದೃಷ್ಟಿಯಲ್ಲಿ ಭೀಷ್ಮರು", ಜನವರಿ 26-ಡಾ|| ವಿನಾಯಕಾಚಾರ್ ರವರಿಂದ "ಕೃಷ್ಣಾಮೃತ ಮಹಾರ್ಣವ", ಜನವರಿ 27-ಶ್ರೀ ಬ್ರಹ್ಮಣ್ಯಾಚಾರ್ ರವರಿಂದ "ಶ್ರೀ ಮಧ್ವವಿಜಯ-5ನೇ ಸರ್ಗ", ಜನವರಿ 28-ಶ್ರೀ ಡಂಬಳ ಜಯಸಿಂಹಾಚಾರ್ ರವರಿಂದ "ಆಧುನಿಕ ಪ್ರಪಂಚಕ್ಕೆ ಆಚಾರ್ಯರ ಕೊಡುಗೆ" ಜನವರಿ 29-ಶ್ರೀ ಕಲ್ಯಾ ಶ್ರೀಕಾಂತಾಚಾರ್ ರವರಿಂದ "ಬಳಿಕ್ತಾ ಸೂಕ್ತ" ಹಾಗೂ ಜನವರಿ 30-ಶ್ರೀ ಆಯನೂರು ಮಧುಸೂದನಾಚಾರ್ ರವರಿಂದ "ಆಧುನಿಕ ಯುವಕರಿಗೆ ಮಧ್ವಾಚಾರ್ಯರ ಸಂದೇಶ" ವಿಷಯಗಳನ್ನು ಕುರಿತು ಪ್ರವಚನಗಳನ್ನು ಏರ್ಪಡಿಸಿದೆ ಎಂದು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ಅವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ