ಮಂಗಳೂರು: ಮಂಜೇಶ್ವರದ ರಾಗಸುಧಾ ಸಂಗೀತ ಶಾಲೆಯು, ಮಂಗಳೂರಿನ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ, ವಿಕಾಸ ಮೀಯಪದವು ಹಾಗೂ ಊರ ಪರವೂರ ಡಾ. ಬನಾರಿ ಅಭಿಮಾನಿಗಳ ಸಹಕಾರದೊಂದಿಗೆ ಜನವರಿ 8 ರ ಭಾನುವಾರದಂದು ಮಂಜೇಶ್ವರದಿಂದ ವೃತ್ತಿ ನಿವೃತ್ತಿ ಹೊಂದಿ, ಸುಳ್ಯದ ಗುಡ್ಡಡ್ಕದಲ್ಲಿ ನೆಲೆಸಿರುವ ಸಾಹಿತಿ, ವೈದ್ಯ ಹಾಗೂ ಯಕ್ಷಗಾನ ಅರ್ಥಧಾರಿ ಡಾ. ರಮಾನಂದ ಬನಾರಿಯವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೀಯಪದವಿನ ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ರಾಗಾಭಿನಂದನ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಮೀಯಪದವಿನ ಹಿರಿಯ ಪಾಕತಜ್ಞರಾದ ಟಿ. ಶ್ರೀಕೃಷ್ಣ ಹೊಳ್ಳ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಅಪರಾಹ್ನ 4 ಗಂಟೆಗೆ ಅಭಿನಂದನಾ ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರೂ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಆದ ಎಂ. ಎಸ್. ಮಹಾಬಲೇಶ್ವರ ಉದ್ಘಾಟಿಸಲಿದ್ದಾರೆ. ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಡಾ. ಎಂ. ಪ್ರಭಾಕರ ಜೋಷಿ ಅಭಿನಂದನಾ ಭಾಷಣ ಮಾಡುವರು. ಸಾಹಿತಿ ಡಾ. ವಸಂತಕುಮಾರ ಪೆರ್ಲ ಹಾಗೂ ನಾಟಕಕಾರ ಶಶಿರಾಜ್ ಕಾವೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಡಾ. ಮುರಳೀಮೋಹನ ಚೂಂತಾರು, ಕೆ. ಆರ್. ಜಯಾನಂದ, ಬಿ.ವಿ.ರಾಜನ್, ಹರ್ಷದ್ ವರ್ಕಾಡಿ, ಹರಿಶ್ಚಂದ್ರ ಮಂಜೇಶ್ವರ, ಪದ್ಮನಾಭ ಕಡಪ್ಪರ, ಕೊಣಾಜೆ ಶಂಕರ ಭಟ್, ಶ್ರೀಧರ ರಾವ್ ಆರ್. ಎಂ., ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮೊದಲಾದ ಗಣ್ಯರ ಉಪಸ್ಥಿತಿ ಇರಲಿದೆ. ಬಳಿಕ ರಾಗಸುಧಾ ವಿದ್ಯಾರ್ಥಿಗಳಿಂದ ರಮಾನಂದ ಬನಾರಿ ಬರೆದ ಗೀತೆಗಳ ಪ್ರಸ್ತುತಿ ಹಾಗೂ ಶ್ರೀಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಲೆ ಜರಗಲಿದೆ ಎಂದು ರಾಗಸುಧಾ ಸಂಗೀತ ಶಾಲೆಯ ಸಂಚಾಲಕ ವಿಶ್ವನಾಥ ಭಟ್ ಕೆ. ಜಿ. ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ