(ನಿಗೂಢ ಮರ್ಡರ್ ನೆಡೆದ ಆ ತೀರ ಪ್ರದೇಶದಲ್ಲಿ ಕಂಡ ಗುರುತಿನ ಒಂದೆರೆಡು ಹೆಜ್ಜೆಗಳು!!)
ಯಕ್ಷಗಾನದ ರಂಗಸ್ಥಳ. ಪ್ರಸಂಗ ಗದಾಯುದ್ಧ. ಕುರುಕ್ಷೇತ್ರ ಯುದ್ಧದ ನಂತರದ ಈ ಪ್ರಸಂಗದಲ್ಲಿ ಭೀಮ ದುರ್ಯೋಧನನನ್ನು ಕೊಲ್ಲುವ ದೃಶ್ಯ.
ಭೀಮ ದುರ್ಯೋಧನನ್ನು ಕೊಂದು ಬಿಟ್ಟ!!.
ಕೊಂದಂತೆ ಅಭಿನಯಿಸಬೇಕಾದ ಭೀಮ ನಿಜವಾಗಿಯೂ ದುರ್ಯೋಧನನನ್ನು ಕೊಂದು ಬಿಟ್ಟ!!
ಮರ್ಡರ್!!!
ವೈಶಂಪಾಯನ ತೀರದಲ್ಲಿ ಸಾಯಬೇಕಾಗಿದ್ದು ದುರ್ಯೋಧನ. ಆದರೆ ಕತೆಯಲ್ಲಿ ದುರ್ಯೋಧನ ಪಾತ್ರ ಮಾಡಿದ್ದ ಪಾತ್ರಧಾರಿ ವೆಂಕಟಪ್ಪ ಹೆಗ್ಗಡೆ ಸತ್ತು ಹೋದ!!!
'ಪಾಂಡವರಿಗೆ ಅರ್ಧ ರಾಜ್ಯ ಇರಲಿ, ಒಂದು ಗ್ರಾಮವನ್ನೂ ಕೊಡುವುದಿಲ್ಲ' ಎಂದ ದುರ್ಯೋಧನನ ಪಾತ್ರ ಮಾಡಿದ್ದ ವೆಂಕಟಪ್ಪ ಹೆಗ್ಗಡೆ ಈ ಚಿತ್ರದೊಳಗಡೆ ಕಲಾವಿದ ಮಾತ್ರ ಅಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷ ಕೂಡ.
ಆ ವೆಂಕಟಪ್ಪ ಹೆಗ್ಗಡೆಯನ್ನು ಯಕ್ಷಗಾನ ರಂಗಸ್ಥಳದಲ್ಲಿ ಹತ್ಯೆ ಮಾಡಲಾಯಿತು!!!.
ಎಸ್. ಇಟ್ ಈಸ್ ಮರ್ಡರ್!!!!
ಕೊಂದಿದ್ದು, ಕೊಂದು ಕೃಷ್ಣ ಜನ್ಮ ಸ್ಥಾನ ಸೇರಿದ್ದು ಭೀಮನ ಪಾತ್ರಧಾರಿ ಕೃಷ್ಣ ಭಟ್ರು!! ಚಿತ್ರದ ನಾಯಕ.
ಹಾಗಾದರೆ ಪಾತ್ರಧಾರಿಗಳ ಮಧ್ಯ ರಾಜಕೀಯ ದ್ವೇಷ ಇತ್ತೆ!!?
ಇಲ್ಲ!!!.
ಕೊಂದಿದ್ದು ಏಕೆ? ಉದ್ದೇಶ ಏನು?
ಅದೇ ಚಿತ್ರದ ಹೈಲೆಟ್ ಕತೆ!!.
ಅದಕ್ಕೆ ಸಿನಿಮಾ ನೋಡಬೇಕು.
ಮಹಾಭಾರತದಲ್ಲಿನ ಅಂಬೆಯ ಪಾತ್ರವನ್ನು ಸ್ವಲ್ಪ ಮಟ್ಟಿಗೆ ಹೋಲುವ ನಾಯಕಿ, (ವೈಜಯಂತಿ ಅಡಿಗ) ಅವರ ಪಾತ್ರ ಕ್ಲೇಮ್ಯಾಕ್ಸ್‌ನಲ್ಲಿ ನೀವು ದೊಡ್ಡ ಸ್ಕ್ರೀನ್‌ನಲ್ಲೇ ನೋಡಬೇಕು.
**
ಕುರುಕ್ಷೇತ್ರದಲ್ಲಿ ಮೊದಲ ಬಾರಿ ಚಕ್ರವ್ಯೂಹ ಭೇದಿಸಲು ಹೋದ ಅಮಾಯಕ ಅಭಿಮನ್ಯು ಸಾಯುವ ಹಾಗೆ, ಇಲ್ಲಿ ರಂಗಸ್ಥಳದಲ್ಲಿ ಮೊದಲ ಬಾರಿ ಅಭಿಮನ್ಯು ಪಾತ್ರ ಮಾಡಿದ ನಯನಾ ಕೂಡ ಸಾಯುತ್ತಾಳೆ!!.
ಅದೂ ಕೂಡ ನಿಗೂಢವಾದ ಮರ್ಡರ್!!
ಈ ನಯನಾ ಸಾವಿನ ಸಂದರ್ಭದಲ್ಲಿ, ನಯನಾಳಿಗೆ ಯಕ್ಷಗಾನ ಗುರುವಾಗಿದ್ದ ಕೃಷ್ಣ ಭಟ್ರು ಹತ್ತು ವರ್ಷಗಳು ಕಾಣೆಯಾಗುತ್ತಾರೆ!!???
ಆ ಬಿಚ್ಚಿಕೊಳ್ಳುವ ಮತ್ತೊಂದು ಕತೆಗೆ ನೀವು ಸಿನಿಮಾ ಮಂದಿರಕ್ಕೇ ಬರಬೇಕು!!
***
ಕುರುಕ್ಷೇತ್ರ ಯುದ್ಧದ ನಂತರ ವೈಶಂಪಾಯನ ಸರೋವರ ಪ್ರವೇಶಿಸುವಾಗ ದುರ್ಯೋಧನ ಹಿಮ್ಮುಖವಾಗಿ ಹೆಜ್ಜೆ ಇಡುತ್ತ ನೆಡೆಯುತ್ತಾನೆ. ನೋಡಿದವರಿಗೆ ಈತ ಸರೋವರದಿಂದ ವಾಪಾಸ್ ಹೋಗುವಂತೆ ಹೆಜ್ಜೆ ಗುರುತು ಕಾಣಬೇಕು ಹಾಗೆ!!.
ವೈಶಂಪಾಯನ ತೀರ ಸಿನಿಮಾದಲ್ಲೂ ಕತೆಯನ್ನು ಫ್ಲಾಶ್ ಬ್ಯಾಕ್ ಶೈಲಿಯಲ್ಲಿ ಹೇಳಲಾಗಿದೆ. ಫ್ಲಾಶ್ ಬ್ಯಾಕ್‌ನ ಶೈಲಿಯಲ್ಲಿ ಇನ್ನೊಂದು ವಿಶೇಷ ಅಂದ್ರೆ ನೆಡೆದ ಕತೆಯನ್ನು ಇಬ್ಬರು - ಒಬ್ಬ ಅಪರಾಧಿ ಜೈಲ್ ಒಳಗಡೆ, ಮತ್ತೊಬ್ಬ ಪೋಲೀಸ್ ಅಧಿಕಾರಿ ಪತ್ರಕರ್ತರಿಗೆ - ಕತೆ ಹೇಳುತ್ತಿರುವಂತೆ ವಿಭಿನ್ನವಾಗಿ ಚಿತ್ರಿಸಲಾಗಿದೆ.
ನಿರ್ದೇಶಕರ ಹಿಂದಿನ ಕಿರು ಚಿತ್ರ ಹುಚ್ಚಿಕ್ಕಿ ಯಲ್ಲಿದ್ದ ಕಲಾವಿದರ ಜೊತೆ ಶೃಂಗೇರಿ ಸುತ್ತ ಮುತ್ತಲಿನ ಅನೇಕ ಕಲಾವಿದರನ್ನು ಈ ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಪರಿಚಯಿಸಲಾಗಿದೆ. ಇವರಲ್ಲದೆ ಪರಿಚಿತ ಸ್ಟಾರ್ ಮೌಲ್ಯ ಹೊಂದಿದ ಪ್ರಮೋದ್ ಶೆಟ್ಟಿ (ಇನ್ಸ್‌ಪೆಕ್ಟರ್) ಮತ್ತು ರಮೇಶ್ ಭಟ್ (ನಾಯಕಿ ತಂದೆ) ಅಭಿನಯಿಸಿದ್ದಾರೆ. ಅವರ ಅಭಿನಯಕ್ಕೆ ಫುಲ್ ಸ್ಕೋರ್. ಮೂರು ಮುತ್ತು ತಂಡದ ಕಲಾವಿದರ ಹಾಸ್ಯವೂ ಚನಾಗಿದೆ.
ಶೃಂಗೇರಿ ಸುತ್ತ ಮುತ್ತಲಿನ ಮಲೆನಾಡ ದೃಶ್ಯಗಳನ್ನು ತೆರೆಯ ಮೇಲೆ ನೋಡುವಾಗ ಅದ್ಭುತವಾಗಿ ಕಾಣಿಸುತ್ತದೆ. ಶೃಂಗೇರಿ ಸಮೀಪದ ವೈಕುಂಠಪುರವನ್ನು ಬಹಳ ಹಿಂದೆ 'ಸಂಸ್ಕಾರ' ದಲ್ಲಿ ಬಳಸಿಕೊಳ್ಳಲಾಗಿತ್ತು. ಈಗ ಅದೇ ವೈಕುಂಠಪುರವನ್ನು ವೈಶಂಪಾಯನ ಚಿತ್ರದ ಅನೇಕ ದೃಶ್ಯಗಳಲ್ಲಿ ಕಾಣಬಹುದು.
ಮಹಾಬಲ ಮೂರ್ತಿ ಕೊಡ್ಳೇಕೆರೆಯವರ ಸಣ್ಣ ಕತೆ ಆಧರಿಸಿದ ಚಿತ್ರ ಕತೆಯೂ ಚಿತ್ರದ ಪ್ಲಸ್ ಪಾಯಿಂಟ್.
ನಿರ್ದೇಶಕ ಬೇಗಾರ್ ರಮೇಶ್ ವೈಶಂಪಾಯನ ತೀರ ದ ಮೂಲಕ ಹವಾ ಎಬ್ಬಿಸುವ ಭರವಸೆಯೊಂದಿಗೆ ಗಾಂಧಿನಗರದ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಟ್ಟಾಯ್ತು!!.
ವೈಶಂಪಾಯನ ತೀರ ಯಶಸ್ವಿಯಾಗಲಿ- ಆಗುತ್ತೆ. ಪ್ರಶಸ್ತಿ ಬರಲಿ- ಬರುತ್ತೆ.
ವೈಶಂಪಾಯನ ತೀರ ಚಿತ್ರ ತಂಡಕ್ಕೆ ಅಭಿನಂದನೆಗಳು, ಶುಭಾಶಯಗಳು.
-ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ