ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪದವಿ ಪೂರ್ವ ವಾರ್ಡಿನ ಜ್ಯೋತಿನಗರ ಆಟದ ಮೈದಾನ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಜ್ಯೋತಿನಗರದ ಆಟದ ಮೈದಾನವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಸರಿಸುಮಾರು 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಪರಿಸರದ ಯುವಕರು ಈ ಹಿಂದೆ ಮಾಡಿಕೊಂಡ ಮನವಿಯಂತೆ ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೊರೇಟರ್ ಭಾಸ್ಕರ್ ಮೈೂಯ್ಲಿ, ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ಸುಜನ್ ದಾಸ್ ಕುಡುಪು, ಪ್ರದೀಪ್, ಶಕಿಲ್ ಕುಮಾರ್, ಅಶ್ವಿನ್ ಶೆಟ್ಟಿ, ನವೀನ್, ರಾಜೇಂದ್ರ ಬೈತುರ್ಲಿ, ದಿನೇಶ್, ಅಶ್ವಿನ್, ನಿಶಾಂತ್, ಶಶಿಕಲಾ, ರೋಹಿತ್, ಸುಮಿತ್ರ, ಹರಿಣಿ ಪ್ರೇಮ್, ವೆಂಕಟರಮಣ ಸಿ.ಎ, ಗಣೇಶ್, ಲೋಕೇಶ್, ಉದಯ್, ರಾಹುಲ್, ಅಭಿಲಾಷ್, ಸಂದೀಪ್, ಪೂಜಾ ಪ್ರದೀಪ್, ನವ್ಯ ಶಕಿಲ್, ಯಶ್ ಕುಮಾರ್, ರಮ್ಯ ಲಕ್ಷ್ಮಣ್, ಕಮಲಾಕ್ಷಿ ಮೋಹನ್ ದಾಸ್, ರೇಖಾ, ಶಾಂತಾ ರಾಜೇಂದ್ರ ಪ್ರಸಾದ್, ವಿದ್ಯಾ ಆನಂದ್, ಸಿಂಚನ, ಸ್ನೇಹಾ, ಉಜ್ಮ ಆಬಿದ್, ಮುಮತಾಜ್ ಸಬೀರ್, ರತ್ನ ದೇವೋಜಿ ರಾವ್, ವಿತೇಶ್, ಕೇಶವ ಚೌಕಿ, ದಿನೇಶ್ ಜ್ಯೋತಿ ನಗರ, ಪ್ರಸಾದ್ ಜ್ಯೋತಿ ನಗರ, ನವೀನ್ ಡೈರಿ, ಅನಿಲ್ ಡೈರಿ, ಪ್ರಸಾಂತ್ ಡೈರಿ, ಅಶ್ವಿನ್ ಅಮೀನ್, ಗಣೇಶ್ ಚೌಕಿ, ಹರೀಶ್ ಕೆ.ಎಚ್.ಬಿ, ವೀತು, ಉದಯ್ ಮುಂತಾದವರು ಉಪಸ್ಥಿತರಿದ್ದರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ