ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು, ಉಜಿರೆಯ ಎನ್.ಎಸ್.ಎಸ್ ಘಟಕವು, ದಿನಾಂಕ 7.1.2026ರಂದು ದತ್ತು ಶಾಲೆಯಾದ ಸ.ಹಿ.ಪ್ರಾ. ಶಾಲೆ ಮುಂಡತ್ತೋಡಿ, ಪೆರ್ಲದಲ್ಲಿ ವಿಸ್ತರಣಾ ಹಾಗೂ ಶೈಕ್ಷಣಿಕಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮವನ್ನು ನಿರೂಪಿಸಿದ ಸ್ವಯಂಸೆವಕ ಯಕ್ಷಿತ್‌ರವರು ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿ "ಗಿಡವಾಗಿರುವಾಗಲೇ ಅದನ್ನು ಬೇಕಾದ ರೀತಿಯಲ್ಲಿ ಬಗ್ಗಿಸಿದರೆ, ಮುಂದೆ ಅದು ಮರವಾದಾಗ ಸದೃಢವಾಗಿ ಬೆಳೆಯುತ್ತದೆ. ಹಾಗೇ ಮಕ್ಕಳಿಗೆ ಈಗಿನಿಂದಲೇ ಮನಸ್ಸಿನಲ್ಲಿ ಮೌಲ್ಯಗಳನ್ನು ತುಂಬಿದರೆ, ಮುಂದೆ ಅವರು ದೇಶದ ಸಂಪತ್ತು ಆಗುವುದರಲ್ಲಿ ಸಂದೇಹವಿಲ್ಲ." ಎಂದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಮೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ, "ಸ್ವಯಂಸೇವಕರು ತಮ್ಮ ಸೇವೆಯಿಂದ ಇತರರಲ್ಲಿಯೂ ಸೇವಾಭಾವನೆ ಮೂಡಿಸುತ್ತಾರೆ. ಅವರೊಂದಿಗೆ ಕೈ ಜೋಡಿಸುವುದು ನಮ್ಮ ಧರ್ಮ. ಮಕ್ಕಳ ಮನಸ್ಸಲ್ಲಿ ನಾವು ಏನು ತುಂಬುತ್ತೇವೋ ಅದೇ ಗಟ್ಟಿಯಾಗಿರುತ್ತವೆ. ಆದ್ದರಿಂದ ಸಾವಧಾನ ಚಿತ್ತದಿಂದ ನಾವು ಜಾಗೃತರಾಗಿ ಅವರಿಗೆ ಹೇಳಿಕೊಡಬೇಕು" ಎಂದರು.
ಶಾಲಾ ಅಭಿವೃದ್ಧಿ ಹಾಗೂ ಮೇಲೆ ಸುವಾರಿ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ರೇವತಿಯವರು ಮುಖ್ಯ ಅತಿಥಿಯಾಗಿ ಮಾತನಾಡಿ "ಕಾಲೇಜಿನಿಂದ ಅಣ್ಣ ಅಕ್ಕಂದಿರು ಬರುತ್ತಾರೆ ಎನ್ನುವಾಗಲೇ ಮಕ್ಕಳಿಗೆ ಎಲ್ಲಿಲ್ಲದ ಆಸಕ್ತಿ ಬರುತ್ತದೆ. ಶಿಕ್ಷಕರಿಗಿಂತ ವಿದ್ಯಾರ್ಥಿಗಳೇ ಕಲಿಸುವಾಗ ಮಕ್ಕಳು ಹೆಚ್ಚು ಕುತೂಹಲದಿಂದ ಆಲಿಸುತ್ತಾರೆ" ಎಂದರು.
ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಲಕ್ಷ್ಮೀನಾರಾಯಣ ಕೆ.ಎಸ್, ಹಾಗೂ ಶ್ರೀಮತಿ ದೀಪಾ ಆರ್. ಪಿ. ಹಾಗೇ ಶಾಲಾ ಶಿಕ್ಷಕರಾದ ಶ್ರೀಮತಿ ಲೀಲಾ, ಶ್ರೀಮತಿ ಪವಿತ್ರಾ ಉಪಸ್ಥಿತರಿದ್ದರು.
ಸ್ವಯಂಸೇವಕರಾದ ಅಭಿಷೇಕ್, ವಿಘ್ನೇಶ್, ಅಂಜನಾ ಕೆ. ರಾವ್ ಪ್ರಾರ್ಥಿಸಿದರು. ಸ್ವಯಂಸೇವಕರಾದ ಸುಬ್ರಹ್ಮಣ್ಯ ಸ್ವಾಗತಿಸಿ, ತ್ರಿಶೂಲ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ