ಪಕ್ಕದ ಮನೆಯ ಸಂತು ಅಣ್ಣನ ತಂಗಿ ಅಮ್ಮಿ ಅಕ್ಕನ ಸಿಮಂತದ ಸಂಭ್ರಮ, ನಮ್ಮ ಕಡೆಯಿಂದ ಮಿನಿ ಬಸ್ ಇದ್ರು, ನಾನು ಮತ್ತು ಗೆಳೆಯ ಪಚ್ಚು ಬೈಕ್ ಅಲ್ಲಿ ಅಮ್ಮಿ ಅಕ್ಕ ನ ಗಂಡನ ಮನೆಗೆ ಹೊರಟೆವು.
ಅಲ್ಲಿ ಅಮ್ಮಿ ಅಕ್ಕ ನ ಮದುವೆ ದಿವಸ ನೋಡಿದ ಜುಮ್ಕಿ ಹಾಕಿದ ಹುಡುಗಿ ಇದ್ಲು, ಅ ಹುಡುಗಿ ಇವಳೇವಾ! ಅಂತ ಡೌಟ್ ಬಂತು, ನೋಡುವಾಗ ಆ ಮುಖ ಅವಳದೇ ಅಲ್ಲೇ ಒಂದು ಸ್ಮೈಲ್ ಕೊಟ್ಟೆ, ಅಮ್ಮಿ ಅಕ್ಕನ ಸೀಮಂತ ಶಾಸ್ತ್ರ ಆಗ್ತಾ ಇತ್ತು. ಬಗೆ ಬಗೆ ತಿಂಡಿ ತಿನಸನ್ನು ಇಟ್ಟಿದ್ರು, ತುಳುನಾಡಿನ ಸಂಪ್ರದಾಯದ ಪ್ರಕಾರ ಎರಡು ಮಕ್ಕಳನ್ನು ಅಮ್ಮಿ ಅಕ್ಕನ ಹತ್ತಿರ ಕುರಿಸಿದ್ರು, ಆದರೆ ನನ್ನ ಗಮನ ಈ ಜುಮ್ಕಿ ಹುಡುಗಿಯ ಕಡೆ ಇತ್ತು. ಆ ಹುಡುಗಿಯ ಹತ್ತಿರ ಹೋಗಿ ಮಾತಾಡಿಸಿದೆ, ಅಮ್ಮಿ ಅಕ್ಕನ ಔತನ ಕೂಟದಲ್ಲಿ ನಾವು ಕ್ಲೋಸ್ ಆಗಿ ಮಾತಾಡ್ತಾ ಇದ್ವಿ ನಾವು ಮಾಡಿದ ಗಮ್ಮತ್ ಎಲ್ಲಾ ಹೇಳಿದೆ ಆದರೆ ಅವಳು "ಓ ಹೌದ" ("ಓ ಅಂದೇ ") ಎಂದು ಹೇಳಿ ಸುಮ್ಮನಾದಲು ನಾನು ಫ್ಲಾಪ್ ಅದದ್ದನು ನೋಡಿ ನನ್ನ ಗೆಳೆಯರು ನಕ್ಕರು..
ಸೀಮಂತ ಶಾಸ್ತ್ರ ಮುಗಿದ ತಕ್ಷಣ ಊಟದ ಸಮಯ ಆಯ್ತು "ಮತ್ತೆ ಊಟಕ್ಕೆ ಹೋಗುವ " ಎಂದು ನಾನು ಪಚ್ಚು ಹತ್ರ ಹೇಳಿದೆ ಅವ ಸರಿ ಎಂದ. ಸ್ವಲ್ಪ ಹೊತ್ತು ಬಿಟ್ಟು ನಾನು ನನ್ನ ಗೆಳೆಯ ಭರ್ಜರಿಯಾಗಿ ಊಟ ಮಾಡಲು ಪ್ರಾರಂಭಿಸಿದೆವು.ಅವಳು ಸ್ವಲ್ಪ ದೂರದಲ್ಲಿ ಇದ್ಲು, ಅಷ್ಟೊತ್ತಿಗೆ ಒಬ್ಬ ಸ್ವಿಫ್ಟ್ ಕಾರ್ ನಿಂದ ಇಳಿದು ಬಂದ ಸ್ವಲ್ಪ ಫಿಟ್ ಜೀವ ಸ್ಟ್ಯಾಂಡರ್ಡ್ ಇದ್ದ ಅವನು ಅವಳ ಹತ್ರ ಮಾತಾಡ್ಲಿಕೆ ಶುರು ಮಾಡಿದ. ಅವಳ ಸಂಬಧಿಕರು ಇದ್ರು ಅವ ತುಂಬಾ ಸಲುಗೆಯಿಂದ ಮಾತಾಡ್ತಾ ಇದ್ದ. ಮನಸಿಗೆ ನೋವಾಯಿತು ಊಟ ಮಾಡುವಾಗ ಬಡಿಸಿದ ಮೊಟ್ಟೆಯಲ್ಲೇ ಅವನ ತಲೆಗೆ ಹೊಡಿಯುವ ಅಂತ ಮನಸ್ ಆಯಿತು, ಬಯಕೆ ಊಟದಲ್ಲಿ ಇದ್ದ ಸಿಹಿ ಜೆಲೇಬಿ ಕಹಿ ಆದ ಅನುಭವ.
ಆಗಷ್ಟೇ ಅಮ್ಮಿ ಅಕ್ಕ ಸ್ಟೇಜ್ ಯಿಂದ ಕೆಳಗೆ ಇಳಿದು ಬಂದ್ರು, ಅವರ ಹತ್ರ ಈ ಜುಮ್ಕಿ ಹುಡುಗಿ ಯ ಬಗ್ಗೆ ಕೇಳಿದೆ ಅವರು ಹೇಳಿದ್ರು "ಅವನು ಅವಳನ್ನು ಮದುವೆ ಆಗುವ ಹುಡುಗ" ಎಂದು, ಆಗ ನನ್ನ ಮನಸು ಭಾರವಾಯಿತು ಪಚ್ಚು ಗೆ ಅರ್ಜೆಂಟ್ ಕೆಲಸ ಇದ್ದ ಕಾರಣ ಅವ ಹೋದ ನಾನು ಬಯಕೆಗೆ ನಮ್ಮ ಕಡೆಯಿಂದ ಬಂದ ಮಿನಿ ಬಸ್ ಗೆ ಹೋಗಿ ಕುಳಿತೆ, ಅಷ್ಟೊತ್ತಿಗೆ ಸುಮತಿ ಅಕ್ಕ ನ ಮಗಳು ಪಂಚಮಿ ಬಂದ್ಲು ನನ್ನ ಸೈಡ್ ಕುತ್ಲು "ನಿಂಗೆ ಏನ್ ಆಯ್ತು" ಅಂತ ಕೇಳಿದ್ಲು ಪಂಚಮಿ ಎಂದರೆ ನಮ್ಮ ಊರಿನಲ್ಲಿ attitude ಹುಡುಗಿ ಮತ್ತೆ introvert ಕೂಡ, ಅವಳು ನೋಡ್ಲಿಕೆ ಲಕ್ಷಣ. ನಮಗೆ ಪರಿಚಯ ಇತ್ತು ಆದ್ರೆ ನಾನು ಇಲ್ಲಿ ತನಕ ಅವಳ ಹತ್ರ ಮಾತಾಡುವ ಗೋಜಿಗೆ ಹೋಗ್ಲಿಲ್ಲ,ಅವಳು ನನ್ನ ಏಕೆ ವಿಚಾರಿಸಿದ್ಲು ಎಂಬ ಯೋಚನೆ ಬಂತು. ಆಗ ನೆನಪಾಯಿತು "ಮುಳುಗಿದ ಸೂರ್ಯನನ್ನು ನೋಡಿ ಅಳಬೇಡ, ರಾತ್ರಿಯ ನಕ್ಷತ್ರವನ್ನು ನೋಡುವ ಸೌಭಾಗ್ಯ ದೊರೆಯದು ಎಂದು" ಅವಳ ಪ್ರಶ್ನೆಗೆ ಬೇರೆ ಉತ್ತರ ನೀಡಿ ಮಾತು ಮುಂದುವರಿಸಿದೆ.
-ವೈಶಾಖ್ ಮಿಜಾರ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ