ಭಾರತೀಯರ ಸಂಪತ್ತು ಗೋಮಾತಾ ; ಅದರ ರಕ್ಷಣೆಗೆ ನಾವೆಲ್ಲರೂ ಕಂಕಣಬದ್ಧರಾಗಬೇಕು

Upayuktha
0

 ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

ಬೆಳಗಾವಿ :  ಬೆಳಗಾವಿಯ ಭೂಕೈಲಾಸ ಪುಣ್ಯಕ್ಷೇತ್ರ ಮುಕ್ತಿಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಧರ್ಮಸಭೆಯ ಗೋಮಾತಾ ದೇವೋಭವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ನಿರ್ದೇಶಕ ,ಅಂಕಣಕಾರ -,ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಆಶಯ ಭಾಷಣ ಮಾಡುತ್ತಾ ಗೋಮಾತೆಯ ಒಂದೊಂದು ಅವಯವದಲ್ಲಿಯೂ ದೇವತೆಗಳ ನೆಲೆಸಿದ್ದಾರೆ , ಅಂತಹ ಕಾಮಧೇನುವಿನ ಸೇವೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಗೋವಿನ ಪ್ರತಿಯೊಂದು ವಸ್ತು ಅನೇಕ ಬಗೆಯಲ್ಲಿ ಉಪಯೋಗಕ್ಕೆ ಬರುತ್ತದೆ .ಗೋಸಂತತಿಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.


ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮುಕ್ತಿ ಮಠದ ಪೀಠಾಧ್ಯಕ್ಷರಾದ ಧರ್ಮಶ್ರೀ ತಪೋ ರತ್ನ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಡಾ ಗುರುರಾಜ ಪೋಶೆಟ್ಟಿಹಳ್ಳಿರವರ ಸಾಂಸ್ಕೃತಿಕ ಪರಿಚಾರಿಕೆಗೆ ‘ವಿದ್ಯಾ ವಾರಿಧಿ’   ಎಂಬ  ಉಪಾಧಿ ಸಹಿತ ಸನ್ಮಾನಿಸಿದರು.ಶಹಬಂದರನ ಸಮಾಜ ಸೇವಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ  ಬೆಳಗಾವಿ ಜಿಲ್ಲೆ ಉಪಾಧ್ಯಕ್ಷ ರಾಜು ಮ.ನಾಶಿಪುಡಿ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top