ಕಾಲಕ್ಕೆ ತಕ್ಕಂತೆ ಬದಲಾಗುವುದು ಅಭಿವೃದ್ಧಿಗೆ ಅವಶ್ಯಕ: ಪ್ರೊ. ಕೆವಿನ್ ಶೀಟ್ಸ್

Upayuktha
0


ಮಂಗಳೂರು : ಕಾಲಕ್ಕೆ ತಕ್ಕಂತೆ ಬದಲಾಗುವುದು, ಇತಿಹಾಸದಿಂದ ಪಾಠ ಕಲಿತು ಭವಿಷ್ಯಕ್ಕೆ ನಮ್ಮನ್ನು ಸಿದ್ಧಪಡಿಸಿಕೊಳ್ಳುವುದು ಅಭಿವೃದ್ಧಿಗೆ ಅವಶ್ಯಕ ಎಂದು ಅಮೆರಿಕದ ಕೋರ್ಟ್ಲಾಂಡ್ ರಾಜ್ಯ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ ಕೆ ವಿನ್ಶೀಟ್ಸ್  ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯದ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಇಂಗ್ಲಿಷ್ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ʼದ ವರ್ಡ್ ಆಂಡ್ ದ ಸ್ಟಿಕ್: ಅಮೆರಿಕನ್  ಸಾಹಿತ್ಯ ಮತ್ತು 19ನೇ ಶತಮಾನದ ಸುಧಾರಣೆಗಳುʼಎಂಬ ಕುರಿತ ವಿಶೇಷ ಉಪನ್ಯಾಸ ನೀಡಿದ ಅವರು,ಅಮೆರಿಕನ್ ರಾಷ್ಟ್ರೀಯತೆ ಎಂದರೆ ಏನು? ಅಮೆರಿಕಾದಲ್ಲಿ 19 ಮತ್ತು 21 ನೇ ಶತಮಾನದ ಸಾಹಿತ್ಯ ಮತ್ತು ಸುಧಾರಣೆಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಭಾರತದಲ್ಲಿ ಅಮೆರಿಕಾದ ಬಗ್ಗೆ ಉಪನ್ಯಾಸ ನೀಡುವುದು ಸಂತಸದ ವಿಷಯ,ಎಂದರು.


ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದು ನಿವೃತ್ತರಾಗಿರುವ ಡಾ. ರಾಜಲಕ್ಷ್ಮಿ ಎನ್.ಕೆ ಇವರು ಮಾತನಾಡಿ, ಇಂಗ್ಲಿಷ್  ಐಚ್ಛಿಕ ವಿದ್ಯಾರ್ಥಿಗಳಿಗೆ ಅಮೆರಿಕಾದ ಸಾಹಿತ್ಯದ ಕುರಿತು ಉಪನ್ಯಾಸ ಆಯೋಜಿಸಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕ,ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಂಶುಪಾಲ ಡಾ.ಹರೀಶ್ಎ, ಅಮೆರಿಕಾದ ಸಂಪನ್ಮೂಲ ವ್ಯಕ್ತಿಯಿಂದ ಉಪನ್ಯಾಸ ಕೇಳುತ್ತಿರುವುದು ಒಂದು ಅಪೂರ್ವ ಅವಕಾಶ,ಎಂದರು.


ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಉಪಸ್ಥಿತರಿದ್ದರು. ಅಂತಿಮ ಬಿ.ಎ ಯ ಮೇರ್ವಿನ್ ಸ್ಪಿನೋಜ ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯ ಅತಿಥಿಗಳನ್ನು ಸ್ವಾಗತಿಸಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top