ಎರಡೇ ತಿಂಗಳಲ್ಲಿ ಹೊಂಬಾಳೆಯಿಂದ 'ಧೂಮಂ'

Upayuktha
0

ಹೊಂಬಾಳೆ ಫಿಲ್ಮ್ಸ್ ಮಾಸ್ಟರ್ ಪೀಸ್ ರಾಜಕುಮಾರ, ಕೆ ಜಿ ಎಫ್, ಕಾಂತಾರಗಳಂತಹ ಜನಮನ ಗೆದ್ದಂತಹ ಸಿನಿಮಾಗಳಿಗೆ ಬಂಡವಾಳ ಹೂಡಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಿ ಚಿತ್ರಗಳನ್ನು ಸಹ ನಿರ್ಮಿಸಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.


ಕಳೆದ ವರ್ಷ 30ರಂದು ಘೋಷಣೆಯಾದ ಕನ್ನಡದ ಲೂಸಿಯಾ, ಯು ಟರ್ನ್ ನಿರ್ದೇಶಕನಾದ ಪವನ್ ಕುಮಾರ್ ಈಗಿನ ಧೂಮಂ ಸಿನಿಮಾಕ್ಕೆ ಮುಹೂರ್ತವನ್ನು ಅಕ್ಟೋಬರ್ 9ರಂದು ನಡೆಸಿದ್ದರು. ಹೀಗೆ ಆರಂಭಗೊಂಡ ಚಿತ್ರೀಕರಣ ಜನವರಿ 13ರಂದು ಮುಕ್ತಾಯಗೊಂಡಿದೆ. ಕೇವಲ ಎರಡು ತಿಂಗಳಲ್ಲಿ ಮುಗಿದ ಈ ಚಿತ್ರದ ಕುರಿತಾಗಿ ಹೊಂಬಾಳೆ ಫಿಲ್ಮ್ಸ್ ಫೋಟೋವನ್ನು ಸಾಮಾಜಿಕ ಹಂಚಿಕೊಂಡಿದೆ.


ಈ ಚಿತ್ರದ ನಾಯಕ ನಟ ಫಹಾದ್ ಫಾಸಿಲ್ ಅಭಿನಯಿಸಿದ್ದು, ನಾಯಕಿ ಅಪರ್ಣ ಬಾಲಮುರಳಿ ನಟಿಸಿದ್ದಾರೆ. ಹೀಗೆ ಅತಿ ಬೇಗದಲ್ಲಿ ಆದ ಈ ಚಿತ್ರೀಕರಣವು ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ, ಚಿತ್ರಮಂದಿರದ ಅಂಗಳಕ್ಕೆ ಬರುವುದಂತೂ ಖಚಿತ. ಇದರಿಂದ ನಮ್ಮ ಹೊಂಬಾಳೆಯ ಶ್ರದ್ಧೆ ಕಂಡು ಬರುತ್ತದೆ. ಧೂಮಂ ಸಿನಿಮಾ ಧೂಳ್ ಎಬ್ಬಿಸೋದಂತು ಗ್ಯಾರಂಟಿ.


- ನೇಹಾ. ಎನ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top