ಹೊಸಂಗಡಿ: ಮಂಜೇಶ್ವರ ಸಮೀಪದ ಹೊಸಂಗಡಿಯ ಹೆಸರಾಂತ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಹೊಸದಾಗಿ ಡೆಂಟಲ್ ಇಂಪ್ಲಾಂಟ್ ಸೇವೆಯನ್ನು ಪ್ರಾರಂಭಿಸಲಾಗಿದೆ. ದುಬೈನಲ್ಲಿ ಖ್ಯಾತ ಇಂಪ್ಲಾಂಟ್ ತಜ್ಞರಾಗಿರುವ ಡಾ. ಶ್ಯಾಮ್ ಭಟ್ ಎಸ್. ಕಾಟಿಪಳ್ಳ ಇವರು ಪ್ರತಿ ತಿಂಗಳ ಮೂರನೇ ಶುಕ್ರವಾರ ಮತ್ತು ಶನಿವಾರ ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಲಿದ್ದಾರೆ.
ಡಾ ಶ್ಯಾಮ್ ಭಟ್ ಅವರು ಅಮೇರಿಕಾದ ಪ್ರತಿಷ್ಟಿತ ಅಮೇರಿಕನ್ ಅಕಾಡೆಮಿ ಆಫ್ ಇಂಪ್ಲಾಂಟ್ ಅಸೋಸಿಯೇಷನ್ ಇದರ ಸದಸ್ಯರಾಗಿದ್ದು ಐದು ಸಾವಿರಕ್ಕೂ ಹೆಚ್ಚು ಇಂಪ್ಲಾಂಟ್ ಹಲ್ಲುಗಳ ಪರಿಣಿತಿ ಹೊಂದಿರುತ್ತಾರೆ.
ರೋಗಿಗಳು ಇದರ ಸೌಲಭ್ಯವನ್ನು ಪಡೆಯಲು ಕೋರಲಾಗಿದೆ ಎಂದು ಸುರಕ್ಷಾ ದಂತ ಚಿಕಿತ್ಸಾಲಯದ ಪ್ರಕಟಣೆಯಲ್ಲಿ ತಿಳಿಸಿದೆ. ಅಮರಿಕದ ಪ್ರತಿಷ್ಠಿತ ಜಿಮ್ಮರ್ ಕಂಪನಿಯ ಇಪ್ಲಾಂಟ್ ಸೇವೆಯನ್ನು ಇಲ್ಲಿ ಆರಂಭಿಸಲಾಗಿದೆ. ಮೊದಲ 50 ಮಂದಿಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು ಹೆಚ್ಚಿನ ಮಾಹಿತಿಗೆ ಸುರಕ್ಷಾ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಲು ಕೋರಲಾಗಿದೆ.
ಸುರಕ್ಷಾ ದಂತ ಚಿಕಿತ್ಸಾಲಯ ಕಳೆದ 25 ವರ್ಷಗಳಿಂದ ಮಂಜೇಶ್ವರದ ಹೊಸಂಗಡಿಯ ಹೈ ಲ್ಯಾಂಡ್ ಕಾಂಪ್ಲೆಕ್ಸ್‍ನಲ್ಲಿ ವಿಶ್ವ ದರ್ಜೆಯ ಉತ್ಕೃಷ್ಟ ದಂತ ಚಿಕಿತ್ಸೆಯನ್ನು ನೀಡುತ್ತಿದೆ. ದಂತ ಕ್ಷಕಿರಣ, ದಂತ ಆರ್ ವಿ ಜಿ,ದಂತ ಲೇಸರ್ ಚಿಕಿತ್ಸೆ ಹಾಗೂ ಎಲ್ಲಾ ದಂತ ಸ್ನಾತಕೋತ್ತರ ವೈದ್ಯಕೀಯ ತಜ್ಞರ ಸೇವೆಯನ್ನು ನಿರಂತರವಾಗಿ ನೀಡಿ ಗ್ರಾಮೀಣ ಪ್ರದೇಶವಾದ ಹೊಸಂಗಡಿ, ಮಂಜೇಶ್ವರ ಭಾಗದಲ್ಲಿ ಬಹಳಷ್ಟು ಜನಮನ್ನಣೆ ಗಳಿಸಿರುತ್ತದೆ. ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಡಾ|| ರಾಜಶ್ರೀ ಮೋಹನ್ ಇವರ ದಂತ ದಂಪತಿಗಳ ಜುಗಲ್‍ಬಂದಿ ದಂತ ಸೇವೆ ಈ ಭಾಗದ ಜನರ ಮುಖದಲ್ಲಿ ಹೊಸ ಮಂದಹಾಸ ಮತ್ತು ಆಶಾವಾದ ಮೂಡಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ