ಮಂಗಳೂರು: ದೆಹಲಿಯಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಾವಲಾಗಿ ನಿಂತ ಐಪಿಎಸ್ ಅಧಿಕಾರಿ ಕಾರ್ತಿಕ್ ಕಶ್ಯಪ್ ನಮ್ಮ ಮಂಗಳೂರಿನವರು ಎಂಬ ಹೆಮ್ಮೆ ಕರಾವಳಿಯವರದ್ದು.
ಮಂಗಳೂರಿನ ಮಾಜಿ ಮೇಯರ್ ಎಂ. ಶಂಕರ ಭಟ್ ಮತ್ತು ಸುಜಾತಾ ಭಟ್ ದಂಪತಿಗಳ ಕಿರಿಯ ಪುತ್ರನಾದ ಕಾರ್ತಿಕ್ ಕಶ್ಯಪ್ ಐಎಎಸ್ ಮತ್ತು ಐಪಿಎಸ್ ತರಬೇತಿಗಳನ್ನು ಪಡೆದು ಐಪಿಎಸ್ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಈಗ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿದೆ.
ಮಂಗಳೂರಿನ ಕೊಂಚಾಡಿ ಹರಿಪದವು ನಿವಾಸದಲ್ಲಿ ಹುಟ್ಟಿಬೆಳೆದ ಕಾರ್ತಿಕ್ ಕಶ್ಯಪ್, ಚಿನ್ಮಯ ಶಾಲೆ, ಅಲೋಶಿಯಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಳಿಕ ನಿಟ್ಟೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದರು. ಬಳಿಕ ಯುಪಿಎಸ್‌ಸಿ ತರಬೇತಿಗೆ ಅಭ್ಯಾಸ ನಡೆಸಿ ಸೇವೆಗೆ ಆಯ್ಕೆಯಾದರು.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ನೌಕಾಪಡೆಯ ನೇತೃತ್ವ ವಹಿಸಿದವರು ಕೂಡ ಮಂಗಳೂರು ಮೂಲದ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್. ಬೋಳೂರಿನ ತಿಲಕ್ ನಗರದ ಅಮೃತ್ ಕುಮಾರ್ ಮತ್ತು ಲೀಲಾ ಅಮೃತ್ ದಂಪತಿಯ ಪುತ್ರಿ ಇವರು. ಪ್ರಸ್ತುತ ಅಂಡಮಾನ್ ನಿಕೋಬಾರ್ ನಲ್ಲಿ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಆಗಿ ಕರ್ತವ್ಯದಲ್ಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ