ಮುಗಿಯದ ಮಾತುಗಳು ಮೌನವಾದಾಗ ...

Upayuktha
0

 


 

ಗೆಳೆತನದ ಬೆಸುಗೆಯೇ ಹೀಗೆ ಸಂತೋಷ ಖುಷಿ ನೀಡುತ್ತೆ, ಅದೇ ವಿದಾಯ  ದುಃಖವಾಗುತ್ತೆ. ನಮ್ಮಿಬ್ಬರ ಸ್ನೇಹದ ಬಾಂಧವ್ಯ ಕೇವಲ ಎರಡು ವರುಷವಿದ್ದರೂ, ನಮ್ಮೊಳಗೆ ಬೆಸೆದಿದ್ದ ಸ್ನೇಹದ ಕೊಂಡಿ ಬಿಗಿಯಾಗಿತ್ತು. ಎರಡು ದೇಹ ಒಂದೇ ಉಸಿರಿನಂತಿದ್ದ ಸ್ನೇಹ-ಜೀವಿಗಳಾಗಿದ್ದೆವು, ತುಂಟಾಟದ ಮಾತು, ಮುಗ್ದ ಪ್ರೀತಿ, ಮುನಿಸಿನೊಂದಿಗೆ ತೋರಿಸುವ ಕಾಳಜಿ, ಪ್ರತಿ ನೋವಿಗೂ ಮಿಡಿಯುವ ಹೃದಯ, ನೋವು, ನಲಿವು, ಕನಸು, ಭಾವನೆ, ಮತ್ತು ದುಃಖದಲ್ಲೂ ನಗು ತರಿಸುವ ಸ್ನೇಹದ ಮಾಯೆ ಅವಳು, ಏಕೆಂದರೆ ತಾಯಿಯ ಪ್ರೀತಿ, ಒಡ ಹುಟ್ಟಿದವರಿಗಿಂತ ಹೆಚ್ಚಿನ ಒಡನಾಟ, ತಪ್ಪುಗಳನ್ನು ತಿದ್ದಿ ಬುದ್ದಿ ಹೇಳುವ ಗುರು ನನ್ನವಳಾಗಿದ್ದಳು, ಅವಳ ನಿಷ್ಕಲ್ಮಶ ಸ್ನೇಹದೊಳಗಿನ ಪ್ರೀತಿಗೆ ಶರಣಾಗಿದ್ದೆ ನಾನು.

ಇಂತಹ ಸಂತೋಷ ಭರಿತ ಕ್ಷಣಗಳೊಂದಿಗೆ  ದಿನಗಳು ನಿಮಿಷಗಳಂತೆ ಕಳೆದು, ಮಾತಾಡಿದಷ್ಟು ಮುಗಿಯದ ಮಾತುಗಳಿಗೆ, ಜಗಳಕ್ಕೆ, ತುಂಟಾಟಕ್ಕೆಲ್ಲ ವಿರಾಮ ನೀಡುವ ಸಮಯ ಕೊನೆಗೂ ಬಂದೆ ಬಿಟ್ಟಿತು.. ಪಿ. ಯು. ಸಿ ಕಲಿಕೆಯ ಕೊನೆಯ ಹಂತವದು . ಕಾಲೇಜಿನ ನೆನಪುಗಳೊಂದಿಗೆ ಕನಸುಗಳತ್ತ ನಮ್ಮ ಪಯಣದ ಕ್ಷಣ ಕೊನೆಗೂ ಸನಿಹ ಬಂದಿತ್ತು. ಕಣ್ಣoಚಿನಲ್ಲಿ  ಅಡಗಿದ ಕಣ್ಣೀರು ಜಾರಿ ವಿದಾಯದ ನೋವಿನ ಅನುಭವ ತಿಳಿಸಿತು. ಯಾರಲ್ಲಿ ಹೇಳಲಾಗದ ನೋವು, ಮನಸಿನಲ್ಲಿಯೇ ನನ್ನನು ಹಿಂಸಿಸತೊಡಗಿತು, ಈ.. ನೋವು ನನ್ನನು ಕೆಲವು ದಿನಗಳ ಕಾಲ ಮೌನವಾಗಿಸಿತ್ತು. ನನ್ನೊಳಗೆ ಬೆರೆತು ಹೋಗಿದ್ದ ಅವಳು ಇನ್ನೆಂದು ಕೈ ಹಿಡಿದು ನಡೆಸಲಾರಳು ಎಂಬ ಸಂಕಟ ನನ್ನ ಸ್ನೇಹದ ಹೃದಯ ವನ್ನು ಛಿದ್ರವಾಗಿಸಿತ್ತು. ಏಕೆಂದರೆ ನಮ್ಮಿಬ್ಬರ ಗುರಿಯ ಆಯ್ಕೆ ಮತ್ತು ಪಯಣದ ಹಾದಿಯು ಕೂಡ ಬೇರೆಯಾಗಿತ್ತು, ಇದರಿಂದಾಗಿ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗಿ, ಮಾತು ಮೌನವಾಯಿತು.

ಅವಳೊಂದಿಗೆ ಕಳೆದ ಕ್ಷಣಗಳು ನನ್ನೊಳಗೆ ಪಿಸುಗುಟ್ಟುತ್ತ ನನ್ನ ಮನಸು ಅವಳಿಗಾಗಿ ಹಂಬಲಿಸುತ್ತಿದೆ. ಗಟ್ಟಿಯಾಗಿ ಬೆಸೆದಿದ್ದ ಸ್ನೇಹದ ಕೊಂಡಿ ನಿಧಾನವಾಗಿ ಕಳಚುತ್ತ  ತುಂಡಾಗಿ ಹೋಯಿತು. ಕಣ್ಣ ರೆಪ್ಪೆಯ ಕಾಳಜಿಯಂತೆ ಆಸರೆಯಾಗಿದ್ದ ಸ್ನೇಹದ ದೋಣಿ ನನ್ನಿಂದ ದೂರವಾಗಿ ಮೌನದ ಹಾದಿಯಲ್ಲಿ ದಿಕ್ಕಿಲ್ಲದಂತೆ ಪಯಣಿಸಿ ಕಣ್ಣಿಗೆ ಕಾಣದಂತೆ ಮಾಯಾವಾಗಿ ನೆನಪುಗಳನ್ನು ಮಾತ್ರ ಉಳಿಸಿ ಹೋಯಿತು, ಅಂದು ಮುಗಿಯದ ಮಾತುಗಳು, ಈ ಕ್ಷಣದಲ್ಲಿ ಮೌನವಾಗಿ ಮರೆಯಾಯಿತು...

ಕೇಳು ಗೆಳತಿ,

ನನ್ನ ಸ್ನೇಹದ ದೋಣಿ ನಿನಗಾಗಿ ಕಾಯುತ್ತಿದೆ,

ಮರಳಿ ಬಂದು ಸ್ನೇಹ ದ ಭಾoದವ್ಯದೊoದಿಗೆ ಪಯಣಿಸುವೆಯ....

                     

- ವಿಜಯಲಕ್ಷ್ಮಿ. ಬಿ

ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಪದವಿ ಕಾಲೇಜು

ನಗರ, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top