ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ಅಧಿಕೃತ ಆಹ್ವಾನ

Upayuktha
0


ಮಂಗಳೂರು: ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಎಂ. ಪ್ರಭಾಕರ ಜೋಶಿಯವರ ಮನೆಗೆ ಸಮ್ಮೇಳನದ ಕಾರ್ಯಧ್ಯಕ್ಷರಾದ ಡಾ. ಜಿ. ಎಲ್. ಹೆಗಡೆಯವರು ಭೇಟಿ ನೀಡಿದರು.  ಡಾ. ಎಂ. ಪ್ರಭಾಕರ ಜೋಶಿ ಮತ್ತು ಶ್ರೀಮತಿ ಸುಚೇತಾ ಜೋಶಿಯವರನ್ನು ಅಭಿನಂದಿಸಿ, ಸುಮಾರು ಒಂದು ಗಂಟೆಗಳ ಕಾಲ ಅವರೊಂದಿಗಿದ್ದು ಎರಡು ದಿನದ ಸಮ್ಮೇಳನದ ರೂಪುರೇಷೆ ಮತ್ತು ಈವರೆಗೆ ಆದ ಬೆಳವಣಿಗೆಯನ್ನು ತಿಳಿಸಿ ಸುದೀರ್ಘ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸಹ ಸಂಚಾಲಕರಾದ ಮುರಲಿ ಕಡೆಕಾರ್, ನವನೀತ್ ಶೆಟ್ಟಿ ಕದ್ರಿ ಮತ್ತು ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ದೂರವಾಣಿಯ ಮೂಲಕ ಡಾ. ಜೋಶಿಯವರನ್ನು ಅಭಿನಂದಿಸಿ, ಆಹ್ವಾನಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top