ಸಂವಿಧಾನಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ- ಡಾ. ಮಂಜುನಾಥ್ ರೇವಣಕರ್

Chandrashekhara Kulamarva
0

ಬಂಟ್ವಾಳ: ನಮ್ಮ ಆತ್ಮದಂತೆ ಇರುವ ಸಂವಿಧಾನ ದೇವರ ಸಮಾನ. ಸಂವಿಧಾನದಲ್ಲಿ ಭಕ್ತಿಯನ್ನು ಇಟ್ಟು ಸಾಂವಿಧಾನಿಕ ರೂಪದಲ್ಲಿ ನಾವು ನಡೆದುಕೊಳ್ಳಬೇಕು ಎಂದು ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಂಜುನಾಥ್ ಎಸ್ ರೇವಣಕರ್ ಹೇಳಿದರು. 


ಬಂಟ್ವಾಳ ಜಿಲ್ಲಾಡಳಿತ ವತಿಯಿಂದ ಇಲ್ಲಿನ ಮಿನಿವಿಧಾನಸೌಧದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಮನುಷ್ಯನ ಜೀವನದಲ್ಲಿ ಸಂವಿಧಾನ ಎಂಬುದು ಜನ್ಮ ಸಿದ್ಧ ಹಕ್ಕು. ಸಂವಿಧಾನಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಆತ್ಮ ಸಾಕ್ಷಿಯಾಗಿ ನಾವು ಕೆಲಸ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಂಎಲ್ಎ ರಾಜೇಶ್ ನಾಯಕ್ ಹಾಗೂ ತಹಸಿಲ್ದಾರ್ ಹಾಗೂ ಎಜುಕೇಶನ್ ವಿಭಾಗದ ಬಿಒ ಭಾಗವಹಿಸಿದ್ದರು.

إرسال تعليق

0 تعليقات
إرسال تعليق (0)
To Top