ಮಂಗಳೂರು: ಮಂಗಳಗಂಗೋತ್ರಿಯ ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗವು ದಿನಾಂಕ 15 ಮತ್ತು 16 ಡಿಸೆಂಬೆರ್ 2022 ರಂದು ಜೀವವೈವಿಧ್ಯತೆ ಮತ್ತು ಸಂರಕ್ಷಣೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಮಂಗಳ ಅಡಿಟೋರಿಯಮ್‌ನಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರವನ್ನು ಶ್ರೀ ಶ್ರೀನಿವಾಸುಲು, ಐ.ಫ್.ಎಸ್, ಸದಸ್ಯ ಕಾರ್ಯಾದರ್ಶಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಉದ್ಘಾಟಿಸಿದರು.
ಅವರು ತಮ್ಮ ಉದ್ಘಾಟಣಾ ಭಾಷಣದಲ್ಲಿ ಜೀವವೈವಿಧ್ಯತೆ ಮತ್ತು ವನ್ಯಜೀವಿ ಸಂರಕ್ಷಣೆ ಪ್ರಸ್ತುತ ಕಾಲಘಟ್ಟದ ಅತ್ಯವ್ಯಶಕ ಕಾರ್ಯವಾಗಿದೆ. ಅವರು ಮುಂದುವರೆದು ಮಾತನಾಡುತ್ತಾ ವಿಜ್ನಾನಿಗಳ ಸಂಶೋಧನೆಗಳು ಸಮಾನ್ಯಜನರಿಗೆ ತಲುಪುವ ಭಾಷೆಯಲ್ಲಿ ಇರಬೇಕು ಮತ್ತು ಸಮಾನ್ಯಜನರಿಗೆ ಜೀವವೈವಿಧ್ಯತೆ ಮತ್ತು ಸಂರಕ್ಷಣೆ ಪ್ರಾಮುಖ್ಯತೆಯನ್ನು ಅರ್ಥಮಾಡಿಸಿದಾಗ ಮಾತ್ರ ಪ್ರಕೃತಿ ಸಂರಕ್ಷಣೆಯ ಕುರಿತು ಸರ್ಕಾರದ ಕಾನೂನು ಜಾರಿಮಾಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗೌರವ ಅಥಿತಿಯಾಗಿ ಮತ್ತು ದಿಕ್ಸೂಚಿ ಭಾಷಣವನು ಖ್ಯಾತ ಪರಿಸರ ವಿಜ್ನಾನಿ ಡಾ.ರಾಮಚಂದ್ರ, ಭಾರತೀಯ ವಿಜ್ನಾನ ಸಂಸ್ಥೆ, ಬೆಂಗಳೂರು, ಇವರು ನೀರಿನ ಸಂರಕ್ಷಣೆಯ ಪ್ರಮುಖ್ಯತೆ ಹಾಗೂ ಪಶ್ಚಿಮ ಘಟ್ಟಗಳ ಜೀವ ಸಂಕುಲಗಳ ಸಂರಕ್ಷಣೆ ಕುರಿತು ಮಾತನಾಡುತ್ತಾ, ಪಶ್ಚಿಮ ಘಟ್ಟಗಳ ಸಂರಕ್ಷಣೆಯು ಅತಿ ಮುಖ್ಯವಾಗಿದೆ. ಜೀವಜಲ, ನದಿ - ಸಮುದ್ರ, ಹಾಗೂ ಜೌಗು ಪ್ರದೇಶದ ಪ್ರಾಖ್ಯತೆ ಕುರಿತು ತಿಳಿಸಿದರು.
ಪ್ರೊಫೆಸರ್ ಪಿ. ಸುಬ್ರಮಣ್ಯ ಯಡಪಡಿತ್ತಾಯ ಮಾನ್ಯ ಗೌರವಾನ್ವಿತ ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ, ಅಧ್ಯಕ್ಷತೆ ವಹಿಸಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶದ ಬೆಳವಣಿಗೆಗೆ ಅಬಿವೃದ್ದಿಯ ಪೂರಕ ಚಟುವಟಿಕೆಗಳು ಅತಿ ಅವಶ್ಯಕ. ಆದರೆ ಇದರಿಂದ ನಾವು ಜೀವವೈವಿಧ್ಯತೆ ಮತ್ತು ನಮ್ಮ ಪ್ರಕೃತಿಯ ಸ್ವಲ್ಪಭಾಗವನ್ನು ಕಳೆದುಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಸುಸ್ಥಿರ ಅಭಿವೃದ್ದಿ ಈಗಿನ ಅತ್ಯಾವಶ್ಯಕ. ನಾವು ಪರಿಸರ ಸ್ನೇಹ ಮಾರ್ಗಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿವುದರ ಮೂಲಕ ಪ್ರಕೃತಿ ಮತ್ತು ಜೀವವೈವಿಧ್ಯತೆ ಸಂರಕ್ಷಣೆ ಮಾಡಬಹುದಾಗಿದೆ. ಸಾರ್ವಜನಿಕರ ಜವಬ್ದಾರಿಯುತ ಭಾಗವಹಿಸಿಕೆಯ ಮೂಲಕ ನಾವು ನಮ್ಮ ಪರಿಸರ ಸಂರಕ್ಷಣೆ ಮಾಡಬಹುದಾಗಿದೆ. ಈ ಕಾರ್ಯಾಗಾರದ ಪ್ರಯೋಜನವನ್ನು ಭಾಗವಸಿರುವ ಸಂಶೋಧಕರು, ವಿದ್ಯಾರ್ಥಿಗಳು, ಪ್ರಾಧ್ಯಪಕರು ಪಡೆದುಕೊಳ್ಳಲಿ ಹಾಗೂ ಈ ಕಾರ್ಯಾಗಾರವನ್ನು ಆಯೋಜಕರಾದ ಡಾ.ನರಸಿಂಹಯ್ಯನವರಿಗೆ ಅಬಿನಂದನೆಗಳನ್ನು ತಿಳಿಸಿದರು ಮತ್ತು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಕೋರಿದರು.
ಈ ಕಾರ್ಯಾಗಾರದಲ್ಲಿ ಎಂಟಕ್ಕೂ ಹೆಚ್ಚು ಖ್ಯಾತ ವಿಜ್ನಾನಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಮೂನ್ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ವಿವಿಧ ಕಾಲೇಜಿಗಳಿಂದ ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯರ್ಥಿಗಳಿಂದ ಮೂವತ್ತುಕ್ಕೂ ಹೆಚ್ಚು ಪೋಸ್ಟರ್ ಗಳನ್ನು ಪ್ರದರ್ಶನದ ಸ್ಫರ್ದೆಗೆ ಭಾಗವಸಿದ್ದರು. ಕಾರ್ಯಗಾರದ ಸಂಯೋಜಕರಾದ ಡಾ. ನರಸಿಂಹಯ್ಯ ಎನ್, ಸಹಾಯಕ ಪ್ರಾಧ್ಯಾಪಕರು ಆನ್ವಯಿಕ ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾನಿಲಯ ಇವರು ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಕಾರ್ಯಾಗಾರದ ಬಗ್ಗೆ ಪ್ರಸ್ಥಾವನೆಗೈದರು. ಡಾ. ಎಂ.ಎಸ್. ಮುಸ್ತಾಕ್, ವಿಭಾಗದ ಅಧ್ಯಕ್ಷರು ವಂದಿಸಿದರು. ಕುಮಾರಿ ಲಾವಣ್ಯ ಮತ್ತು ಸುಮಕೋಟೆ ಇವರು ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ