|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತೆಂಕನಿಡಿಯೂರು ಕಾಲೇಜು: ಮೂವರು ಸಹ ಪ್ರಾಧ್ಯಾಪಕರು ಪ್ರೊಫೆಸರ್ ಆಗಿ ಭಡ್ತಿ

ತೆಂಕನಿಡಿಯೂರು ಕಾಲೇಜು: ಮೂವರು ಸಹ ಪ್ರಾಧ್ಯಾಪಕರು ಪ್ರೊಫೆಸರ್ ಆಗಿ ಭಡ್ತಿ

ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಮೂವರು ಸಹ ಪ್ರಾಧ್ಯಾಪಕರಿಗೆ ಕಾಲೇಜು ಶಿಕ್ಷಣ ಇಲಾಖೆ ಅವರ ಶೈಕ್ಷಣಿಕ ಸಾಧನೆಗಾಗಿ ಯುಜಿಸಿ ನಿಯಾಮಾವಳಿ ಪ್ರಕಾರ ಪ್ರೊಫೆಸರ್ ಆಗಿ ಭಡ್ತಿ ನೀಡಿದೆ.


ಕಾಲೇಜು ಪ್ರಾಂಶುಪಾಲರಾದ ಮತ್ತು ಇತಿಹಾಸ ಸಹಪ್ರಾಧ್ಯಾಪಕರಾದ ಡಾ.ಸುರೇಶ್ ರೈ.ಕೆ, ಕನ್ನಡ ಸಹಪ್ರಾಧ್ಯಾಪಕರಾದ ಡಾ.ಜಯಪ್ರಕಾಶ್ ಶೆಟ್ಟಿ ಹಾಗೂ ಅರ್ಥ ಶಾಸ್ತ್ರ ಸಹಪ್ರಾಧ್ಯಾಪಕರಾದ ಡಾ. ಗೋಪಾಲಕೃಷ್ಣ ಗಾಂವ್ಕರ್ ಈ ಭಡ್ತಿಯ ಮನ್ನಣೆಗೆ ಪಾತ್ರವಾದವರು.


ಪ್ರಾಂಶುಪಾಲರಾದ ಡಾ.ಸುರೇಶ್ ರೈಯವರು 29 ವರ್ಷಗಳ ಸೇವಾನುಭವ ಹೊಂದಿದ್ದು 25 ರಾಷ್ಟ್ರೀಯ ಮತ್ತು 2 ಅಂತರರಾಷ್ಟ್ರೀಯ ಜರ್ನಲ್ ಗಳಲ್ಲಿ ಲೇಖನ ಗಳನ್ನು ಪ್ರಕಟಿಸಿದ್ದು 28 ಐಸ್ ಬಿನ್ ಮಾನ್ಯತೆ ಪಡೆದ ಗ್ರಂಥಗಳನ್ನು ಪ್ರಕಟಿಸಿದ್ದಾರೆ.ಎರಡು ಗ್ರಂಥಗಳನ್ನು ಸಂಪಾ್ಇಸಿದ್ದಾರೆ. ಅಲ್ಲದೆ ಮಣಿಪಾಲದ ಮಾಹೆಯ ಮಾನವಿಕ ವಿಭಾಗದಲ್ಲಿ ಗೌರವ ಸಂಶೋಧನಾ ಮಾರ್ಗದರ್ಶಕರಾಗಿ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಆಂತರಿಕ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಡಾ. ಜಯಪ್ರಕಾಶ್ ಶೆಟ್ಟಿಯವರು 29 ವರ್ಷಗಳ ಸೇವಾನುಭವ ಹೊಂದಿದ್ದು 12 ಐಸ್ಬಿನ್ ಮಾನ್ಯತೆ ಪಡೆದ ಪುಸ್ತಕ ಗಳನ್ನು ಮತ್ತು 80 ಲೇಖನ ಗಳನ್ನು ವಿವಿಧ ರಾಜ್ಯ ಮತ್ತು ರಾಷ್ಟ್ರಮಟ್ಟದ ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ.


29 ವರ್ಷಗಳ ಸೇವಾನುಭವ ಡಾ.ಗೋಪಾಲಕೃಷ್ಣ ಗಾಂವ್ಕರ್ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಮತ್ತು ಭಾರತಿಯಾರ್ ವಿಶ್ವ ವಿದ್ಯಾಲಯ ಕೊಯಮತ್ತೂರು ಇಲ್ಲಿನ ಸಂಶೋಧನಾ ಮಾರ್ಗದರ್ಶಕರಾಗಿದ್ದು ಈವರೆಗೆ 5 ಪಿ.ಹೆಚ್ಡಿ ಮತ್ತು 18 ಕ್ಕಿಂತ ಹೆಚ್ಚು ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವರ 35ಕ್ಕಿಂತಲೂ ಹೆಚ್ಚು ಲೇಖನಗಳು ರಾಜ್ಯ ಮತ್ತು ರಾಷ್ಟ್ರಮಟ್ಟದ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.


ಇವರು ಎರಡು ಗ್ರಂಥಗಳನ್ನು ಸಂಪಾದಿಸಿದ್ದು ಅಲ್ಲದೆ ಒಂದು ಪುಸ್ತಕವನ್ನು ರಚಿಸಿದ್ದಾರೆ.


ಅವರು ಮಾತ್ರ ಅಲ್ಲದೇ ಒಟ್ಟು 274 ಸಹ ಪ್ರಾಧ್ಯಾಪಕರಿಗೆ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ  ಮೊದಲ ಬಾರಿಗೆ ಕಾಲೇಜು ಸಹ ಪ್ರಾಧ್ಯಾಪಕರಿಗೆ ಪ್ರೊಫೆಸರ್ ಆಗಿ ಪ್ರಮೊಷನ್ ನೀಡಿದೆ.


ಇದಕ್ಕಾಗಿ ಮುಂಬಡ್ತಿ ಪಡೆದ ಎಲ್ಲಾ ಸಹಪ್ರಾಧ್ಯಾಪಕರು ಸಂಬಂಧಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post