ನಯನ ಸಭಾಂಗಣ: ನಾಳೆ ಡಾ. ಲೀಲಾ ಬಸವರಾಜು ಅವರ ಏಕವ್ಯಕ್ತಿ ಪ್ರಯೋಗ 'ಅವ್ವರಸಿ’ ಪ್ರದರ್ಶನ

Upayuktha
0

 

ಬೆಂಗಳೂರು: ಡಿ.28ಕ್ಕೆ ಡಾ. ಲೀಲಾ ಬಸವರಾಜು ಅಭಿನಯಿಸುವ ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’ಯ ಪ್ರದರ್ಶನ ಸ್ತ್ರೀಯ ಸೀಮಿತತೆಯೊಳಗೆ ಬಂದಿಯಾಗಿಸುವ ಕುಟುಂಬ, ಸಮಾಜದ ನಡುವೆಯೂ ಅವಳು ತನ್ನೊಳಗನ್ನು ಕಂಡುಕೊಳ್ಳಬೇಕೆನ್ನುವ ಹಿರಿಯ ರಂಗಭೂಮಿ ಕಲಾವಿದೆ ಡಾ. ಲೀಲಾ ಬಸವರಾಜು ಅಭಿನಯಿಸುವ ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’ಯಶಸ್ವಿ ಪ್ರದರ್ಶನದ ನಂತರ ಇದೀಗ ಮತ್ತೊಂದು ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಎರಡು ಶತಮಾನದ ಹಿಂದೆಯೇ ಪೋರ್ಚಗೀಸರ ವಿರುದ್ದ ಹೋರಾಡಿದ ವೀರ ವನಿತೆ ರಾಣಿ ಚೆನ್ನಭೈರಾದೇವಿ ಯ ಜೀವನ ಕಥಾನಕವೇ ಬಲುರೋಚಕ. ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ;  ಕರಿಮೆಣಸಿನ ರಾಣಿಯ ಅಕಳಂಕ ಚರಿತೆಯನ್ನು ಡಾ. ಗಜಾನನ ಶರ್ಮ ಅವರು ಕಾದಂಬರಿ ರೂಪದಲ್ಲಿ ಬರೆದ ಈ ಕೃತಿ. ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಮೂಲಕ ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. 450 ಪುಟಗಳ ಬೃಹತ್ ಐತಿಹಾಸಿಕ ಕಾದಂಬರಿಯ ಆಯ್ದ ಭಾಗಗಳನ್ನು ರಂಗ ರೂಪಾಂತರಗೊಳಿಸುವುದು ಸಾಮಾನ್ಯ ವಿಷಯವಲ್ಲ.

ಡಿ.28 ಸಂಜೆ 6.15ಕ್ಕೆ ನಗರದ ಜೆ.ಸಿ.ರಸ್ತೆಯ ನಯನ ಸಭಾಂಗಣದಲ್ಲಿ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ಸ್ವಾತಂತ್ರ್ಯದ ಅಮೃತಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿರುವ ಈ ಪ್ರದರ್ಶನಕ್ಕೆ ಸಂಸ್ಕಾರ ಭಾರತಿಯ ಬೆಂಗಳೂರು ದಕ್ಷಿಣ ಸಂಘಟನಾ ಮಹಾಮಂತ್ರಿ ರಾಮಚಂದ್ರ, ಹಿರಿಯ ರಂಗಕರ್ಮಿ ಸುಚೇಂದ್ರ ಪ್ರಸಾದ್, ಚಲನಚಿತ್ರ ನಿರ್ದೇಶಕ ಕೆ.ಎಂ. ಚೈತನ್ಯ ವಿಶೇಷ ಆಹ್ಷಾನಿತರಾಗಿ ಆಗಮಿಸವರುಎಂದು ಆಯೋಜಕರಾದ ಎಂ.ಬಸವರಾಜು ಅವರು ತಿಳಿಸಿದ್ದಾರೆ.

ಕಲಾ ಸೇವೆಯಲ್ಲಿ ತಮ್ಮನ್ನು ಅರ್ಧ ಶತಮಾನದಿಂದಲೂ ತೊಡಗಿಸಿಕೊಂಡಿರುವ ಕಲಾವಿದೆ ಡಾ. ಲೀಲಾ ಬಸವರಾಜು 75ರ ವಯೋಮಾನದಲ್ಲೂ ಲವಲವಿಕೆಯಿಂದ ಒಂದು ಗಂಟೆ ಇಪ್ಪತ್ತು ನಿಮಿಷ ಅಸ್ಖಲಿತ ನಿರೂಪಣೆಯಿಂದ ಅಭಿನಯಿಸುವುದು ಈ ಪ್ರಯೋಗದ ವಿಶೇಷತೆ. ಅವರ ಸಂಭಾಷಣೆಯಲ್ಲಿನ ದೃಢತೆ, ಸನ್ನಿವೇಶಕ್ಕೆ ತಕ್ಕಂತೆ ರಸಭಾವ, ಬಾಡಿ ಲ್ಯಾಂಗ್ವೇಜ್ ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತದೆ.

ತಮ್ಮ ಏಕವ್ಯಕ್ತಿ ಪ್ರಯೋಗಗಳಿಂದ ನಾಡಿನ ಮನೆಮತಾಗಿರುವ ನಟ- ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರು ‘ಅವ್ವರಸಿ’ ಪ್ರಯೋಗದ ರಂಗ ರೂಪ, ವಿನ್ಯಾಸ ಮತ್ತು ನಿರ್ದೇಶನದ ಹೊಣೆಹೊತ್ತಿದ್ದಾರೆ. ಸಚಿನ್ ಶಿವರುದ್ರಪ್ಪ- ಸಂಗೀತ; ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ ಸಂಸ್ಥಾಪಕ ಗೋಪಿನಾಥ್ ಬಿ.ಆರ್ ಬೆಳಕು; ಶ್ರೀಮತಿ ಸುಧಾ ಪ್ರಸನ್ನ- ಧ್ವನಿ ನೀಡಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top