ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ 2022-23 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಜತ್ತೋಡಿ ಇಲ್ಲಿ ಆಯೋಜಿಸಲಾಗಿದ್ದು, ಸೋಮವಾರ (ಡಿ.26) ಆರನೇ ದಿನದ ಧ್ವಜಾರೋಹಣ ಕಾರ್ಯಕ್ರಮವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಜತ್ತೋಡಿ ಇಲ್ಲಿನ ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ನಳಿನಿ ಪುಳಿಮಜಲು ನೆರವೇರಿಸಿದರು.
ಅಪರಾಹ್ನ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಾಟಿ ವೈದ್ಯ ಶ್ರೀನಿವಾಸ್ ಪೂಜಾರಿ, ಇವರು ಪಾರಂಪರಿಕ ವೈದ್ಯಕೀಯ ಪದ್ಧತಿಯ ಕುರಿತು ಮಾಹಿತಿ ನೀಡಿದರು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯುವ ಹಲವಾರು ಗಿಡಮೂಲಿಕೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿ ಅದರ ಉಪಯೋಗಿಸುವ ರೀತಿಯನ್ನು ತಿಳಿಸಿಕೊಟ್ಟರು. ಸ.ಹಿ.ಪ್ರಾ. ಶಾಲೆ ಕುಂಜತ್ತೋಡಿ ಇಲ್ಲಿನ ಎಸ್‌ಡಿಎಂಸಿ ಸದಸ್ಯೆ ಶ್ರೀಮತಿ ಶೋಭಾ, ಯೋಜನಾಧಿಕಾರಿಗಳಾದ ಸಂತೋಷ್ ಪ್ರಭು ಹಾಗೂ ಶ್ರೀಮತಿ ಚಿತ್ರಾ ಪಡಿಯಾರ್ ಉಪಸ್ಥಿತರಿದ್ದರು. ಕು. ತೃಪ್ತಿ ಸ್ವಾಗತಿಸಿ, ಕು.ನಿಖಿತ ಅವರು ನಿರ್ವಹಿಸಿ, ಕು. ನಿಖಿತ ವಂದನಾರ್ಪಣೆ ಮಾಡಿದರು.
ವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಭೇಟಿ:
ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಸಂಯೋಜನಾಧಿಕಾರಿ ಹಾಗೂ ನಿರ್ದೇಶಕರಾದ ಡಾ. ನಾಗರತ್ನ ಕೆ.ಎ ಇವರು ಸೋಮವಾರ ಶಿಬಿರಕ್ಕೆ ಭೇಟಿ ನೀಡಿದರು. ಶಿಬಿರದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳೊಂದಿಗೆ ಸಂವಾದಿಸಿದ ಅವರು ಶಿಸ್ತು, ಸಮಯ ಉತ್ತಮವಾಗಿದ್ದು, ಶ್ರಮದಾನ ಅಚ್ಚುಕಟ್ಟಾಗಿದ್ದು, ಶಾಲಾ ಆವರಣ ಸ್ವಚ್ಛತೆ ನೀರಿನ ಟ್ಯಾಂಕಿನ ಸ್ವಚ್ಛತೆಯ ಕಾರ್ಯಕ್ಕೆ ಮಚ್ಚುಗೆ ವ್ಯಕ್ತಪಡಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ