ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆದ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ವೀಕ್ಷಕರ ಕಣ್ಸೆಳೆದದ್ದು ಕೃಷಿ ಮೇಳದಲ್ಲಿದ್ದ "ಅಪ್ಪು ಸ್ಟಾಲ್". ಎಲ್ಲಾ ಮಾಮೂಲಿ ಅಂಗಡಿಗಳ ನಡುವೆ ವಿಶೇಷವಾಗಿ ತಲೆ ಎತ್ತಿ ನಿಂತಿದ್ದು "ಅಪ್ಪು ಸ್ಟಾಲ್". ಒಂದಕ್ಕಿಂತ ಒಂದು ಅಂದದ ಅಪ್ಪುವಿನ ಚಿತ್ರಪಟಗಳು ಅಂಗಡಿಯ ಮೆರುಗು ಹೆಚ್ಚಿಸಿತ್ತು. ಅಂಗಡಿಯ ಮಾಲೀಕ ಸಂತೋಷ್ ಹೇಳಿರುವಂತೆ, "ರಾಜಕುಮಾರ" ಅವರ ನೆಚ್ಚಿನ ಚಲನಚಿತ್ರವಂತೆ. ಅಪ್ಪು ಅವರ ಮೇಲೆ ತುಂಬಾ ಅಭಿಮಾನ. ಅಪ್ಪು ಅಂದ್ರೇನೇ ಸ್ಪೂರ್ತಿ. ನನ್ನ ಜೀವನಕ್ಕೆ ದಾರಿ ಮಾಡಿಕೊಟ್ಟ ದೇವರು ಅವರು.ಅವರು ತೀರಿ ಹೋದ ನಂತರ ನಾನು ಮತ್ತು ನನ್ನ ಪರಿವಾರ ಅಪ್ಪು ಚಿತ್ರಪಟಗಳನ್ನು ಮಾರಿ ಜೀವನ ನಡೆಸುತ್ತಿದ್ದೇವೆ. ಕೆಟ್ಟವರಿಗೂ ಒಳ್ಳೆಯದನ್ನು ಬಯಸಬೇಕು ಎಂಬ ಅಪ್ಪು ಮಾತು ತುಂಬಾ ಸ್ಪೂರ್ತಿ.
ಇದು ಸ್ಟಾಲ್ ಅಲ್ಲ ಅಪ್ಪು ಅವರ ಮನೆ ಮನೆಗೂ ಅಪ್ಪು ಮನದಲ್ಲೂ ಅಪ್ಪು ಮನಸೆಲ್ಲಾ ಅಪ್ಪು ಎಂದು ಅಂಗಡಿ ಮಾಲೀಕರಾದ ಶಿವಮೊಗ್ಗ ಮೂಲದ ತಿಳಿಸಿದರು. ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ ಅವರು, ತಮ್ಮ ವೃತ್ತಿ ಜೀವನದಲ್ಲಿ ಇಷ್ಟು ಅದ್ಭುತ ಕಾರ್ಯಕ್ರಮ ಮೊದಲ ಬಾರಿಗೆ ನೋಡಿರುವುದಾಗಿ ತಿಳಿಸಿದರು. ಲಕ್ಷ-ಲಕ್ಷ ಜನರಿಗೆ ಊಟೋಪಚಾರದ ವ್ಯವಸ್ಥೆ, ವಸತಿ ವ್ಯವಸ್ಥೆ, ನೀರಿನ ವ್ಯವಸ್ಥೆ, ಪ್ರತಿಯೊಂದು ಸವಲತ್ತುಗಳನ್ನು ಕೂಡ ತುಂಬಾ ಚೆನ್ನಾಗಿ ಒದಗಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ.ಮೋಹನ್ ಆಳ್ವ ಅವರಿಗೆ ಹೃದಯಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು.
-ಕೆ. ಎಸ್. ಅನುಪಮ ರಾವ್
ಪದವಿ ಪತ್ರಿಕೋದ್ಯಮ ವಿಭಾಗ
ಆಳ್ವಾಸ್ ಕಾಲೇಜು, ಮೂಡುಬಿದಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ