ಸಾಂಸ್ಕೃತಿಕ ಜಾಂಬೂರಿಯಲ್ಲಿ ಪರಿಸರ ಜಾಗೃತಿಯ ಮೆರುಗಿನ ವ್ಯಂಗ್ಯಚಿತ್ರಗಳು

Upayuktha
0

ತಮ್ಮ ವ್ಯಂಗ್ಯ ರೇಖಾ ಚಿತ್ರಗಳನ್ನು ಬಿಡಿಸಿಕೊಳ್ಳಲು ತಾ ಮುಂದು ನಾ ಮುಂದು ಎಂದು ಬರುವ ಗುಂಪು ಒಂದೆಡೆಯಾದರೆ, ತಮ್ಮದೇ ವ್ಯಂಗ್ಯ ಚಿತ್ರಗಳನ್ನು ನೋಡಿಕೊಂಡು ಖುಷಿಪಡುವ ಇನ್ನೊಂದಷ್ಟು ಜನ ಈ ದೃಶ್ಯ ಕಂಡು ಬಂದಿದ್ದು ಭಾರತ್ ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಆಳ್ವಾಸ್ ಆವರಣದಲ್ಲಿ ಆಯೋಜಿತವಾದ ಕಲಾ ಮೇಳದಲ್ಲಿ. ವಿವಿಧ ವರ್ಣ ರಂಜಿತವವಾದ ಕಲಾಕೃತಿಗಳು, ನೋಡುಗರನ್ನು ಸೆಳೆಯುವ, ಮೇಳದ ವಿಶೇಷತೆಯನ್ನು ಸಾರುವ ವ್ಯಂಗ್ಯ ಚಿತ್ರಗಳು. ನೋಡುಗರನ್ನು ವಿಶೇಷವಾಗಿ ಆಕರ್ಷಿಸಿತು.


ಕಲಾ ಮೇಳದಲ್ಲಿ ವಿಶೇಷವಾಗಿ ಕಂಡಿದ್ದು ವ್ಯಂಗ್ಯಚಿತ್ರಕಾರ ಹರಿಶ್ಚಂದ್ರ ಶೆಟ್ಟಿಯವರ ವ್ಯಂಗ್ಯ ಚಿತ್ರಗಳು.ಪದವಿ ವ್ಯಾಸಂಗದಲ್ಲಿ ತಮ್ಮನ್ನು ತಾವು ಚಿತ್ರಕಲೆಯಲ್ಲಿ ತೊಡಗಿಸಿಕೊಂಡು, ಕಂಡಿದ್ದನ್ನು, ನೋಡಿದ್ದನ್ನು ರೇಖೆಯ ರೂಪಕ್ಕೆ ಇಳಿಸಲು ಪ್ರಾರಂಭಿಸಿದರು. ಸುಮಾರು 50000ಕ್ಕೂ ಹೆಚ್ಚು ವ್ಯಂಗಚಿತ್ರ ಬಿಡಿಸಿದ ಹೆಗ್ಗಳಿಕೆ ಇವರದು.


ಇವರು ನಿವೃತ್ತ ಎಂಸಿಎಫ್‌ನ ಉದ್ಯೋಗಿಯಾಗಿದ್ದು ಪ್ರಸ್ತುತ ಹವ್ಯಾಸಿ ವ್ಯಂಗ್ಯ ಚಿತ್ರಕಾರರಾಗಿದ್ದಾರೆ. 2006ರಲ್ಲಿ ಪ್ರಸಾದ್ ಆರ್ಟ್ ಗ್ಯಾಲರಿ ವನ್ ಮ್ಯಾನ್ ಶೋ ನೀಡಿದ್ದಾರೆ. ಸುರತ್ಕಲ್‌ನನ ವಿಶ್ವ ಬಂಟ ಸಂಘ, ಮಂಗಳೂರಿನ ಕರಾವಳಿ ಚಾವಡಿ ಹೀಗೆ ಹಲವು ಸ್ಥಳಗಳಲ್ಲಿ ವ್ಯಂಗ್ಯ ಚಿತ್ರ ಪ್ರದರ್ಶನ ನೀಡಿದ್ಧಾರೆ.


ತರಂಗ, ಸುಧಾ, ಮಯೂರ, ತುಷಾರ ಮಾಸಿಕ ಪತ್ರಿಕೆಯಲ್ಲಿ ಇವರು ಬಿಡಿಸಿದ ವ್ಯಂಗ್ಯ ಚಿತ್ರಗಳು ಪ್ರಕಟಗೊಂಡಿವೆ. ಇವರು ವ್ಯಂಗ್ಯಚಿತ್ರ ಮಾತ್ರವಲ್ಲದೆ ಕ್ಯಾರಿಕೆಚರ್ ನ್ನು ಬಿಡಿಸುತ್ತಾರೆ. ಇವರ ವಿಶೇಷತೆ ಕೇವಲ ಐದು ನಿಮಿಷದಲ್ಲಿ ವ್ಯಕ್ತಿಯ ಬಿಂಬವನ್ನೂ ನೋಡಿ ವ್ಯಂಗ್ಯ ಚಿತ್ರವನ್ನೂ ಬಿಡಿಸುವುದು.


ಆಳ್ವಾಸ್ ಜಂಬೂರಿಯಲ್ಲಿ ಇವರು ಬಿಡಿಸಿದ 30ಕ್ಕೂ ಹೆಚ್ಚಿನ ವ್ಯಂಗ್ಯ ಚಿತ್ರಣಗಳು ಪ್ರದರ್ಶನಗೊಂಡಿವೆ. 45 ವರ್ಷಗಳಿಂದ ವ್ಯಂಗ್ಯ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಕೃಷಿ, ಆಹಾರ, ಪರಿಸರ, ವ್ಯಕ್ತಿಗಳ ವ್ಯಂಗ್ಯ ಚಿತ್ರಗಳ ಮೂಲಕ ಎಲ್ಲಾ ನೋಡುಗರ ಗಮನ ಸೆಳೆದಿದ್ದಾರೆ.


ಇವರು ಬಿಡಿಸಿರುವ ಪೂರ್ಣಚಂದ್ರ ತೇಜಸ್ವಿಯವರ ವ್ಯಂಗ್ಯ ಚಿತ್ರಣದಲ್ಲಿ ತೇಜಸ್ವಿಯ ಅಭಿವ್ಯಕ್ತಿ ರುಚಿಗಳನ್ನು ನೋಡಬಹುದು. ಧೋನಿ, ಸಚಿನ್ ತೆಂಡೂಲ್ಕರ್, ನರೇಂದ್ರ ಮೋದಿ, ರಿಷಬ್ ಶೆಟ್ಟಿ, ಹಾಗೂ ಪರಿಸರ ಜಾಗ್ರತಿಯ ವ್ಯಂಗಚಿತ್ರ ಜನರ ಗಮನ ಸೆಳೆಯಿತು.


ಭೂಮಿಯನ್ನು ರಕ್ಷಿಸುವಂತ ವ್ಯಂಗ್ಯ ಚಿತ್ರಗಳು, ಕಾರ್ಟೂನ್‌ಗಳ ಮೂಲಕ ಸಾಮಾಜಿಕ ಜಾಗೃತಿಯ ಕ್ಯಾರಿಕೇಚರ್ ಗಳು, ದಿಗ್ಗಜರ ಚಿತ್ರಗಳು ವಿಶೇಷವಾಗಿ ಹುಲಿಯ ರಕ್ಷಣೆಯ ಕ್ಯಾರಿಕೇಚರ್‌ಗಳು ಕಲಾ ಮೇಳದಲ್ಲಿ ನೋಡುಗರ ಗಮನ ಸೆಳೆಯಿತು.


ಸಮಾಜದಲ್ಲಿ ಹಲವಾರು ಬದಲಾವಣೆಗೆ ವ್ಯಂಗ್ಯ ಚಿತ್ರ ಕಲೆಗಳು ಸಾಕ್ಷಿಯಾಗಿವೆ. ವಿದ್ಯಾರ್ಥಿಗಳಿಗೆ ವ್ಯಂಗ್ಯ ಚಿತ್ರಗಳ ಅರಿವು ಜಂಬೂರಿಯ ಕಲಾಮೇಳದಲ್ಲಿ ನಡೆಯುತ್ತಿದೆ. ಮೇಳದ ವಿಶೇಷತೆಯನ್ನು ಸಾರುವಂತ ಹಲವು ವ್ಯಂಗ್ಯಚಿತ್ರಗಳು ಜಂಬೂರಿಯ ವಿಶೇಷ ಆಕರ್ಷಣೆ.


ಬರವಣಿಗೆಗಿಂತ, ಪರಿಸರ ಬಗೆಗೆ ವ್ಯಂಗ್ಯಚಿತ್ರಗಳು ಸುಲಭವಾಗಿ ವಿದ್ಯಾರ್ಥಿಗಳ ಮನಸಿಗೆ ತಲುಪುತ್ತದೆ, ಸಾಮಾನ್ಯ ಜನರಿಗೆ ಸುಲಭ ವಾಗಿ ಅರ್ಥವಾಗುತ್ತದೆ.

-ಹರಿಶ್ಚಂದ್ರ ಶೆಟ್ಟಿ


ಕಾರ್ಟೂನ್ ಜೊತೆ ಪೇಂಟಿಂಗ್ಸ್ ನ್ನು ಮಾಡಿ ಆಳ್ವಾಸ್ ಕಲಾಮೇಳದಲ್ಲಿ ಪ್ರದರ್ಶಿಸುರುವುದು ಜಂಬೂರಿಯ ವಿಶೇಷ. ಪರಿಸರದ ಜಾಗ್ರತಿಯ ಹೆಚ್ಚು ಕಲಾಕೃತಿಯನ್ನು ಕಲಾ ಮೇಳದಲ್ಲಿ ಪ್ರದರ್ಶಿಸಲಾಗಿದೆ. ಹುಲಿಯ ರಕ್ಷಣೆ ಒಂದು ಹುಡುಗಿ ಹುಲಿರಕ್ಷಣೆಯ ಫಲಕ ಹಿಡಿದು ಬಂದಾಗ ಹುಲಿ ಬಂದು ಅವಳನ್ನು ಅಕ್ರಮನ ಮಾಡುವುದು ವ್ಯಂಗ್ಯಚಿತ್ರಕಾರನ ಕಲ್ಪನೆ. ಮೇಳದ ಸಂಪೂರ್ಣ ಕಲ್ಪನೆಯನ್ನು ಒಂದು ವ್ಯಂಗ್ಯ ಚಿತ್ರದಲ್ಲಿ ತರುವ ಕಾರ್ಯ ಜಂಬೂರಿಯಲ್ಲಾಗಿದೆ.

-ಗುಜ್ಜಾರಪ್ಪ, ಖ್ಯಾತ ವ್ಯಂಗ್ಯಚಿತ್ರಗಾರ


ಕರ್ನಾಟಕದ ಆಯ್ದ 20 ವ್ಯಂಗ್ಯ ಚಿತ್ರಗಾರರು ಈ ಜಂಬೂರಿಯ ಕಲಾ ಮೇಳದಲ್ಲಿ ಭಾಗವಹಿಸಿದ್ದಾರೆ. ಪರಿಸರದ ಬಗೆಗೆ ಜಾಗ್ರತಿ, ಜಂಬೂರಿಯ ಉತ್ಸವದ ವಿಶೇಷತೆಯ ವ್ಯಂಗ್ಯ ಚಿತ್ರ, ಸಾಮಾಜಿಕ ಜಾಗೃತಿಯನ್ನು ನಿರ್ವಹಿಸುತ್ತಿರುವ ಅನೇಕ ವ್ಯಂಗ್ಯ ಚಿತ್ರಗಳನ್ನು, ಭೂಮಿಯನ್ನು ಸಂರಕ್ಷಿಸುವ, ವಾಯುಮಾಲಿನ್ಯ ತಡೆಯುವ ಸೂರ್ಯನ ಸೌರ ಶಕ್ತಿಯ ಬಳಕೆಯ ವ್ಯಂಗ್ಯಚಿತ್ರಗಳು ಜಂಬೂರಿಯ ಆಕರ್ಷಣೆಯಾಗಿದೆ.

- ನಂಜುಂಡ ಸ್ವಾಮಿ, ಖ್ಯಾತ ವ್ಯಂಗ್ಯಚಿತ್ರಗಾರ



-ಪವಿತ್ರ ಜೆ ಕೋಟ್ಯಾನ್ 

ತೃತೀಯ ಬಿ.ಎ ಆಳ್ವಾಸ್ ಪದವಿ ಕಾಲೇಜು ಮೂಡುಬಿದಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top