ಉಜಿರೆ: ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಮಹತ್ವಪೂರ್ಣ ಹಾಗೂ ಭದ್ರ ಬುನಾದಿಯಾಗಿದ್ದು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಉದ್ದೇಶದಿಂದಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಸಮುದಾಯಅಭಿವೃದ್ಧಿ ವಿಭಾಗದಿಂದ ಪ್ರತಿವರ್ಷ ಸುಮಾರು 400 ಶಾಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಶೌಚಾಲಯಗಳ ನಿರ್ಮಾಣ, ಶಿಕ್ಷಕರ ನೇಮಕಾತಿ, ಶಾಲಾ ಕಟ್ಟಡ ನಿರ್ಮಾಣ, ಆವರಣಗೋಡೆ, ಆಟದ ಮೈದಾನರಚನೆ, ಕ್ರೀಡಾ ಸಾಮಾಗ್ರಿಗಳ ಪೂರೈಕೆ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆಎಂದು ಧರ್ಮಸ್ಥಳದ ಧರ್ಮಾಧಿಕಾರಿಡಿ. ವೀರೇಂದ್ರ ಹೆಗ್ಗೆಡೆಯವರು ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತುದಾವಣಗೆರೆ ಜಿಲ್ಲೆಗಳ ಗ್ರಾಮೀಣ ಪ್ರದೇಶದ 365 ಸರ್ಕಾರಿ ಶಾಲೆಗಳಿಗೆ ಎರಡೂವರೆಕೋಟಿರೂ. ಮೊತ್ತದ 2770 ಜೊತೆ ಪೀಠೋಪಕರಣಗಳನ್ನು ವಿತರಿಸಿ ಮಾತನಾಡಿದರು.
ಪ್ರಸ್ತುತ ದೀರ್ಘ ಬಾಳಿಕೆ ಬರುವ ಹಾಗೂ ಹಗುರವಾದ ಫೈಬರ್ ಬೆಂಚು, ಡೆಸ್ಕ್‍ಗಳನ್ನು ಧರ್ಮಸ್ಥಳದ ವತಿಯಿಂದಲೆ ಶಾಲೆಗಳಿಗೆ ಸಾಗಾಟ ಮಾಡುವವ್ಯವಸ್ಥೆ ಮಾಡಲಾಗುತ್ತದೆಎಂದುಅವರು ತಿಳಿಸಿದರು.
ರಾಜ್ಯದಲ್ಲಿಈ ವರೆಗೆ10,334 ಶಾಲೆಗಳಿಗೆ 65,144 ಜೊತೆ ಬೆಂಚು, ಡೆಸ್ಕ್‍ಗಳನ್ನು ಪೂರೈಸಿದ್ದು ಇದಕ್ಕಾಗಿ 21 ಕೋಟಿ 22 ಲಕ್ಷರೂ. ಪೂರಕಅನುದಾನ ನೀಡಲಾಗಿದೆಎಂದು ಹೆಗ್ಗಡೆಯವರು ತಿಳಿಸಿದರು.
ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿಡಾ. ಎಲ್. ಹೆಚ್. ಮಂಜುನಾಥ್, ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಸಮುದಾಯಅಭಿವೃದ್ಧಿ ವಿಭಾಗದಆನಂದ ಸುವರ್ಣ ಮತ್ತು ಮೂಡಬಿದ್ರೆಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಉಪಸ್ಥಿತರಿದ್ದರು.