ಜೆಎನ್‌ಯು ಗೋಡೆಗಳಲ್ಲಿ ಸಮಾಜ ವಿರೋಧಿ ಬರಹ: ಬ್ರಾಹ್ಮಣ ಮಹಾಸಂಘ ಖಂಡನೆ

Upayuktha
0

 





ನವದೆಹಲಿ: ಜೆಎನ್‌ಯು ಕ್ಯಾಂಪಸ್‌ನ ಗೋಡೆಗಳಲ್ಲಿ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆದ ಸಮಾಜವಿರೋಧಿ ಕೃತ್ಯವನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರವಾಗಿ ಖಂಡಿಸಿದೆ.



ದೆಹಲಿಯಲ್ಲಿ ಭಾನುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಅವರು ಈ ಸಂಬಂಧ ಹೇಳಿಕೆ ನೀಡಿ ಕೃತ್ಯವನ್ನು ಖಂಡಿಸಿದರು.



ಜೆಎನ್‌ಯು ಕ್ಯಾಂಪಸ್‌ನಲ್ಲಿ ದೇಶವಿರೋಧಿ ಮತ್ತು ಸಮಾಜವಿರೋಧಿ ಚಟುವಟಿಕೆಗಳು ಪದೇ ಪದೇ ನಡೆಯುತ್ತಿವೆ ಎಂಬುದು ಮುನ್ನೆಲೆಗೆ ಬಂದಿದೆ. ಒಂದೆರಡು ದಿನಗಳ ಹಿಂದೆ ಜೆಎನ್‌ಯು ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆಯಲಾಗಿತ್ತು. ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಇದನ್ನು ಖಂಡಿಸುತ್ತದೆ ಎಂದು ತಿಳಿಸಿದರು.



ಭಾರತದ ಸಂವಿಧಾನವು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕನ್ನು ನೀಡಿದೆ. ಆದರೆ ದೇಶದ ಕೆಲವು ಸಮಾಜವಿರೋಧಿಗಳು ದೇಶವನ್ನು ಹೇಗೆ ವಿಭಜಿಸುತ್ತಾರೆ, ದೇಶದಲ್ಲಿ ಜಾತಿವಾದ ಹೇಗೆ ಧ್ರುವೀಕರಣಗೊಳ್ಳುತ್ತದೆ ಮತ್ತು ಅದರಿಂದ ದೇಶಕ್ಕೆ ಹೇಗೆ ಹಾನಿಯಾಗುತ್ತಿದೆ ಎಂಬುದು ಸಮಾಜದ ಸಮಷ್ಟಿ ಹಿತವನ್ನು ಬಯಸುವವರಿಗೆ ಗೋಚರಿಸುತ್ತಿದೆ.

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top