ಉಜಿರೆ : ಎಸ್ ಡಿ ಎಂ ಕಾಲೇಜು ಉಜಿರೆಯಲ್ಲಿ ವಿದ್ಯಾರ್ಥಿ ಸಂಘದ ಚಟುವಟಿಕೆಗಳಿಗೆ ಚಾಲನೆ ನಾಯಕನಾದವನು ಎಲ್ಲರನ್ನೂ ಒಳಗೊಂಡು ಮುನ್ನೆಡೆಯಬೇಕು. ಇಂದಿನ ಯುಗ ಸ್ಮಾರ್ಟ್ ಯುಗವಾಗಿದ್ದು, ಹಾರ್ಡ್ ವರ್ಕ್ ಜೊತೆ ಸ್ಮಾರ್ಟ್ ವರ್ಕ್ ಮತ್ತು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಮುನ್ನಡೆಯಿರಿ ಎಂದು ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆ ಹೇಳಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು ತಮ್ಮ ಶೈಕ್ಷಣಿಕ ದಿನಗಳ ಅನುಭವವನ್ನು ನೆನಪಿಸಿಕೊಂಡು, ಸದಾಭಿರುಚಿಗಳನ್ನು ಶ್ರದ್ದೆಯಿಂದ ಪಾಲಿಸಿದರೆಯಶಸ್ಸು ಸಾಧ್ಯ. ಭವಿಷ್ಯದ ಹಾದಿಯಲ್ಲಿ ಶೈಕ್ಷಣಿಕ ವಲಯವನ್ನು ಕಡೆಗಣಿಸದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಉದ್ಘಾಟಕ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್ ಸತೀಶ್ಚಂದ್ರ ಮಾತನಾಡಿ ವಿಭಿನ್ನ ಯೋಚನಾ ಶಕ್ತಿಯಿಂದ ಮಾತ್ರ ಸೃಜನಶೀಲ ಕೆಲಸಗಳನ್ನು ಮಾಡಲು ಸಾಧ್ಯ. ಉತ್ತಮ ಜೀವನ ನಡೆಸಲು ಜೀವನ ಪ್ರೀತಿ ಅತ್ಯಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ ಜಯಕುಮಾರ್ ಶೆಟ್ಟಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರತಿನಿಧಿಗಳಿಗೆ ಹೂ ನೀಡುವ ಮೂಲಕ ಅಭಿನಂದಿಸಲಾಯಿತು. ಪತ್ರಿಕೋದ್ಯಮ ವಿಭಾಗದಿಂದ ಮೂಡಿಬಂದ ಚಿಗುರು ಪ್ರಾಯೋಗಿಕ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಕುರಿತಾಗಿ ಅಂತಿಮ ಪತ್ರಿಕೋದ್ಯಮ ವಿಧ್ಯಾರ್ಥಿಗಳು ರೂಪಿಸಿದ ಫೋಟೋ ಜರ್ನಲ್ ಅತಿಥಿಗಳ ಗಮನ ಸೆಳೆಯಿತು.
ಅರ್ಥಶಾಸ್ತ್ರ ಉಪನ್ಯಾಸಕ ಮಹೇಶ್ ಶೆಟ್ಟಿ ಸ್ವಾಗತಿಸಿ, ವಿಧ್ಯಾರ್ಥಿನಿ ರಾಜೇಶ್ವರಿ ನೇಜಿಕಾರ್ ವಂದಿಸಿದರು. ಶ್ರವಣ್, ಮಹಿಮಾ , ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.