ಮೂಡುಬಿದಿರೆ: ಜಾಂಬೂರಿಗೆ ತಮಿಳುನಾಡು ಶಿಕ್ಷಣ ಸಚಿವರ ಭೇಟಿ

Upayuktha
0

ಮೂಡುಬಿದಿರೆ : ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಕೌಟ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯ ಭಾಗವಾಗಿ ಪ್ಯಾಲೇಸ್ ಗ್ರೌಂಡ್‍ನಲ್ಲಿ ನಡೆದ ತಮಿಳುನಾಡು ದಿನ ಕಾರ್ಯಕ್ರಮದಲ್ಲಿ ಅಲ್ಲಿನ ಶಿಕ್ಷಣ ಸಚಿವ, ರಾಜ್ಯ ಸ್ಕೌಟ್ ಗೈಡ್ಸ್ ಅಧ್ಯಕ್ಷ ಅನ್ಬಿಲ್ ಮಹೇಶ್ ಪೊಯ್ಯಮೊಜಿ ಭೇಟಿ ನೀಡಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.


ಬಳಿಕ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಪ್ರಾದೇಶಿಕ, ರಾಜ್ಯ, ರಾಷ್ಟ್ರಮಟ್ಟದ ಜಾಂಬೂರಿಗಳನ್ನೂ ಕೂಡ ಆಯೋಜಿಸುತ್ತಿದ್ದೇವೆ. ಜಾಂಬೂರಿಯಿಂದ ಪ್ರಾದೇಶಿಕ ಸಂಸ್ಕೃತಿ, ಪರಂಪರೆಯ ವಿನಿಮಯವಾಗುತ್ತದೆ. ವಿದ್ಯಾರ್ಥಿಗಳು ಜಾಂಬೂರಿಯಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ಇತರ ಜಿಲ್ಲೆ, ರಾಜ್ಯ, ರಾಷ್ಟ್ರಗಳ ಸಂಸ್ಕೃತಿಯನ್ನು ಅರಿಯಬೇಕು. ತಮಿಳುನಾಡಿನಲ್ಲಿ ಈಗ ಮೂರುವರೆ ಲಕ್ಷ ಸ್ಕೌಟ್‍ ಗೈಡ್ಸ್ ನ ವಿದ್ಯಾರ್ಥಿಗಳಿದ್ದಾರೆ. ಅದನ್ನು ಹತ್ತು ಲಕ್ಷದವೆರೆಗೆ ಹೆಚ್ಚಿಸುವ ಗುರಿ ನಮ್ಮದು. ಸ್ಕೌಟ್‍ಗೈಡ್ಸ್ ಚಟುವಟಿಕೆಗೆ ಹೆಚ್ಚಿನ ಅನುದಾನ ಒದಗಿಸುವಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂದರ್ಭ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಜಾಂಬೂರಿ ವ್ಯವಸ್ಥೆಯ ಬಗ್ಗೆ ಪ್ರಶಂಸಿದರು.


ಸ್ಕೌಟ್ ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಆರ್.ಸಿಂದಿಯಾ ಅವರು ಅನ್ಬಿಲ್ ಮಹೇಶ್ ಪೊಯ್ಯಮೊಜಿ ಅವರನ್ನು ಸನ್ಮಾನಿಸಿದರು. ಸ್ಕೌಟ್ ಗೈಡ್ಸ್ ನ ತಮಿಳುನಾಡು ರಾಜ್ಯ ಮುಖ್ಯ ಆಯುಕ್ತ ನಂದ ಕುಮಾರ್ ಸಹಿತ ಸ್ಕೌಟ್‍ ಗೈಡ್ಸ್ ನ ತಮಿಳುನಾಡು, ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top