ವಿವೇಕಾನಂದ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

Upayuktha
0


ಪುತ್ತೂರು : ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು  ಚಲಾಯಿಸುವ ಸಂದರ್ಭ ತುಂಬಾ ಜಾಗರೂಕತೆಯಿಂದ ಚಲಾಯಿಸಬೇಕು. ನಮ್ಮ ಸುರಕ್ಷತೆಗಾಗಿಯೇ ಪೊಲೀಸ್ ಇಲಾಖೆ ಅನೇಕ ಕಾನೂನು ಹಾಗೂ ನಿಯಮಗಳನ್ನು ಜಾರಿಗೆ ತಂದಿವೆ. ಹಾಗಾಗಿ ಯುವಜನತೆ ಅಪಘಾತಗಳನ್ನು ತಪ್ಪಿಸಲು ಇಲಾಖೆಗಳು ಹೊರಡಿಸುವ ಕಾನೂನುಗಳಿಗೆ ಗೌರವ ನೀಡಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಪುತ್ತೂರಿನ ಸಂಚಾರಿ ಪೊಲೀಸ್‍ ಠಾಣೆಯ ಎಎಸ್‍ಐ ರಾಧಾಕೃಷ್ಣ ನಾಯಕ್ ಹೇಳಿದರು


ಇವರು ಇಲ್ಲಿನ ವಿವೇಕಾನಂದ ಪದವಿ ಕಾಲೇಜು(ಸ್ವಾಯತ್ತ), ರೆಡ್‍ಕ್ರಾಸ್ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್‍ಠಾಣೆಯ ಹೆಡ್‍ಕಾನ್ ಸ್ಟೇಬಲ್ ವಿನಯ್‍ಕುಮಾರ್ ಹಾಗೂ ಹೆಡ್‍ಕಾನ್‍ಸ್ಟೇಬಲ್ ವೆಂಕಪ್ಪ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮಾತನಾಡಿ,  ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ದ್ವಿಚಕ್ರ ವಾಹನದಲ್ಲಿ ಬರುವಂತಹ ಅನಿವಾರ್ಯತೆ ಇರುವಾಗ ಸಂಚಾರಿ ನಿಯಮಗಳಿಗೂ ಕೂಡಾ ಬದ್ದರಾಗಿರಬೇಕು.ಏಕೆಂದರೆ ಅಪಘಾತಗಳು ನಮ್ಮ ಮುಂದಿನ ಸುಂದರ ಭವಿಷ್ಯವನ್ನು ಕಸಿದುಕೊಳ್ಳಬಹುದು ಹಾಗಾಗಿ ವಾಹನ ಚಲಾಯಿಸುವ ಸಂದರ್ಭ ನಮ್ಮ ಹೆತ್ತವರ ಬಗೆಗೂ ಯೋಚಿಸಬೇಕುಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.


ವೇದಿಕೆಯಲ್ಲಿ ಪುತ್ತೂರಿನ ಸಂಚಾರಿ ಠಾಣೆಯ ಪೊಲೀಸ್ ವನಜಾ, ಕಾನ್‍ಸ್ಟೇಬಲ್ ವಿನೋದ್ ಹಾಗೂ ಕಾಲೇಜಿನ ಯೂತ್‍ ರೆಡ್‍ಕ್ರಾಸ್‍ ಯೋಜನೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ರೆಡ್‍ಕ್ರಾಸ್‍ ಯೋಜನೆಯ ಅಧಿಕಾರಿಡಾ.ಅರುಣ್ ಪ್ರಕಾಶ್ ಪ್ರಾಸ್ತಾವಿಸಿ, ವಿದ್ಯಾರ್ಥಿ ಪವನ್ ಕೃಷ್ಣ ಸ್ವಾಗತಿಸಿದರು. ಪ್ರಜ್ಞಾ ಪರಮೇಶ್ವರಿ ವಂದಿಸಿ, ಆದಿತ್ಯ ನಾರಾಯಣ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top